ಆಗಸ್ಟ್ 1ರಿಂದ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಆರಂಭ: ಇಸಿಬಿ

ಲಂಡನ್, ಜೂನ್ 30: ಆಗಸ್ಟ್ 1ರಿಂದ ಪುರುಷರ ಕೌಂಟಿ ಕ್ರಿಕೆಟ್ ಆರಂಭಕ್ಕೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಗ್ರೀನ್ ಸಿಗ್ನಲ್ ನೀಡಿದೆ. ಪುರುಷರ ಕೌಂಟಿ ಚಾಂಪಿಯನ್‌ಶಿಪ್ ಅಸಲಿಗೆ ಏಪ್ರಿಲ್ 12ರಿಂದ ಆರಂಭವಾಗಬೇಕಿತ್ತು. ಆದರೆ ಕೊರೊನಾವೈರಸ್‌ನಿಂದಾಗಿ ಇದು ವಿಳಂಬವಾಗಿತ್ತು.
ಪಂದ್ಯಗಳ ವೇಳಾಪಟ್ಟಿ ಮತ್ತು ಮಾದರಿಗಳನ್ನು 18 ಫಸ್ಟ್ ಕ್ಲಾಸ್ ಕೌಂಟಿ ತಂಡಗಳು ಜುಲೈ ಆರಂಭದಲ್ಲಿ ನಡೆಯುವ ಸಭೆಯಲ್ಲಿ ನಿರ್ಧರಿಸಲಿವೆ. ಆಟದ ಯೋಜನೆಗಳು ರೆಡ್ ಬಾಲ್, ವೈಟ್ ಬಾಲ್ ಕ್ರಿಕೆಟ್ ಎರಡನ್ನೂ ಒಳಗೊಂಡಿರಲಿವೆ.
'ನಾವೊಂದು ಪ್ರಮುಖ ಹೆಜ್ಜೆಗ ಮುಂದಾಗುತ್ತಿದ್ದೇವೆ. ಪುರುಷರ ದೇಸಿ ಕ್ರಿಕೆಟ್ ಸೀಸನ್ ಅನ್ನು ಆಗಸ್ಟ್ 1ರಿಂದ ಆರಂಭಿಸಲು ಅನುಮೋದನೆ ನೀಡುತ್ತಿದ್ದೇವೆ. ಕೌಂಟಿ ಕ್ರಿಕೆಟ್‌ಗೆ ಸಂಬಂಧಿಸಿರುವ ಪ್ರತಿಯೊಬ್ಬರೂ ಇದನ್ನು ಸ್ವಾಗತಿಸಲಿದ್ದಾರೆ,' ಎಂದು ಇಸಿಬಿ ಸಿಇಒ ಟಾಮ್ ಹ್ಯಾರಿಸನ್ ಹೇಳಿದ್ದಾರೆ.
'ನಮ್ಮ ಆಟಗಾರರ, ಸಿಬ್ಬಂದಿಯ, ಅಧಿಕಾರಿಗಳ ಸುರಕ್ಷತೆ ನಮಗೆ ಮುಖ್ಯ ಅನ್ನೋದನ್ನು ಇಲ್ಲಿ ಒತ್ತಿ ಹೇಳುತ್ತಿದ್ದೇವೆ. ಈ ಬಗ್ಗೆ ಎಲ್ಲಾ ಚರ್ಚೆಗಳು, ಸರ್ಕಾರದ ಮಾರ್ಗಸೂಚಿಗಳು ನಮ್ಮ ಯೋಜನೆ ಮತ್ತು ತಯಾರಿಯನ್ನು ರೂಪಿಸಲಿವೆ,' ಎಂದು ಹ್ಯಾರಿಸನ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications