ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಈ ಸರಣಿ ಹಾಗೂ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. ಆದರೆ, ಟೀಮ್ ಇಂಡಿಯಾ ಇನ್ನು ಪ್ರಕಟಿಸಬೇಕಿದೆ. ಟೀಮ್ ಇಂಡಿಯಾದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಮೊದಲು ನಡೆಯಲಿದೆ. ಆ ಬಳಿಕ ಏಕದಿನ ಕ್ರಿಕೆಟ್ ಟೂರ್ನಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಡೆಯಲಿದೆ.
ಭಾರತ ಸದ್ಯ ಕಳಪೆ ಪ್ರದರ್ಶನ ನೀಡಿದ್ದು, ಜಯದ ಟ್ರ್ಯಾಕ್‌ಗೆ ಮರಳು ಪ್ಲ್ಯಾನ್ ಮಾಡಿಕೊಂಡಿದೆ. ತವರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ, ಕ್ಲೀನ್ ಸ್ವೀಪ್ ಸೋಲು ಕಂಡಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ್ತ್ ಟೆಸ್ಟ್ ಗೆದ್ದಿದ್ದು ಬಿಟ್ಟರೆ ಉಳಿದ ಎಲ್ಲ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದೆ. ಹೀಗಾಗಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವಲ್ಲಿ ವಿಫಲವಾಗಿದೆ. ಈಗ ತವರಿನಲ್ಲಿ ಆಂಗ್ಲರ ಸದ್ದಡಗಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಭಾರತವು ಇಂಗ್ಲೆಂಡ್ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಕೊಂಚ ದುರ್ಬಲದಂತೆ ಕಾಣುತ್ತದೆ. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 107 ಏಕದಿನ ಪಂದ್ಯಗಳು ನಡೆದಿದ್ದು, ಭಾರತ 58 ಪಂದ್ಯ ಗೆದ್ದರೆ, 44 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು 3 ಪಂದ್ಯಗಳ ಫಲಿತಾಂಶ ಬಂದಿಲ್ಲ. 2 ಪಂದ್ಯ ಟೈ ಆಗಿವೆ. ಭಾರತ ನೆಲದಲ್ಲಿ ಇಂಗ್ಲೆಂಡ್ ಸಾಧನೆ ಕಳಪೆ ಆಗಿದೆ. ಇಂಗ್ಲೆಂಡ್ ತಂಡ ಕಳೆದ ೪೦ ವರ್ಷಗಳಿಂದ ಭಾರತದಲ್ಲಿ ಒಂದೇ ಒಂದು ಏಕದಿನ ಸರಣಿ ಗೆದ್ದಿಲ್ಲ. ಎರಡು ಏಕದಿನ ಸರಣಿಗಳು ಡ್ರಾನಲ್ಲಿ ಅಂತ್ಯವಾಗಿವೆ. ಆದರೆ ಇಂಗ್ಲೆಂಡ್ ಮಾತ್ರ ಗೆಲುವು ದಾಖಲಿಸಿಲ್ಲ.
ಭಾರತದಲ್ಲಿ ಇಂಗ್ಲೆಂಡ್ ಕೊನೆಯ ಬಾರಿಗೆ 1984-85ರಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಗೆದ್ದುಕೊಂಡಿತ್ತು. ಕಳೆದ 40 ವರ್ಷಗಳಲ್ಲಿ ಇಂಗ್ಲೆಂಡ್ ಒಂದೇ ಒಂದು ಸರಣಿಯನ್ನು ಭಾರತದಲ್ಲಿ ಗೆದ್ದಿಲ್ಲ. ಈ ಬಾರಿ ನಾಲ್ಕು ದಶಕದ ಸರಣಿ ಗೆಲುವಿನ ಬರವನ್ನು ಕೊನೆ ಗೊಳಿಸುವ ಇರಾದೆಯನ್ನು ಹೊಂದಿದೆ. 2024ರಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಮಾತ್ರ ಒಂದೇ ಒಂದು ಏಕದಿನ ಸರಣಿಯನ್ನು ಆಡಿತ್ತು. ಆ ಬಳಿಕ ಯಾವುದೇ ಸರಣಿಯನ್ನು ಆಡಿಲ್ಲ. ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆದಿದ್ದು, ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸಹ ಗೆಲ್ಲಲಿಲ್ಲ. ಲಂಕಾ 27 ವರ್ಷಗ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆಲುವು ಸಾಧಿಸಿತು.