ಜೂನ್ 10 ಮಂಗಳವಾರ, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಯಾವುದೇ ಬಾಲಿವುಡ್ ನಟರಿಗಿಂತ ಕಡಿಮೆಯಿಲ್ಲ. ಕ್ರಿಕೆಟ್ ಹೊರತುಪಡಿಸಿಯೂ ಎಲ್ಲೆಲ್ಲೂ ವಿರಾಟ್ ಕೊಹ್ಲಿ ಕ್ರೇಜ್ ಹೆಚ್ಚಿದೆ.
ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ ಇಂಗ್ಲೆಂಡ್‌ನ ಸ್ಟಾರ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಅವರು ವಿರಾಟ್ ಕೊಹ್ಲಿ ಅವರಿಗೆ ಸಾರ್ವಜನಿಕವಾಗಿ ಪ್ರಪೋಸ್ ಮಾಡಿದ್ದರು. 2014ರಲ್ಲಿ ಟ್ವೀಟರ್‌ನಲ್ಲಿ 'ಕೊಹ್ಲಿ ನನ್ನನ್ನು ಮದುವೆಯಾಗು' ಎಂದು ಬರೆದು ಡೇನಿಯಲ್ ವ್ಯಾಟ್ ಪೋಸ್ಟ್ ಮಾಡಿದ್ದರು.

ಆದರೆ ಇದೀಗ ಡೇನಿಯಲ್ ವ್ಯಾಟ್ ಅವರು ಸಲಿಂಗ ಮದುವೆಯಾಗವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಪೋಟೋಗಳನ್ನು ಡೇನಿಯಲ್ ವ್ಯಾಟ್ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.
ತಮ್ಮ ಬಹುಕಾಲದ ಗೆಳತಿ ಜಾರ್ಜಿಯಾ ಹಾಡ್ಜ್ ಅವರನ್ನು ಡೇನಿಯಲ್ ವ್ಯಾಟ್ ವರಿಸಿದ್ದಾರೆ. 2023ರ ಆರಂಭದಲ್ಲಿ, ಜಾರ್ಜಿಯಾ ಹಾಡ್ಜ್ ಅವರೊಂದಿಗೆ ಡೇನಿಯಲ್ ವ್ಯಾಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದು
ಸಾಮಾಜಿಕ ಜಾಲತಾಣದಿಂದ ದೃಢಪಟ್ಟಿತ್ತು.

'ಎಂದೆಂದಿಗೂ ನನ್ನದು' ಎಂದು ಬರೆದ ಪೋಸ್ಟ್ ಮಾಡಿದ್ದ ಡೇನಿಯಲ್ ವ್ಯಾಟ್ ಇದೀಗ ಜಾರ್ಜಿಯಾಳನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ತಾವು ಮದುವೆಯಾಗಿರುವ ಬಗ್ಗೆ ಡೇನಿಯಲ್ ವ್ಯಾಟ್ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಮೂರು ಮದುವೆಯ ಫೋಟೋಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಜಾರ್ಜಿಯಾ ಮತ್ತು ಡೇನಿಯಲ್ ಬಿಳಿ ಉಡುಪುಗಳನ್ನು ಧರಿಸಿದ್ದು, ಬಳಹ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯಾದ ಜೋಡಿಗಳಿಗೆ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ ಕೂಡ ಶುಭ ಕೋರಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಲಂಡನ್ ಮೂಲದ ಸಿಎಎ ಬೇಸ್ ಎಂಬ ಮಹಿಳಾ ಫುಟ್‌ಬಾಲ್ ತಂಡದ ಮುಖ್ಯಸ್ಥರಾಗಿರುವ ಜಾರ್ಜಿಯಾ ಕೂಡ ಕ್ರೀಡಾ ಜಗತ್ತಿನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಡೇನಿಯಲ್ ವ್ಯಾಟ್ ಮತ್ತು ಜಾರ್ಜಿಯಾ ದೀರ್ಘಕಾಲದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 33 ವರ್ಷದ ಡೇನಿಯಲ್ ವ್ಯಾಟ್ ಅವರು ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೆ ವ್ಯಾಟ್ ಇಂಗ್ಲೆಂಡ್ ಪರ 110 ಏಕದಿನ ಮತ್ತು 156 ಟಿ20 ಪಂದ್ಯಗಳಲ್ಲಿ ಕಣಕ್ಕೀಳಿದ್ದಾರೆ.
ಏಕದಿನ ಮತ್ತು ಟಿ20ಯಲ್ಲಿ 1907 ಮತ್ತು 2726 ರನ್‌ಗಳನ್ನು ಹೊಡೆದಿದ್ದು, ಜೊತೆಗೆ ಎರಡೂ ಮಾದರಿಗಳಲ್ಲಿ ತಲಾ 2 ಶತಕಗಳನ್ನು ಬಾರಿಸಿದ್ದಾರೆ.