Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊನೆಯ ಟಿ20 ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್ ವನಿತೆಯರು 2-1 ಅಂತರದಲ್ಲಿ ಸರಣಿ ವಶಕ್ಕೆ

ಗುರುವಾರ ಬ್ರಿಸ್ಟಲ್‌ನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತದ ಮಹಿಳೆಯರ ತಂಡ ಸೋಲನುಭವಿಸಿದೆ. 7 ವಿಕೆಟ್‌ಗಳ ಸುಲಭ ಗೆಲುವು ದಾಖಲಸಿದ ಇಂಗ್ಲೆಂಡ್ ಮಹಿಳಾ ತಂಡ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಮಹಿಳೆಯರು ಆರಂಭದಲ್ಲೇ ಭಾರತಕ್ಕೆ ಶಾಕ್ ಕೊಟ್ಟರು. ಭಾರತದ ಆರಂಭಿಕ ಬ್ಯಾಟರ್ ಗಳಾದ ಶಫಾಲಿ ವರ್ಮಾ 5 ಗಳಿಸಿ ವಿಕೆಟ್ ಒಪ್ಪಿಸಿದರೆ, ಭಾರತದ ಸ್ಟಾರ್ ಬ್ಯಾಟ್ ಸೃತಿ ಮಂದಾನ 9 ರನ್ ಗಳಿಸಿ ಔಟಾದರು, ಶಬ್ಬಿನೇನಿ ಮೇಘನ ಶೂನ್ಯಕ್ಕೆ ಔಟಾದರೆ, ನಾಯಕಿ ಹರ್ಮನ್‌ ಪ್ರೀತ್ ಕೌರ್ ಕೇವಲ 5 ರನ್‌ಗಳಿಗೆ ಔಟಾದರು.

ಆಲ್‌ರೌಂಡರ್ ಸ್ನೇಹ ರಾಣಾ ಕೂಡ 8 ರನ್ ಗಳಿಸಿ ಇಂಗ್ಲೆಂಡ್ ಬೌಲಿಂಗ್ ಬಲೆಗೆ ಬಿದ್ದರು. 13 ಓವರ್ ಆಗುವಷ್ಟರಲ್ಲಿ ಭಾರತ ತಂಡ 52 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು. ರಿಚಾ ಘೋಷ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಆಟದ ನೆರವಿನಿಂದ ಭಾರತದ ಮಹಿಳೆಯರ ತಂಡ ಅಂತಿಮಬವಾಗಿ ನಿಗದಿನ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತು.

England Women Clinch The Series 2-1 With 7-wicket win Against India Women

ಇಂಗ್ಲೆಂಡ್ ವನಿತೆಯರ ಉತ್ತಮ ಬ್ಯಾಟಿಂಗ್

ಬ್ರಿಸ್ಟನ್‌ನ ಬ್ಯಾಟಿಂಗ್ ಪಿಚ್‌ನಲ್ಲಿ ಸುಲಭದ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ್ತಿಯರು ಭದ್ರ ಬುನಾದಿ ಹಾಕಿದರು, ಸೋಫಿಯಾ ಡುಂಕ್ಲೆ 44 ಎಸೆತಗಳಲ್ಲಿ 49 ರನ್ ಗಳಿಸಿದರೆ. ಡೇನಿಯಲ್ ವ್ಯಾಟ್ 23 ಎಸೆತಗಳಲ್ಲಿ 22 ರನ್ ಗಳಿಸಿದರು.

ನಿಧಾನಗತಿಯಲ್ಲಿ ಎಚ್ಚರಿಕೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರು ವಿಕೆಟ್ ಕಳೆದುಕೊಳ್ಳಲಿಲ್ಲ. ಅಲಿಸ್ ಕಾಪ್ಸೆ ಅಂತಿಮ ಓವರ್ ಗಳಲ್ಲಿ ಬಿರುಸಿನ ಆಟವಾಡಿದರು, 24 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರೆ, ಬ್ರೈನಿ ಸ್ಮಿತ್ 14 ಎಸೆತಗಳಲ್ಲಿ 13 ರನ್ ಗಳಿಸಿದರು.

ಅಂತಿಮವಾಗಿ ಭಾರತದ ವನಿತೆಯರು ನೀಡಿದ್ದ ಸುಲಭದ ಗುರಿಯನ್ನು 18.2 ಓವರ್ ಗಳಲ್ಲಿ ತಲುಪುವ ಮೂಲಕ ಸರಣಿ ವಶಪಡಿಸಿಕೊಂಡರು. ಕಾಮನ್‌ವೆಲ್ತ್‌ ಗೇಮ್‌ನಲ್ಲಿ ಭಾರತದ ವನಿತೆಯರ ವಿರುದ್ಧ ಸೋತು ಹೊರಬಿದ್ದಿದ್ದ ಇಂಗ್ಲೆಂಡ್ ಮಹಿಳಾ ತಂಡ ಸರಣಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ.

ಟಿ20 ಸರಣಿ ಮುಗಿದ ನಂತರ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿವೆ.

ಇಂಗ್ಲೆಂಡ್ ಆಡುವ ಬಳಗ: ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲೆ, ಆಲಿಸ್ ಕ್ಯಾಪ್ಸೆ, ಆಮಿ ಜೋನ್ಸ್ (ನಾಯಕಿ & ವಿಕೆಟ್ ಕೀಪರ್), ಮಾಯಾ ಬೌಚಿಯರ್, ಬ್ರಯೋನಿ ಸ್ಮಿತ್, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಸಾರಾ ಗ್ಲೆನ್, ಫ್ರೇಯಾ ಡೇವಿಸ್, ಲಾರೆನ್ ಬೆಲ್‌ಬೆಂಚ್‌ಕೇಟ್ ಕ್ರಾಸ್, ಇಸ್ಸಿ ವಾಂಗ್

ಭಾರತ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದಯಾಲನ್ ಹೇಮಲತಾ, ಪೂಜಾ ವಸ್ತ್ರಾಕರ್, ರಿಚಾ ಘೋಷ್ (ವಿಕೆಟ್ ಕೀಪರ್), ಕಿರಣ್ ನವಗಿರೆ, ದೀಪ್ತಿ ಶರ್ಮಾ, ಸ್ನೇಹ ರಾಣಾ, ರಾಧಾ ಯಾದವ್, ರೇಣುಕಾ ಸಿಂಗ್ ಬೆಂಚ್: ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸಿಮ್ರಾನ್ ಬಹದ್ದೂರ್

Story first published: Friday, September 16, 2022, 10:07 [IST]
Other articles published on Sep 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+