ಇಂಗ್ಲೆಂಡ್ vs ದ.ಆಫ್ರಿಕಾ: ಇಂಗ್ಲೆಂಡ್ ತಂಡ, ಸಂಪೂರ್ಣ ವೇಳಾಪಟ್ಟಿ

ಲಂಡನ್: ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡಗಳು ಪ್ರಕಟಗೊಂಡಿವೆ. ವೇಗಿ ಜೋಫ್ರಾ ಅರ್ಚರ್, ಆಲರ್ ರೌಂಡರ್ಸ್ ಸ್ಯಾಮ್ ಕರನ್, ಬೆನ್ ಸ್ಟೋಕ್ಸ್ ಅವರಿಗೆ ಟಿ20ಐ ತಂಡದಲ್ಲಿ ಸ್ಥಾನ ನೀಡದೆ ವಿಶ್ರಾಂತಿ ನೀಡಲಾಗಿದೆ. ಮೂವರೂ ಇಂಗ್ಲೆಂಡ್ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ ಆತಿಥೇಯರ ವಿರುದ್ಧ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಲಿದೆ.
ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ ಪ್ರವಾಸ ಸರಣಿ ನವೆಂಬರ್ 27ರಿಂದ ಟಿ20ಐ ಸರಣಿಯೊಂದಿಗೆ ಆರಂಭಗೊಳ್ಳಲಿದೆ. ಸರಣಿ ಕೊನೆಗೊಳ್ಳೋದು ಡಿಸೆಂಬರ್ 9ರಂದು. ವೀಕ್ಷಕರಿಲ್ಲದ ಮೈದಾನಗಳಲ್ಲಿ ಸರಣಿಯ ಪಂದ್ಯಗಳು ನಡೆಯಲಿವೆ.
ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಯ ವೇಳಾಪಟ್ಟಿ, ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಘೋಷಿಸಿರುವ ತಂಡಗಳು ಕೆಳಗಿವೆ.

ಇಂಗ್ಲೆಂಡ್ ಏಕದಿನ ತಂಡ
ಇಯಾನ್ ಮಾರ್ಗನ್ (ಸಿ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆ), ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಸ್ಯಾಮ್ ಕರನ್, ಟಾಮ್ ಕರನ್, ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ರೀಸ್ ಟಾಪ್ಲಿ, ಮಾರ್ಕ್ ವುಡ್, ಆದಿಲ್ ರಶೀದ್.

ಇಂಗ್ಲೆಂಡ್ ಟಿ20ಐ ತಂಡ
ಇಯಾನ್ ಮಾರ್ಗನ್ (ಸಿ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆ), ಮೊಯೀನ್ ಅಲಿ, ಲೆವಿಸ್ ಗ್ರೆಗೊರಿ, ಟಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ರೀಸ್ ಟಾಪ್ಲಿ, ಆಲಿ ಸ್ಟೋನ್, ಮಾರ್ಕ್ ವುಡ್.

ಮೀಸಲು ಆಟಗಾರರು
ಇಂಗ್ಲೆಂಡ್ ಏಕದಿನ ಮತ್ತು ಟಿ20ಐ ಎರಡೂ ತಂಡಗಳಿಗೂ ಮೀಸಲು ಆಟಗಾರರಾಗಿ ಜೇಕ್ ಬಾಲ್, ಟಾಮ್ ಬ್ಯಾಂಟನ್, ಟಾಮ್ ಹೆಲ್ಮ್ ಅವರನ್ನು ಹೆಸರಿಸಲಾಗಿದೆ. ಕೇಪ್‌ಟೌನ್ ಮತ್ತು ಪಾರ್ಲ್ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ.

ಸರಣಿಯ ವೇಳಾಪಟ್ಟಿ
* 1ನೇ ಟಿ20ಐ ಪಂದ್ಯ, ನವೆಂಬರ್ 27, ಶುಕ್ರವಾರ, 9.30 pm, ನ್ಯೂಲ್ಯಾಂಡ್ಸ್, ಕೇಪ್ ಟೌನ್
* 2ನೇ ಟಿ20ಐ ಪಂದ್ಯ, ನವೆಂಬರ್ 29, ಭಾನುವಾರ, 6 pm, ಬೋಲ್ಯಾಂಡ್ ಪಾರ್ಕ್, ಪಾರ್ಲ್
* 3ನೇ ಟಿ20ಐ ಪಂದ್ಯ, ಡಿಸೆಂಬರ್ 1, ಮಂಗಳವಾರ, 9.30 pm, ನ್ಯೂಲ್ಯಾಂಡ್ಸ್, ಕೇಪ್ ಟೌನ್,
* 1ನೇ ಏಕದಿನ ಪಂದ್ಯ, ಡಿಸೆಂಬರ್ 4, ಶುಕ್ರವಾರ, 4.30 pm, ನ್ಯೂಲ್ಯಾಂಡ್ಸ್, ಕೇಪ್ ಟೌನ್
* 2ನೇ ಏಕದಿನ ಪಂದ್ಯ, ಡಿಸೆಂಬರ್ 6, ಭಾನುವಾರ, 1.30 pm, ಬೋಲ್ಯಾಂಡ್ ಪಾರ್ಕ್, ಪಾರ್ಲ್
* 3ನೇ ಏಕದಿನ ಪಂದ್ಯ, ಡಿಸೆಂಬರ್ 9, ಬುಧವಾರ, 4.30 pm, ನ್ಯೂಲ್ಯಾಂಡ್ಸ್, ಕೇಪ್ ಟೌನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications