ಸ್ಯಾಮ್ ಕರನ್ ಮಾರಕ ಬೌಲಿಂಗ್, ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್

ಲಂಡನ್: ಲಂಡನ್‌ನ ಕಿನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ-ಇಂಗ್ಲೆಂಡ್ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 8 ವಿಕೆಟ್ ಸುಲಭ ಜಯ ಗಳಿಸಿದೆ. ಸ್ಯಾಮ್ ಕರನ್ ಮಾರಕ ಬೌಲಿಂಗ್, ಜೇಸನ್ ರಾಯ್, ಜೋ ರೂಟ್, ಇಯಾನ್ ಮಾರ್ಗನ್ ಭರ್ಜರಿ ಬ್ಯಾಟಿಂಗ್‌ನೊಂದಿಗೆ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಶವಾಗಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ, ಧನಂಜಯ ಡಿ ಸಿಲ್ವಾ 91, ವನಿಂದು ಹಸರಂಗ 26, ದಾಸುನ್ ಶನಕ 47, ಚಮಿಕ ಕರುಣರತ್ನೆ 21, ಬಿನುರ ಫೆರ್ನಾಂಡೊ 17, ದುಶ್ಮಂತ ಚಮೀರ 14, ಪಾತುಮ್ ಸಿಸ್ಸಂಕ 5 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 241 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೇಸನ್ ರಾಯ್ 60, ಜಾನಿ ಬೇರ್ಸ್ಟೋವ್ 29, ಜೋ ರೂಟ್ 68, ಇಯಾನ್ ಮಾರ್ಗನ್ 75 ರನ್‌ನೊಂದಿಗೆ 43 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 244 ರನ್ ಗಳಿಸಿತು. ಇಂಗ್ಲೆಂಡ್ ಯುವ ಆಲ್ ರೌಂಡರ್ ಸ್ಯಾಮ್ ಕರನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರನ್ 48 ರನ್‌ಗೆ 5, ಡೇವಿಡ್ ವಿಲ್ಲೆ 64 ರನ್‌ಗೆ 4 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ವನಿಂದು ಹಸರಂಗ 1, ಚಮಿಕ ಕರುಣರತ್ನೆ 1 ವಿಕೆಟ್ ಪಡೆದರು. ಇತ್ತಂಡಗಳ 3ನೇ ಏಕದಿನ ಪಂದ್ಯ ಜುಲೈ 4ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications