ಸಿಂಹಳೀಯರಿಗೆ ಮಣ್ಣುಮುಕ್ಕಿಸಿದ ಆಂಗ್ಲರು: ಸರಣಿ ಗೆದ್ದ ಇಂಗ್ಲೆಂಡ್

ಪಳ್ಳೆಕೆಲೆ, ಅಕ್ಟೋಬರ್ 20: ತವರಿನಲ್ಲಿಯೇ ಶ್ರೀಲಂಕಾ ಕ್ರಿಕೆಟ್ ತಂಡ ಮತ್ತೆ ಮುಖಭಂಗಕ್ಕೆ ಒಳಗಾಗಿದೆ.
ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ಇಂಗ್ಲೆಂಡ್ 3-0ಯಿಂದ ಗೆದ್ದುಕೊಂಡಿದೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ.
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಬೌಲಿಂಗ್ ಆಯ್ದುಕೊಂಡರು. ನಿರೋಷನ್ ಡಿಕ್‌ವೆಲಾ ಮತ್ತು ದಸುನ್ ಶನಕಾ ಅವರ ಅರ್ಧ ಶತಕದ ನೆರವಿನಿಂದ ಸಿಂಹಳೀಯರ ಪಡೆ 7 ವಿಕೆಟ್ ಕಳೆದುಕೊಂಡು 273 ರನ್‌ಗಳ ಗೌರವಾರ್ಹ ಮೊತ್ತ ದಾಖಲಿಸಿತು.
ಸವಾಲಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 27 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದ್ದಾಗ ವರುಣನ ಆರ್ಭಟ ಜೋರಾಯಿತು. ಬಳಿಕ ಆಟ ಮುಂದುವರಿಸಲು ಮಳೆರಾಯ ಅವಕಾಶ ನೀಡಲಿಲ್ಲ. ಡಕ್ವರ್ಥ್ ಲೂಯಿಸ್ ನಿಯಮದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ 18 ರನ್‌ಗಳನ್ನು ಹೆಚ್ಚುವರಿಯಾಗಿ ಗಳಿಸಿತ್ತು. ಅದರ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಇನ್ನೆರಡು ಪಂದ್ಯಗಳಿಗೂ ಮಳೆಯ ಕಾಟ ಎದುರಾಗಿತ್ತು. ಈ ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಡಕ್ವರ್ಥ್ ಲೂಯಿಸ್ ನಿಯಮದಡಿ ವಿಜಯಿಯಾಗಿತ್ತು. ಕೊನೆಯ ಪಂದ್ಯ ಮಂಗಳವಾರ (ಅ.23) ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications