ಮಿಥಾಲಿ ರಾಜ್ ಅರ್ಧ ಶತಕ ವ್ಯರ್ಥ, ಇಂಗ್ಲೆಂಡ್ ವಿರುದ್ಧ ಸೋತ ಭಾರತ

ಬ್ರಿಸ್ಟಲ್: ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಭಾರತೀಯ ವನಿತೆಯರು ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 8 ವಿಕೆಟ್ ಸೋಲನುಭವಿಸಿದೆ. ನಾಯಕಿ ಮಿಥಾಲಿ ರಾಜ್ ಅರ್ಧ ಶತಕದ ಹೊರತಾಗಿಯೂ ತಂಡ ಪರಾಭವಗೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಸ್ಮೃತಿ ಮಂಧಾನ 10, ಶೆಫಾಲಿ ವರ್ಮಾ 15, ಪೂನಂ ರಾವತ್ 32, ಮಿಥಾಲಿ ರಾಜ್ 72, ದೀಪ್ತಿ ಶರ್ಮಾ 30, ಪೂಜಾ ವಸ್ತ್ರಾಕರ್ 15 ರನ್ ಸೇರಿಸಿದರು. ತಂಡ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು, ಲಾರೆನ್ ವಿನ್ಫೀಲ್ಡ್ ಹಿಲ್ 16, ಟಮ್ಮಿ ಬ್ಯೂಮಾಂಟ್ ಅಜೇಯ 87 (87 ಎಸೆತ), ನಾಯಕಿ ಹೀದರ್ ನೈಟ್ 18, ನಟಾಲಿಯಾ ಸೈವರ್ ಅಜೇಯ 74 ರನ್‌ನೊಂದಿಗೆ 34.5 ಓವರ್‌ಗೆ 2 ವಿಕೆಟ್ ಕಳೆದು 202 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕ್ಯಾಥರೀನ್ ಬ್ರಂಟ್ 2, ಅನ್ಯಾ ಶ್ರುಬ್‌ಸೋಲ್ 2, ಸೋಫಿ ಎಕ್ಲೆಸ್ಟೋನ್ 3, ಕೇಟ್ ಕ್ರಾಸ್ 1 ವಿಕೆಟ್‌ನಿಂದ ಗಮನ ಸೆಳೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಜೂಲನ್ ಗೋಸ್ವಾಮಿ 1, ಏಕ್ತಾ ಬಿಶ್ತ್ 1 ವಿಕೆಟ್ ಪಡೆದರು. ಆಂಗ್ಲ ಬ್ಯಾಟ್ಸ್‌ಮನ್ ಟಮ್ಮಿ ಬ್ಯೂಮಾಂಟ್ ಪಂದ್ಯಶ್ರೇಷ್ಠೆ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications