ಇಂಗ್ಲೆಂಡ್ vs ಶ್ರೀಲಂಕಾ, ಏಕದಿನ ಸರಣಿ, 3ನೇ ಪಂದ್ಯ: Live ಸ್ಕೋರ್

ಬ್ರಿಸ್ಟೋಲ್, ಜುಲೈ 4: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಮೂರನೇ ಏಕದಿನ ಪಂದ್ಯದಲ್ಲಿ ಸೆಣೆಸಾಟವನ್ನು ನಡೆಸುತ್ತಿದೆ. ಈ ಮೂಲಕ ಇಂಗ್ಲೆಂಡ್ ಪ್ರವಾಸದ ಅಂತಿಮ ಪಂದ್ಯವನ್ನು ಶ್ರೀಲಂಕಾ ತಂಡ ಆಡುತ್ತಿದೆ. ಟಾಸ್ ಸೋತಿರುವ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಮಾಡಲು ಇಳಿದಿದೆ.
ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಇಂಗ್ಲೆಂಡ್‌ಗೆ ಶರಣಾಗಿತ್ತು. ಈ ಮೂಲಕ ಲಂಕಾ ಈಗಾಗಲೇ ಸರಣಿಯನ್ನು ಇಂಗ್ಲೆಂಡ್ ಕೈಗೊಪ್ಪಿಸಿದೆ. ಆದರೆ ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
Live ಸ್ಕೋರ್ ಮಾಹಿತಿ ಇಲ್ಲಿದೆ:
ಈಗಾಗಲೇ ಶ್ರೀಲಂಕಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡು ಹಿನ್ನಡೆಯನ್ನು ಅನುಭವಿಸಿದೆ. ಈಗ ಏಕದಿನ ಸರಣಿಯಲ್ಲಿಯೂ ಅದೇ ಆತಂಕ ಲಂಕಾ ಕ್ರಿಕೆಟ್ ತಂಡಕ್ಕೆ ಕಾಡುತ್ತಿದೆ. ಇದಕ್ಕೂ ಮುನ್ನ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಹೀನಾಯ ಸೋಲು ಕಂಡು ಮುಖಭಂಗಕ್ಕೆ ಈಡಾಗಿತ್ತು.
ಶ್ರಿಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕಾ, ಕುಸಲ್ ಪೆರೆರಾ (ವಿಕೆಟ್ ಕೀಪರ್ ಹಾಗೂ ನಾಯಕ), ಅವಿಷ್ಕಾ ಫರ್ನಾಂಡೊ, ಓಷಾದಾ ಫರ್ನಾಂಡೊ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ದಾಸುನ್ ಶಾನಕಾ, ಚಮಿಕಾ ಕರುಣರತ್ನೆ, ಬಿನುರಾ ಫರ್ನಾಂಡೊ, ದುಷ್ಮಂತ ಚಮೀರಾ, ಅಸಿಥಾ ಫರ್ನಾಂಡೊ
ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೋ ರೂಟ್, ಇಯೊನ್ ಮಾರ್ಗನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಟಾಮ್ ಕರನ್, ಆದಿಲ್ ರಶೀದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications