ಜುಲೈವರೆಗೂ ಇಂಗ್ಲೆಂಡ್ ಕ್ರಿಕೆಟ್‌ನ ಸೀಸನ್ ಆರಂಭಗೊಳ್ಳಲ್ಲ: ಇಸಿಬಿ

ಲಂಡನ್, ಏಪ್ರಿಲ್ 24: ಜುಲೈ 1ರವರೆಗೂ ಇಂಗ್ಲೆಂಡ್‌ನಲ್ಲಿ ಯಾವುದೇ ವೃತ್ತಿಪರ ಕ್ರಿಕೆಟ್ ಪಂದ್ಯಗಳು ನಡೆಯಲಾರವು ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಶುಕ್ರವಾರ (ಏಪ್ರಿಲ್ 24) ಘೊಷಿಸಿದೆ. ಕೊರೊನಾವೈರಸ್ ಕಾರಣ ಜುಲೈ ತಿಂಗಳವರೆಗೂ ಕ್ರಿಕೆಟ್ ಪಂದ್ಯಗಳನ್ನು ನಡೆಸದಿರುವ ಇಸಿಬಿ ನಿರ್ಧರಿಸಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಜುಲೈನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಇಂಗ್ಲೆಂಡ್ ತಂಡದ ವೆಸ್ಟ್ ಇಂಡೀಸ್ ಟೆಸ್ಟ್ ಪ್ರವಾಸ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮರುಹೊಂದಿಸಲಿದೆ ಎಂದು ಹೇಳಿದೆ.
ಇಂಗ್ಲೆಂಡ್ ಮಹಿಳಾ ತಂಡ ಮತ್ತು ಭಾರತದ ಮಹಿಳಾ ತಂಡಗಳ ನಡುವಿನ ಒಂದು ಏಕದಿನ ಪಂದ್ಯವೂ ಸೇರಿದಂತೆ ಟಿ20 ಪಂದ್ಯಗಳ ಸರಣಿಯ ದಿನಾಂಕವೂ ಬದಲಾಗಲಿದೆ ಎಂದು ಇಂಗ್ಲೆಂಡ್ ಬೋರ್ಡ್ ಮಾಹಿತಿ ನೀಡಿದೆ.
ಕೊರೊನಾದಿಂದಾಗಿ ಇಂಗ್ಲೆಂಡ್‌ನ ನೂತನ ಟೂರ್ನಿ 'ಹಂಡ್ರೆಡ್'ಗೂ ಸಮಸ್ಯೆಯಾಗಿದೆ. ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಸಂಬಂಧಿಸಿ, ಮುಂದಿನ ವಾರ ಚರ್ಚಿಸಿ ಇಸಿಬಿ ನಿರ್ಧಾರ ಕೈಗೊಳ್ಳಲಿದೆ. ಟಿ20 ಮಾದರಿಯ ಈ ನೂತನ ಕ್ರಿಕೆಟ್ ಟೂರ್ನಿಯ 1 ಇನ್ನಿಂಗ್ಸ್ ಕೇವಲ 100 ಎಸೆತಗಳದ್ದಾಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications