Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿಗೆ ಬೆಂಬಲಿಸಿ ಕನ್ನಡದಲ್ಲಿ ಟ್ವೀಟ್‌ ಮಾಡಿದ ಇಂಗ್ಲೆಂಡ್ ಆಟಗಾರ್ತಿ

England women cricketer Alexandra Hartley Supports RCB by tweeting in Kannada words

ಬೆಂಗಳೂರು: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ವಿಶ್ವದಗಲ ಅಭಿಮಾನಿಗಳಿದ್ದಾರೆ. ಇದಕ್ಕೆ ಕೊಹ್ಲಿಯ ಜನಪ್ರಿಯತೆಯೂ ಒಂದು ಕಾರಣ. ಅಲ್ಲದೆ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರೂ ಇರುವುದು ಇದಕ್ಕೆ ಕಾರಣ.

ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಹಾರ್ಟ್ಲಿ ಟ್ವೀಟ್ ಮಾಡಿರುವುದು ಗಮನ ಸೆಳೆಯುತ್ತಿದೆ. ಹಾರ್ಟ್ಲಿ ಬರೆದಿರುವುದು ಎರಡು ಮೂರೇ ಪದಗಳಾದರೂ ಆ ಪದಗಳು ಆರ್‌ಸಿಬಿ ಅಭಿಮಾನಿಗಳಿಗೆ ಇಷ್ಟವಾಗುವಂತಿವೆ.

ಏಪ್ರಿಲ್ 14ರ ಬುಧವಾರ ಟ್ವೀಟ್ ಮಾಡಿರುವ ಹಾರ್ಟ್ಲಿ, 'ಈ ಸಲ ಕಪ್‌ ನಮ್ದೇ' ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ಸಾಲಿನ ಜೊತೆಗೊಂದು ಹೃದಯದ ಇಮೋಜಿ ಕೂಡ ಇದೆ. ಈ ಟ್ವೀಟ್‌ಗೆ ಈಗಾಗಲೇ 1250+ ಲೈಕ್‌ಗಳು ಬಿದ್ದಿವೆ. 380+ ರೀಟ್ವೀಟ್‌ಗಳಾಗಿವೆ. ಈ ಹಿಂದೆ ಕೂಡ ಹಾರ್ಟ್ಲಿ ಆರ್‌ಸಿಬಿ ಬೆಂಬಲಿಸಿ ಟ್ವೀಟ್‌ ಮಾಡಿದ್ದರು.

14ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರಂಭಿಕ ಪಂದ್ಯದಲ್ಲೇ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಆರ್‌ಸಿಬಿ ಗೆದ್ದು ಶುಭಾರಂಭ ಕಂಡಿತ್ತು. ಇನ್ನು ಏಪ್ರಿಲ್ 14ರ ಬುಧವಾರ ಸನ್ ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ತಂಡಗಳು ಕಾದಾಡಲಿವೆ.

Story first published: Wednesday, April 14, 2021, 16:23 [IST]
Other articles published on Apr 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+