For Quick Alerts
ALLOW NOTIFICATIONS  
For Daily Alerts
 

RCB ಸ್ಟಾರ್‌ ಸ್ಫೋಟಕ ಬ್ಯಾಟಿಂಗ್: ಇಂಗ್ಲೆಂಡ್‌ ಪರ ವೇಗದ ಶತಕ

ಮ್ಯಾಂಚೆಸ್ಟರ್‌: ಭರವಸೆಯ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ಬಿರುಸಿನ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಇಂಗ್ಲೆಂಡ್‌ 2ನೇ ಟಿ20 ಪಂದ್ಯದಲ್ಲಿ 146 ರನ್‌ಗಳ ದಾಖಲೆಯ ಗೆಲವನ್ನು ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಪವರ್‌ ಪ್ಲೇನ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡು ಇಂಗ್ಲೆಂಡ್ ಆರಂಭಿಕ ಆಟಗಾರರು ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 7.5 ಓವರ್‌ಗಳಲ್ಲಿ 126 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಜೋಸ್‌ ಬಟ್ಲರ್‌ ಕೇವಲ 30 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಾಯದಿಂದ 83 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

England s Explosive Opener Blasts Fastest Century Setting New Records

ಬಟ್ಲರ್ ಔಟ್ ಆದ ಬಳಿಕ ಅಂಗಳಕ್ಕೆ ಇಳಿದ ಜಾಕಬ್ ಬೆತೆಲ್‌, ಫಿಲ್ ಸಾಲ್ಟ್‌ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಸಹ ಎರಡನೇ ವಿಕೆಟ್‌ಗೆ 41 ಎಸೆತಗಳಲ್ಲಿ 95 ರನ್‌ ಬಾರಿಸಿದರು. ಜಾಕಬ್‌ ಬೆತೆಲ್‌ 26 ರನ್‌ಗಳಿಗೆ ಆಟ ಮುಗಿಸಿದರು. ಮೂರನೇ ವಿಕೆಟ್‌ಗೆ ಹ್ಯಾರಿ ಬ್ರೂಕ್ ಹಾಗೂ ಫಿಲ್‌ ಸಾಲ್ಟ್‌ ಜೋಡಿ ಸಹ 37 ಎಸೆತಗಳಲ್ಲಿ ಅಜೇಯ 83 ರನ್‌ ಸಿಡಿಸಿತು.

ವೇಗದ ಶತಕ

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸಾಲ್ಟ್‌ ಅಬ್ಬರಿಸಿದರು. ಇವರು 29 ಎಸೆತಗಳಲ್ಲಿ ಶತಕ ಬಾರಿಸಿ ಇಂಗ್ಲೆಂಡ್‌ ಪರ ವೇಗದ ಶತಕ ಬಾರಿಸಿದ ದಾಖಲೆಯನ್ನು ಬರೆದರು. ಸಾಲ್ಟ್‌ 60 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್ ಸಹಾಯದಿಂದ ಅಜೇಯ 141 ರನ್‌ ಬಾರಿಸಿ ಆರ್ಭಟಿಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಬಿಗ್‌ ಸ್ಕೋರ್ ದಾಖಲೆ ಸಹ ಫಿಲ್ ಸಾಲ್ಟ್ ಪಾಲಾಯಿತು.

ಸಾಲ್ಟ್‌ ದಾಖಲೆಗಳ ಪಟ್ಟಿ

39- ಇಂಗ್ಲೆಂಡ್‌ ಪರ ವೇಗವಾಗಿ ಶತಕ ಬಾರಿಸಿದ ಹೆಗ್ಗಳಿಕೆಯನ್ನು ಸಾಲ್ಟ್‌ ತಮ್ಮದಾಗಿಸಿಕೊಂಡರು. ಈ ಮೂಲಕ ಇವರು ಲಿಯಾಮ್ ಲಿವಿಂಗ್‌ಸ್ಟೋನ್‌ 42 ಎಸೆತಗಳಲ್ಲಿ ಬಾರಿಸಿದ ಶತಕದ ದಾಖಲೆ ಅಳಿಸಿ ಹಾಕಿದರು.

42- ಇನಿಂಗ್ಸ್‌ಗಳಲ್ಲಿ ಸಲ್ಟ್‌ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ವೇಗವಾಗಿ ನಾಲ್ಕು ಶತಕ ಬಾರಿಸಿದ ದಾಖಲೆಯನ್ನು ಸಹ ಬರೆದರು. ಈ ಮೊದಲು ಈ ದಾಖಲೆ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು. ಇವರು 57 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

2- ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸಾಲ್ಟ್‌, ಸೂರ್ಯ ಜೊತೆಗೆ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ 5 ಶತಕ ಬಾರಿಸುವ ಮೂಲಕ ನಂಬರ್ 1 ಸ್ಥಾನದಲ್ಲಿದ್ದಾರೆ.

141- ಸಾಲ್ಟ್ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ ಒಬ್ಬ ದಾಖಲಿಸಿದ ಗರಿಷ್ಠ ರನ್‌

ಸ್ಟಾರ್ ಆಟಗಾರರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 304 ರನ್‌ ಸೇರಿಸಿತು. 300ಕ್ಕೂ ಹೆಚ್ಚು ರನ್‌ಗಳನ್ನು ಟಿ20 ಕ್ರಿಕೆಟ್‌ನಲ್ಲಿ ದಾಖಲಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆ ಇಂಗ್ಲೆಂಡ್ ತಂಡದ್ದಾಯಿತು. ಇದಕ್ಕೂ ಮೊದಲು ನೇಪಾಳ ಹಾಗೂ ಜಿಂಬಾಬ್ವೆ ತಂಡಗಳು ಈ ಸಾಧನೆ ಮಾಡಿದ್ದವು.

ಪಂದ್ಯ ಸಾರಂಶ

305 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಐಡೇನ್‌ ಮಾರ್ಕನ್‌ 40, ರಯಾನ್ ರಿಕಲ್ಟನ್‌ 20, ಟ್ರಿಸ್ಟನ್‌ ಸ್ಟಬ್ಸ್ 23, ಬ್ಜೋರ್ನ್ ಫೋರ್ಟುಯಿನ್ 32, ಡೊನೊವನ್ ಫೆರೀರಾ 23 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್‌ 146 ರನ್‌ಗಳ ಭರ್ಜರಿ ಜಯ ದಾಖಲಿಸಿತು.

Story first published: Saturday, September 13, 2025, 3:48 [IST]
Other articles published on Sep 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+