For Quick Alerts
ALLOW NOTIFICATIONS  
For Daily Alerts
 

England's World Cup 2023 Schedule: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಪೂರ್ಣ ವೇಳಾಪಟ್ಟಿ

ಮಂಗಳವಾರ, ಜೂನ್ 27ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂಬೈನಲ್ಲಿ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ.

Englands ODI World Cup 2023 Schedule: Time Table, Fixtures, and Venues

ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು 2022ರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಇದೀಗ ಭಾರತ ಆತಿಥ್ಯ ವಹಿಸಲಿರುವ ಪಂದ್ಯಾವಳಿಯಲ್ಲಿ ಈ ವರ್ಷವೂ ತಮ್ಮ ಸತತ ಎರಡನೇ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಉ ಹಿಡಿಯುವ ಗುರಿ ಹೊಂದಿದೆ.

ಅಕ್ಟೋಬರ್ 5ರಂದು ನ್ಯೂಜಿಲೆಂಡ್ ಪಂದ್ಯದ ಮೂಲಕ ಅಹಮದಾಬಾದ್‌ನಲ್ಲಿ ಪಂದ್ಯಾವಳಿಗೆ ಚಾಲನೆ ಸಿಕ್ಕಂತಾಗುತ್ತದೆ. ಇಂಗ್ಲೆಂಡ್ ತಂಡವು ಅಕ್ಟೋಬರ್ 10ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯಕ್ಕಾಗಿ ಧರ್ಮಶಾಲಾಗೆ ಪ್ರಯಾಣಿಸಲಿದೆ.

ನಾಲ್ಕು ದಿನಗಳ ನಂತರ ಅಕ್ಟೋಬರ್ 14ರಂದು ಇಂಗ್ಲೆಂಡ್ ತಂಡ ದೆಹಲಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಬಳಿಕ ಅಕ್ಟೋಬರ್ 21ರಂದು ಮುಂಬೈ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.

Englands ODI World Cup 2023 Schedule: Time Table, Fixtures, and Venues

ಅಕ್ಟೋಬರ್ 26ರಂದು ಇಂಗ್ಲೆಂಡ್ ತಂಡವು ಕ್ವಾಲಿಫೈಯರ್ 2 ತಂಡದ ಸವಾಲು ಎದುರಿಸಲು ಬೆಂಗಳೂರಿಗೆ ಬರಲಿದೆ. ಆ ಬಳಿಕ ಆತಿಥೇಯ ಭಾರತ ತಂಡದ ವಿರುದ್ಧ ಅಕ್ಟೋಬರ್ 29ರಂದು ಲಕ್ನೋದಲ್ಲಿ ಮುಖಾಮುಖಿಯಾಗಲಿದೆ.

ಭಾರತ ವಿರುದ್ಧದ ಪಂದ್ಯದ ನಂತರ ಇಂಗ್ಲೆಂಡ್ ತಂಡ ಸುಮಾರು ಒಂದು ವಾರದ ಕಾಲ ವಿಶ್ರಾಂತಿ ಪಡೆಯಲಿದೆ. ನಂತರ ನವೆಂಬರ್ 4ರಂದು ಅಹಮದಾಬಾದ್‌ನಲ್ಲಿ ಬದ್ಧ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ನವೆಂಬರ್ 8ರಂದು ಪುಣೆಯಲ್ಲಿ ಇಂಗ್ಲೆಂಡ್ ತಂಡವು ಕ್ವಾಲಿಫೈಯರ್ 1 ತಂಡದ ವಿರುದ್ಧ ಆಡಲಿದ್ದರೆ, ನವೆಂಬರ್ 12ರಂದು ಕೋಲ್ಕತ್ತಾದ ಈಡನ್ ಗಾರ್ಡರ್ನ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

2023ರ ಐಸಿಸಿ ಏಕದಿನ ವಿಶ್ವಕಪ್ ಇಂಗ್ಲೆಂಡ್ ತಂಡದ ಪೂರ್ಣ ವೇಳಾಪಟ್ಟಿ

ಕ್ರಮ ಸಂಖ್ಯೆ ದಿನಾಂಕ ಪಂದ್ಯ ಸ್ಥಳ
1 ಅಕ್ಟೋಬರ್ 5 ಇಂಗ್ಲೆಂಡ್ vs ನ್ಯೂಜಿಲೆಂಡ್ ಅಹಮದಾಬಾದ್
2 ಅಕ್ಟೋಬರ್ 10 ಇಂಗ್ಲೆಂಡ್ vs ಬಾಂಗ್ಲಾದೇಶ ಧರ್ಮಶಾಲಾ
3 ಅಕ್ಟೋಬರ್ 14 ಇಂಗ್ಲೆಂಡ್ vs ಅಫ್ಘಾನಿಸ್ತಾನ ದೆಹಲಿ
4 ಅಕ್ಟೋಬರ್ 21 ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಮುಂಬೈ
5 ಅಕ್ಟೋಬರ್ 22 ಇಂಗ್ಲೆಂಡ್ vs ಕ್ವಾಲಿಫೈಯರ್ 2 ಬೆಂಗಳೂರು
6 ಅಕ್ಟೋಬರ್ 26 ಇಂಗ್ಲೆಂಡ್ vs ಭಾರತ ಲಕ್ನೋ
7 ಅಕ್ಟೋಬರ್ 29 ಇಂಗ್ಲೆಂಡ್ vs ಆಸ್ಟ್ರೇಲಿಯಾ ಅಹಮದಾಬಾದ್
8 ನವೆಂಬರ್ 8 ಇಂಗ್ಲೆಂಡ್ vs ಕ್ವಾಲಿಫೈಯರ್ 1 ಪುಣೆ
9 ನವೆಂಬರ್ 12 ಇಂಗ್ಲೆಂಡ್ vs ಪಾಕಿಸ್ತಾನ ಕೋಲ್ಕತ್ತಾ

13ನೇ ಐಸಿಸಿ ಪಂದ್ಯಾವಳಿ ಭಾರತದಲ್ಲಿ ನಡೆಯುತ್ತಿದ್ದರೂ, ಇಂಗ್ಲೆಂಡ್ ತಂಡ ಈ ಟೂರ್ನಿಯನ್ನು ಗೆಲ್ಲುವ ಫೇವರಿಟ್ ತಂಡವಾಗಿರಲಿದೆ. ಏಕೆಂದರೆ, ಆಂಗ್ಲರು ಗುಣಮಟ್ಟದ ತಂಡವನ್ನು ಹೊಂದಿದ್ದಾರೆ.

ಜೋಸ್ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಬಲಿಷ್ಠ ಏಕದಿನ ತಂಡವಾಗಿ ಕಾಣುತ್ತದೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ನಾಯಕ ಮತ್ತು ದೃಢ ಬ್ಯಾಟರ್ ಆಗಿರುವ ಜೋಸ್ ಬಟ್ಲರ್ ಹೊರತುಪಡಿಸಿ, ಇಂಗ್ಲೆಂಡ್‌ನಲ್ಲಿ ಜೇಸನ್ ರಾಯ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್ ಅವರಂತಹ ಆಲ್‌ರೌಂಡರ್‌ಗಳಿದ್ದಾರೆ.

ಮಾರ್ಕ್ ವುಡ್, ರೀಸ್ ಟೋಪ್ಲಿ ಸೇರಿದಂತೆ ಹಲವು ವೇಗದ ಬೌಲಿಂಗ್ ಮುಖಗಳಿವೆ. ಇಂಗ್ಲೆಂಡ್‌ನಲ್ಲಿ ಮಾರಕ ವೇಗಿ ಜೋಫ್ರಾ ಆರ್ಚರ್ ಇರುವುದನ್ನು ದೊಡ್ಡ ಪ್ಲಸ್ ಪಾಯಿಂಟ್ ಆಗಿರಲಿದೆ. ಪಂದ್ಯಾವಳಿ ವೇಳೆಗೆ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಮತ್ತು ವಿಶ್ವಕಪ್ ಆಡಲು ಲಭ್ಯವಿರುತ್ತಾರೆ ಎಂದು ಇಂಗ್ಲೆಂಡ್ ತಂಡ ಭಾವಿಸಿದೆ.

ನಾಯಕನಾಗಿ ಇಂಗ್ಲೆಂಡ್‌ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಆಟಗಾರ ಇಯಾನ್ ಮಾರ್ಗನ್ ಅವರು ಸದ್ಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಜೋಸ್ ಬಟ್ಲರ್ ನಾಯಕತ್ವದ ಜವಾಬ್ದಾರಿ ಹೊತ್ತಿದ್ದು, ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ನಂತರ ಖಂಡಿತವಾಗಿ ಏಕದಿನ ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದ್ದಾರೆ.

Story first published: Tuesday, June 27, 2023, 18:56 [IST]
Other articles published on Jun 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+