IND W vs ENG W: ಇಂಗ್ಲೆಂಡ್‌ಗೆ ಜಯ: ಸರಣಿಯಲ್ಲಿ ಸಮಬಲ ಸಾಧಿಸಿದ ಆತಿಥೇಯರು
ಭಾರತ ವನಿತೆಯರ ಹಾಗೂ ಇಂಗ್ಲೆಂಡ್ ವನಿತೆಯರ ನಡುವಣ ಎರಡನೇ ಪಂದ್ಯದಲ್ಲಿ ಆತಿಥೇಯ ತಂಡ 8 ವಿಕೆಟ್ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡದ ಪರ ಸೋಫಿ ಎಕ್ಲೆಸ್ಟೋನ್ ಅಮೋಘ ಬೌಲಿಂಗ್ ದಾಳಿ ನಡೆಸಿ ಜಯದಲ್ಲಿ ಮಿಂಚಿದ್ದಾರೆ. ಈ ಪಂದ್ಯಕ್ಕೆ ಮಳೆ ಹಲವು ಬಾರಿ ಕಾಟ ನೀಡಿದ್ದರಿಂದ ಓವರ್‌ಗಳಿಗೆ ಕತ್ತರಿ ಹಾಕಲಾಯಿತು. ಸದ್ಯ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯ ಗೆದ್ದಿದ್ದರಿಂದ ಮೂರನೇ ಪಂದ್ಯ ಕುತೂಹಲ ಹೆಚ್ಚಿಸಿದೆ.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭಿಕ ಪ್ರತಿಕಾ ರಾವಲ್ (3), ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್ (11) ಸಹ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಟೀಮ್ ಇಂಡಿಯಾದ ಹರ್ಮನ್ ಪ್ರೀತ್ ಕೌರ್ (7), ಜೇಮಿಮಾ ರೋಡ್ರಿಗಸ್ (3), ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (2) ರನ್ ಬರವನ್ನು ಅನುಭವಿಸಿದರು.

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರ ಆಟಕ್ಕೆ ಲಿನ್ಸೆ ಸ್ಮಿತ್ ಬ್ರೇಕ್ ಹಾಕಿದರು. ಇವರು 51 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 42 ರನ್ ಬಾರಿಸಿ ಔಟ್ ಅದರು. ಉಳಿದಂತೆ ಅರುಂಧತಿ ರೆಡ್ಡಿ (14) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಮಳೆ ಪಂದ್ಯಕ್ಕೆ ಪದೇ ಪದೇ ಕಾಟ ನೀಡಿದ್ದರಿಂದ ಓವರ್‌ಗಳ ಸಂಖ್ಯೆಯಲ್ಲೂ ಕಡಿಮೆ ಮಾಡಲಾಯಿತು. ಟೀಮ್ ಇಂಡಿಯಾ 29 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್ ಕಲೆ ಹಾಕಿದೆ.
ಸೋಫಿ ಎಕ್ಲೆಸ್ಟೋನ್‌ಗೆ 3
ಇಂಗ್ಲೆಂಡ್ ತಂಡದ ಪರ ಸೋಫಿ ಎಕ್ಲೆಸ್ಟೋನ್ 3 ವಿಕೆಟ್ ಪಡೆದರೆ, ಎಮ್ ಆರ್ಲಾಟ್ ಹಾಗೂ ಲಿನ್ಸೆ ಸ್ಮಿತ್ ತಲಾ ಎರಡು ವಿಕೆಟ್ ಉರುಳಿಸಿದರು.
ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಇಂಗ್ಲೆಂಡ್ ಆರಂಭಿಕ ಆಮಿ ಜೋನ್ಸ್ (46) ಮತ್ತು ಟ್ಯಾಮಿ ಬ್ಯೂಮಾಂಟ್ (34) ಜೋಡಿ 10.2 ಓವರ್‌ಗಳಲ್ಲಿ 54 ರನ್ ಕಲೆ ಹಾಕಿತು. ಸ್ಟಾರ್ ಆಟಗಾರ್ತಿ ನ್ಯಾಟ್ ಸ್ಕಿವರ್ ಬ್ರಂಟ್ (21), ಸೋಫಿಯಾ ಡಿ (9) ರನ್ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.
ಭಾರತ ವನಿತೆಯರು ಮೊದಲ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದಿದ್ದರು. ಈಗ ಇಂಗ್ಲೆಂಡ್ ಜಯ ಸಾಧಿಸಿದೆ. ಹೀಗಾಗಿ ಜುಲೈ 22 ರಂದು ನಡೆಯಲಿರುವ ಮೂರನೇ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications