ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲಿ ನಡೆಯಲ್ವ ರೋಹಿತ್ ಆಟ? ; ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ

 England will be very challenging for Rohit Sharma says Saba Karim

ಐಪಿಎಲ್ ಅರ್ಧಕ್ಕೆ ನಿಂತ ಬಳಿಕ ಇದೀಗ ಎಲ್ಲರ ಚಿತ್ತ ಜೂನ್ 18ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ. ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ನೆಲದಲ್ಲಿಯೇ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಕೂಡ ಇದೆ. ಐಪಿಎಲ್ ಟೂರ್ನಿಗೂ ಮುನ್ನ ಭಾರತಕ್ಕೆ ಬಂದು ಸೋಲನ್ನುಂಡಿದ್ದ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.

ಭಾರತದ ಪಿಚ್‌ಗಳಿಗೂ ಇಂಗ್ಲೆಂಡ್ ಪಿಚ್‌ಗಳಿಗೂ ಅಪಾರವಾದ ವ್ಯತ್ಯಾಸಗಳಿರುವುದರಿಂದ ಭಾರತೀಯ ಆಟಗಾರರು ಇಂಗ್ಲೆಂಡ್ ಪಿಚ್‌ಗಳಲ್ಲಿ ಯಾವ ರೀತಿ ಆಡುತ್ತಾರೆ ಎಂಬ ಚರ್ಚೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಮಾಜಿ ಕ್ರಿಕೆಟಿಗ ಸಬಾ ಕರೀಮ್ ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಆಟಗಾರ ರೋಹಿತ್ ಶರ್ಮಾ ಯಾವ ರೀತಿಯ ಪ್ರದರ್ಶನವನ್ನು ನೀಡುತ್ತಾರೆ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಇದುವರೆಗೂ ಇಂಗ್ಲೆಂಡ್ ನೆಲದಲ್ಲಿ ಆಡಿರುವುದು ಕೇವಲ ಒಂದೇ ಒಂದು ಟೆಸ್ಟ್ ಪಂದ್ಯ. ಇಂಗ್ಲೆಂಡ್‌ನಲ್ಲಿ ಒಟ್ಟು 2 ಇನ್ನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಗಳಿಸಿರುವುದು 34 ರನ್ ಮಾತ್ರ.

ಹೀಗೆ ಇಂಗ್ಲೆಂಡ್ ನೆಲದಲ್ಲಿ ಹೆಚ್ಚು ಅನುಭವವಿಲ್ಲದ ರೋಹಿತ್ ಶರ್ಮಾಗೆ ಇಂಗ್ಲೆಂಡ್ ಪ್ರವಾಸ ಖಂಡಿತವಾಗಿಯೂ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ, ದಿನವಿಡೀ ಬಾಲ್ ಚಲನೆ ಇರುತ್ತದೆ ಮತ್ತು ಡ್ಯೂಕ್ ಬಾಲ್‌ನಲ್ಲಿ ಪಂದ್ಯಗಳು ನಡೆಯುವುದರಿಂದ ಶರ್ಮಾಗೆ ತೀರಾ ಕಷ್ಟವಾಗಬಹುದು ಎಂದು ಸಬಾ ಕರೀಮ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ಆದರೆ ರೋಹಿತ್ ಶರ್ಮಾ ಆಟದ ಮೇಲೆ ನನಗೆ ನಂಬಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಶರ್ಮಾ ಪಾತ್ರ ಬಹಳಷ್ಟು ಬದಲಾಗಿದೆ, ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ರೋಹಿತ್ ಶರ್ಮಾಗೆ ಉತ್ತಮ ಆರಂಭ ನೀಡಿ, ತಂಡಕ್ಕೆ ಒಂದೊಳ್ಳೆ ಇನ್ನಿಂಗ್ಸ್ ಕಟ್ಟಿಕೊಡಬೇಕಾದ ಜವಾಬ್ದಾರಿ ಇದ್ದು ಉತ್ತಮ ಪ್ರದರ್ಶನ ನೀಡಲಿದ್ದಾರೆ' ಎಂದು ಸಬಾ ಕರೀಮ್ ರೋಹಿತ್ ಶರ್ಮಾ ಆಟದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Story first published: Thursday, May 13, 2021, 18:18 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X