For Quick Alerts
ALLOW NOTIFICATIONS  
For Daily Alerts
 

IND vs AUS: ಕಿವೀಸ್ ನೆಲದಲ್ಲಿ 16 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಟೆಸ್ಟ್ ಸರಣಿ ಗೆಲುವು

ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ 16 ವರ್ಷಗಳ ನಂತರ ನ್ಯೂಜಿಲೆಂಡ್‌ ನೆಲದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಬೇಸಿನ್ ರಿಸರ್ವ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೂರನೇ ದಿನದಂದು ಆತಿಥೇಯ ನ್ಯೂಜಿಲೆಂಡ್‌ ಅನ್ನು 323 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. 2008ರಲ್ಲಿ ಇಂಗ್ಲೆಂಡ್ ಕೊನೆಯ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 280 ರನ್ ಗಳಿಸಿತು. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಹ್ಯಾರಿಸ್ ಬ್ರೂಕ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇದಕ್ಕೆ ಪ್ರತಿಯಾಗಿ ಇನ್ನಿಂಗ್ಸ್ ಶುರು ಮಾಡಿದ ನ್ಯೂಜಿಲೆಂಡ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಕೇವಲ 125 ರನ್‌ಗಳಿಗೆ ಕಿವೀಸ್ ಪಡೆ ಸರ್ವಪತನವಾಯಿತು. ಗಸ್ ಆಟ್ಕಿನ್ಸನ್ ಮತ್ತು ಬ್ರೈಡನ್ ಕಾರ್ಸೆ ತಲಾ 4 ವಿಕೆಟ್ ಪಡೆದು ಸಂಭ್ರಮಿಸಿದರು.

England win Test series on New Zealand soil after 16 years

ಮೊದಲ ಇನ್ನಿಂಗ್ಸ್‌ನಿಂದ 155 ರನ್‌​ಗಳ ಮುನ್ನಡೆ ಪಡೆದಿದ್ದ ಇಂಗ್ಲೆಂಡ್​, ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಆಟವಾಡಿತು. 6 ವಿಕೆಟ್ ನಷ್ಟಕ್ಕೆ 427 ರನ್ ಗಳಿಸಿದ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿತು. ಒಟ್ಟು 533 ರನ್‌ಗಳ ಗುರಿ ಪಡೆದ ಕಿವೀಸ್ 259 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ 323 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಜೋ ರೂಟ್ ರೆಕಾರ್ಡ್

ನ್ಯೂಜಿಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರಗ ಜೋ ರೂಟ್ ಮತ್ತೊಂದು ದಾಖಲೆ ಮಾಡಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದ 36ನೇ ​ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ. ಈವೆರಗೆ 151 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 276 ಇನ್ನಿಂಗ್ಸ್‌ಗಳಲ್ಲಿ 50.93ರ ಸರಾಸರಿಯಲ್ಲಿ 12886ರನ್ ಗಳಿಸಿದ್ದಾರೆ. ಈ ಮೂಲಕ ಭಾರತದ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಹುಲ್ ದ್ರಾವಿಡ್​ ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ 164 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 286 ಇನ್ನಿಂಗ್ಸ್‌ಗಳಲ್ಲಿ 52.31ರ ಸರಾಸರಿಯಲ್ಲಿ 13288 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕ ಮತ್ತು 63 ಅರ್ಧ ಶತಕಗಳು ಸೇರಿವೆ.

Story first published: Sunday, December 8, 2024, 22:00 [IST]
Other articles published on Dec 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+