Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಇಂಗ್ಲೆಂಡ್‌

England vs South Africa, Match 1 - Live Cricket Score

ಲಂಡನ್, ಮೇ 30: ಐಸಿಸಿ ಏಕದಿನ ಕ್ರಿಕೆಟ್‌ ಟೂರ್ನಿಯ 12ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 104 ರನ್‌ಗಳಿಂದ ಗೆದ್ದು ಶುಭಾರಂಭ ಮಾಡಿದೆ.

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಮೇ 30, ಕ್ರಿಕೆಟ್ ವಿಶ್ವಕಪ್ Live ಸ್ಕೋರ್‌ಕಾರ್ಡ್

1
43644

ಪಂದ್ಯದ ಮೊದಲ ಓವರ್‌ನಲ್ಲೇ ಜಾನಿ ಬೈರ್‌ಸ್ಟೋವ್‌ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದ ಇಗ್ಲೆಂಡ್‌ಗೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜೇಸನ್‌ ರಾಯ್‌ (54), ಜೋ ರೂಟ್‌ (51) ಮತ್ತು ನಾಯಕ ಐಯಾನ್‌ ಮಾರ್ಗನ್‌ (57) ಅರ್ಧಶತಕಗಳನ್ನು ಸಿಡಿಸಿ ಚೇತರಿಕೆ ನೀಡಿದರು. ಬಳಿಕ ಬಂದ ಬೆನ್‌ ಸ್ಟೋಕ್ಸ್‌ ಕೂಡ ಅರ್ಧಶತಕ ದಾಖಲಿಸಿ ಅಬ್ಬರಿಸಿದ್ದು, ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 311 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸತತವಾಗಿ ವಿಕೆಟ್‌ ಕೈಚೆಲ್ಲಿದರ ಪರಿಣಾಮ 39.5 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿತು. ಹರಿಣ ಪಡೆಯ ಪರ ಕ್ರಿಂಟನ್‌ ಡಿ'ಕಾಕ್‌ (68) ಮತ್ತು ವ್ಯಾನ್‌ ಡೆರ್‌ ಡುಸಾನ್‌ (50) ಅರ್ಧಶತಕ ದಾಖಲಿಸಿ ಹೋರಾಟ ನಡೆಸಿದರಾದರೂ ಪ್ರಯೋಜನವಾಗಲಿಲ್ಲ.

ಇಂಗ್ಲೆಂಡ್‌ ಪರ ಮ್ಯಾಚ್‌ ವಿನ್ನರ್‌ ಎನಿಸಿದ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌ 27ಕ್ಕೆ 3 ವಿಕೆಟ್‌ ಪಡೆದರೆ, ಲಿಯಾಮ್‌ ಪ್ಲಂಕೆಟ್‌ 31ಕ್ಕೆ 2 ವಿಕೆಟ್‌ ಉರುಳಿಸಿದರು.

ಮೊದಲ ಓವರ್‌ನಲ್ಲೇ ವಿಕೆಟ್‌ ಪಡೆದ ಸ್ಪಿನ್ನರ್‌

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು. ಮೊದಲ ಓವರ್‌ನಲ್ಲೇ ಇಮ್ರಾನ್ ತಾಹಿರ್ ಎಸೆತಕ್ಕೆ ಇಂಗ್ಲೆಂಡ್ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್‌ ಡಕ್‌ (೦) ಡಕ್‌ಔಟ್‌ ಆದರು. ಇದು ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಸ್ಪಿನ್ನರ್‌ ಮೊದಲ ಓವರ್‌ ಎಸೆದು ವಿಕೆಟ್‌ ಪಡೆದ ದಾಖಲೆಯಾಗಿದೆ.

ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್‌, ಜೋ ರೂಟ್, ಐಯಾನ್ ಮಾರ್ಗನ್ (ಸಿ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೀ), ಮೊಯೀನ್‌ ಅಲಿ, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್‌, ಜೋಫ್ರಾ ಆರ್ಚರ್, ಆದಿಲ್ ರಶೀದ್.

ದಕ್ಷಿಣ ಆಫ್ರಿಕಾ ತಂಡ: ಹಶೀಮ್ ಅಮ್ಲಾ, ಕ್ವಿಂಟನ್ ಡಿ ಕಾಕ್ (ವಿಕೀ), ಏಡನ್ ಮಾರ್ಕ್ರಮ್‌, ಫಾಫ್ ಡು'ಪ್ಲೆಸಿಸ್ (ಸಿ), ರಾಸ್ಸಿ ವಾನ್ ಡೆರ್ ಡುಸೆನ್, ಜೀನ್-ಪಾಲ್ ಡುಮಿನಿ, ಆಂಡಿಲ್‌ ಫೆಹ್ಲುಕ್ವಾಯೊ, ಡ್ವೇನ್‌ ಪ್ರಿಟೋರಿಯಸ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಇಮ್ರಾನ್ ತಾಹಿರ್.

{headtohead_cricket_6_2}

Story first published: Thursday, May 30, 2019, 22:29 [IST]
Other articles published on May 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+