ಸೋಷಿಯಲ್ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್ ಆಟಗಾರ್ತಿ!

ಲಂಡನ್, ಆಗಸ್ಟ್ 16: ಇಂಗ್ಲೆಂಡ್ ತಂಡದ ಅನುಭವಿ ವಿಕೆಟ್‌ಕೀಪಿಂಗ್ ಬ್ಯಾಟರ್ ಸಾರಾ ಟೇಲರ್, ತಮ್ಮ ಅಮೋಘ ವಿಕೆಟ್‌ಕೀಪಿಂಗ್ ಸಾಮರ್ಥ್ಯ ಮತ್ತು ಪ್ರಭಾವಯುತ ಬ್ಯಾಟಿಂಗ್ ಮೂಲಕವೇ ಹಸರು ಗಿಟ್ಟಿಸಿದವರು.
30 ವರ್ಷದ ಅನುಭವಿ ಆಟಗಾರ್ತಿ ಟೇಲರ್ ಇತ್ತೀಚೆಗಷ್ಟೇ ಮಾನಸಿಕ ಗೊಂದಲದಿಂದ ಬಳಲುತ್ತಿರುವುದಾಗಿ ಹೇಳಿ ಇಂಗ್ಲೆಂಡ್ ತಂಡದಿಂದ ಆಷಸ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಗ್ನ ಫೋಟೊ ಒಂದನ್ನು ಪ್ರಕಟಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಅತಿಯಾದ ಆತಂಕತ ಸಮಸ್ಯೆಯಿಂದ ಬಳಲಿದ್ದ ಸಾರಾ, ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಿಂದಲೂ ಹೊರಗುಳಿದಿದ್ದರು. ಆದರೀಗ ಅವರು ಚೇತರಿಸಿದ್ದು, ಸರ್ರೇ ಸ್ಟಾರ್ಸ್ ತಂಡದ ಪರ ಆಡಲು ಆರಂಭಿಸಿದ್ದಾರೆ.
ಸಾರಾ, ಆಗಸ್ಟ್ 14ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ನಗ್ನ ಫೋಟೊ ಪ್ರಕಟಿಸಿದ್ದಾರೆ. ವಿಕೆಟ್‌ಕೀಪಿಂಗ್ ಮಾಡುತ್ತಿರುವಂತೆ ಸ್ಟಂಪ್ಸ್ ಮೇಲಿನ ಬೇಲ್ಸ್ ಎಗರಿಸಿರುವ ಸಾರಾ ಸಂಪೂರ್ಣ ನಗ್ನವಾಗಿ ಈ ಪೋಸ್ ನೀಡಿದ್ದಾರೆ. ಇದು ತಮ್ಮ ಸಹನೆಗೆ ಮೀರಿದ್ದಾಗಿದ್ದರೂ ಕೂಡ ಒಂದು ಉದ್ದೇಶ ಸಲುವಾಗಿ ಈ ರೀತಿ ಮಾಡಿರುವುದಾಗಿ ಫೋಟೊ ಜೊತೆಗಿನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವಿಮೆನ್ಸ್ ಹೆಲ್ತ್ ಯುಕೆಯ ಅಭಿಯಾನದಲ್ಲಿ ಪಾಲ್ಗೊಂಡಿರುವ ಮಹಿಳಾ ಕ್ರಿಕೆಟರ್, "ನಗ್ನವಾಗಿ ಕಾಣಿಸಿಕೊಳ್ಳುವುದು ನನ್ನ ಸಹನೆಗೆ ಮೀರಿದ್ದು, ಎಂಬುದನ್ನು ನನ್ನನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ. ಆದರೆ, ಮಹಿಳೆಯರ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿದಲು ಇಂಥದ್ದೊಂದು ಅಭಿಯಾನಕ್ಕೆ ಆಹ್ವಾನಿಸಿದ @womenshealthukಗೆ ಧನ್ಯವಾದಗಳು. ಪ್ರತಿಯೊಬ್ಬ ಮಹಿಳೆಯೂ ಅದ್ಭುತ!," ಎಂದು ಸಾರಾ ಬರೆದುಕೊಂಡಿದ್ದಾರೆ.
View this post on InstagramA post shared by Sarah Taylor (@sjtaylor30) on

ಸಾರಾ ಕ್ರಿಕೆಟ್ ಸಾಧನೆ
ಇಂಗ್ಲೆಂಡ್ ಮಹಿಳಾ ತಂಡದ ಪರ 126 ಏಕದಿನ ಪಂದ್ಯಗಳನ್ನಾಡಿರುವ ಸಾರಾ, 38.26ರ ಸರಾಸರಿಯಲ್ಲಿ 4056 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 20 ಅರ್ಧಶತಕಗಳು ಸೇರಿವೆ. ಜೊತೆಗೆ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ 300 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 90 ಪಂದ್ಯಗಳನ್ನಾಡಿ 2177 ರನ್‌ಗಳನ್ನು ಚೆಚ್ಚಿದ್ದಾರೆ. ವಿಕೆಟ್ ಹಿಂಬದಿಯಲ್ಲೂ ಮಿಂಚಿರುವ ಅವರು, ಏಕದಿನ ಮತ್ತು ಟಿ20ಯಲ್ಲಿ ತಲಾ 51 ಸ್ಟಂಪಿಂಗ್ ಮಾಡಿದ್ದಾರೆ.

ಟೆಸ್ಟ್ ಅಂಕಿ ಅಂಶ
10 ಪಂದ್ಯ
300 ರನ್
40 ಗರಿಷ್ಠ
18.75 ಸರಾಸರಿ
49.58 ಸ್ಟ್ರೈಕ್‌ರೇಟ್
18 ಕ್ಯಾಚ್
02 ಸ್ಟಂಪ್

ಏಕದಿನ ಕ್ರಿಕೆಟ್
126 ಪಂದ್ಯ
4056 ರನ್
147 ಗರಿಷ್ಠ
38.26 ಸರಾಸರಿ
82.32 ಸ್ಟ್ರೈಕ್‌ರೇಟ್
07 ಶತಕ
20 ಅರ್ಧಶತಕ
87 ಕ್ಯಾಚ್
51 ಸ್ಟಂಪಿಂಗ್

ಟಿ20-ಐ ಕ್ರಿಕೆಟ್
90 ಪಂದ್ಯ
2177 ರನ್
77 ಗರಿಷ್ಠ
29.02 ಸರಾಸರಿ
110.67 ಸ್ಟ್ರೈಕ್‌ರೇಟ್
16 ಅರ್ಧಶತಕ
23 ಕ್ಯಾಚ್
51 ಸ್ಟಂಪಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications