Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೆಳತಿ ಇಶಾ ನೇಗಿ ಜೊತೆ ರಿಷಬ್ ಪಂತ್: ಇನ್ಸ್ಟಾಗ್ರಾಮ್‌ ಚಿತ್ರ ವೈರಲ್

Entreprenuer Isha Negi Expresses Her Love For Rishabh Pant

ನವದೆಹಲಿ, ಜನವರಿ 17: ಕ್ರಿಕೆಟ್ ಮೈದಾನದಲ್ಲಿ ಕೀಪಿಂಗ್, ಬ್ಯಾಟಿಂಗ್ ಕೆಲವೊಮ್ಮೆ ತರ್ಲೆಯೂ ಮಾಡುತ್ತ ಗಮನ ಸೆಳೆಯೋ ಭಾರತದ ಯುವ ಆಟಗಾರ ರಿಷಬ್ ಪಂತ್ ಇರುವ ಇನ್ಸ್ಟಾಗ್ರಾಮ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ. ಚಿತ್ರದಲ್ಲಿ ಪಂತ್ ಜೊತೆ ಅವರ ಗೆಳತಿ ಇಶಾ ನೇಗಿಯೂ ಇರುವುದು ಇದಕ್ಕೆ ಕಾರಣ.

ವಾಣಿಜ್ಯೋದ್ಯಮಿಯಾಗಿರುವ ಇಶಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಚಿತ್ರದಲ್ಲಿ ಪಂತ್ ಕೂಡ ಇದ್ದಾರೆ. ಚಿತ್ರದ ಜೊತೆಗಿನ ಸಾಲು ಜಾಲತಾಣಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದೇ ಕಾರಣಕ್ಕೆ ಪಂತ್-ಇಶಾರ ಫೋಟೋ ವೈರಲ್ ಆಗುತ್ತಿದೆ. ಚಿತ್ರದ ಜೊತೆಗಿನ ಸಾಲಿನಲ್ಲಿ ಇಶಾ, ತನಗೆ ಪಂತ್ ಮೇಲಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.

'ನನ್ನ ಹುಡುಗ, ನನ್ನ ಮನಸ್ಸಿನಲ್ಲಿರುವಾತ, ನನ್ನ ಬೆಸ್ಟ್ ಫ್ರೆಂಡ್, ನನ್ನ ಬದುಕಿನ ಪ್ರೀತಿಯೀತ' ಎಂದು ಚಿತ್ರದ ಜೊತೆ ಇಶಾ ಬರೆದುಕೊಂಡಿರುವ ಸಾಲು ಕ್ರೀಡಾಭಿಮಾನಿಗಳನ್ನು ತಾಗುವಂತಿದೆ. ಜೊತೆಗೆ ಪಂತ್-ಇಶಾರ ಪ್ರೇಮದ ಬಗ್ಗೆಯೂ ಅದೇ ಸಾಲು ಏನನ್ನೋ ಪಿಸುಗುಡುತ್ತಿರುವಂತಿದೆ.

ಕೆಲ ಪಂದ್ಯಗಳಲ್ಲಿ ಬ್ಯಾಟಿಂಗ್ ದೌರ್ಬಲ್ಯ ತೋರಿಕೊಂಡರೂ ಪಂತ್ ಅನಂತರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೊಂಚ ಚೇತರಿಕೆ ಕಂಡಿದ್ದರು. ಅದರಲ್ಲೂ ಸಿಡ್ನಿ ಟೆಸ್ಟ್‌ನಲ್ಲಿ ರಿಷಬ್ ಅಜೇಯ 159 ರನ್ ಪೇರಿಸಿ ಎಲ್ಲರ ಚಿತ್ತ ತನ್ನತ್ತ ಹರಿಯುವಂತೆ ಮಾಡಿದ್ದರು. ಈಗ ಇನ್ಸ್ಟಾಗ್ರಾಮ್ ಚಿತ್ರಕ್ಕಾಗಿ ಪಂತ್ ಮತ್ತೆ ಗಮನ ಸೆಳೆದಿದ್ದಾರೆ.

Story first published: Thursday, January 17, 2019, 13:25 [IST]
Other articles published on Jan 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+