ಭಾರತೀಯ ಮಹಿಳೆಯರ ವಿರುದ್ಧ ಇಂಗ್ಲೆಂಡ್ ಮಹಿಳೆಯರಿಗೆ ಗೆಲುವು

ಟೌನ್‌ಟನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಮಹಿಳಾ ತಂಡ ಬುಧವಾರ (ಜೂನ್ 3) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯರ ವಿರುದ್ಧ 5 ವಿಕೆಟ್ ಸೋಲನುಭವಿಸಿದೆ. ನಾಯಕಿ ಮಿಥಾಲಿ ರಾಜ್ ಅರ್ಧ ಶತಕದ ಹೊರತಾಗಿಯೂ ಭಾರತ ಪಂದ್ಯ ಸೋತು ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ 2-0ಯ ಹಿನ್ನಡೆ ಅನುಭವಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಮಹಿಳಾ ತಂಡ, ಸ್ಮೃತಿ ಮಂಧಾನ 22, ಶೆಫಾಲಿ ವರ್ಮಾ 44, ಜೆಮಿಮಾ ರೋಡ್ರಿಗಸ್ 8, ಮಿಥಾಲಿ ರಾಜ್ 59, ಹರ್ಮನ್‌ಪ್ರೀತ್ ಕೌರ್ 19, ಜೂಲನ್ ಗೋಸ್ವಾಮಿ 19, ಪೂನಂ ಯಾದವ್ 15 ರನ್‌ನೊಂದಿಗೆ 50 ಓವರ್‌ಗೆ 10 ವಿಕೆಟ್ ಕಳೆದು 221 ರನ್ ಗಳಿಸಿತ್ತು.
ಗುರಿ ಬೆಂಬತ್ತಿದ್ದ ಇಂಗ್ಲೆಂಡ್ ವನಿತೆಯರು, ಲಾರೆನ್ ವಿನ್ಫೀಲ್ಡ್ ಹಿಲ್ 42, ಟಮ್ಮಿ ಬ್ಯೂಮಾಂಟ್ 10, ಹೀದರ್ ನೈಟ್ 10, ನಟಾಲಿಯಾ ಸೈವರ್ 19, ಆಮಿ ಎಲ್ಲೆನ್ ಜೋನ್ಸ್ 28, ಸೋಫಿಯಾ ಡಂಕ್ಲೆ 73, ಕ್ಯಾಥರೀನ್ ಬ್ರಂಟ್ 33 ರನ್‌ನೊಂದಿಗೆ 47.3 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 225 ರನ್ ಗಳಿಸಿದರು.
ಭಾರತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ 3, ಕೇಟ್ ಕ್ರಾಸ್ 5, ನಟಾಲಿಯಾ ಸೈವರ್ 1 ವಿಕೆಟ್‌ನಿಂದ ಗಮನ ಸೆಳೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಪೂನಂ ಯಾದವ್ 2, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಸ್ನೇಹ್ ರಾಣ ತಲಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications