For Quick Alerts
ALLOW NOTIFICATIONS  
For Daily Alerts
 

ಭಾರತೀಯನಂತೆ ವಿಶೇಷ ದಾಖಲೆ ಪಟ್ಟಿ ಸೇರಿದ ಇಯಾನ್ ಮಾರ್ಗನ್!

Eoin Morgan Becomes First England Mens Cricketer To Play 100 T20Is

ಅಹ್ಮದಾಬಾದ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಹೊಸ ದಾಖಲೆಗೆ ಕಾರಣರಾಗಿದ್ದಾರೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 16) ನಡೆದ ಭಾರತ-ಇಂಗ್ಲೆಂಡ್ ತೃತೀಯ ಟಿ20ಐ ಪಂದ್ಯದಲ್ಲಿ ಮಾರ್ಗನ್ ಈ ಸಾಧನೆ ಮೆರೆದಿದ್ದಾರೆ. ಮಾರ್ಗನ್ ಮೈದಾನಕ್ಕಿಳಿಯುತ್ತಲೇ ಅವರ ಹೆಸರಿಗೆ ದಾಖಲೆ ಸೇರ್ಪಡೆಯಾಗಿದೆ.

ಇಂಗ್ಲೆಂಡ್ ಪರ ಅಂತಾರಾಷ್ಟ್ರಿಯ ಟಿ20ನಲ್ಲಿ 100 ಪಂದ್ಯಗಳನ್ನಾಡಿದ ಮೊದಲನೇ ಬ್ಯಾಟ್ಸ್‌ಮನ್‌ ಆಗಿ ಇಯಾನ್ ಮಾರ್ಗನ್ ಗುರುತಿಸಿಕೊಂಡಿದ್ದಾರೆ. ಮಾರ್ಗನ್ ಅಲ್ಲದೆ 100 ಟಿ20 ಪಂದ್ಯಗಳನ್ನಾಡಿದ ಇನ್ನೂ ಮೂವರು ಆಟಗಾರರಿದ್ದಾರೆ. ಇದರಲ್ಲಿ ಒಬ್ಬ ಭಾರತೀಯನೂ ಇದ್ದಾರೆ.

ಸಾಧನೆ ಅಂಕಿ-ಅಂಶಗಳು

ಸಾಧನೆ ಅಂಕಿ-ಅಂಶಗಳು

ಇಂಗ್ಲೆಂಡ್ ಪರ ಇಯಾನ್ ಮಾರ್ಗನ್ 16 ಟೆಸ್ಟ್‌ ಪಂದ್ಯಗಳಲ್ಲಿ 700 ರನ್, 242 ಏಕದಿನ ಪಂದ್ಯಗಳಲ್ಲಿ 7598 ರನ್, 100 ಟಿ20ಐ ಪಂದ್ಯಗಳಲ್ಲಿ 2306 ರನ್, 66 ಟಿ20ಐ ಪಂದ್ಯಗಳಲ್ಲಿ 1272 ರನ್ ದಾಖಲೆ ಹೊಂದಿದ್ದಾರೆ. ಏಕದಿನದಲ್ಲಿ ಒಟ್ಟು 14 ಶತಕಗಳ ದಾಖಲೆ ಮಾರ್ಗನ್ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ಮಾರ್ಗನ್ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವ ವಹಿಸಿಕೊಂಡಿದ್ದಾರೆ.

100 ಟಿ20ಐ ಆಡಿದ ಆಟಗಾರರು

100 ಟಿ20ಐ ಆಡಿದ ಆಟಗಾರರು

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಅಪರೂಪದ ದಾಖಲೆ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ರಾಸ್ ಟೇಲರ್, ಪಾಕಿಸ್ತಾನದ ಶೋಯೆಬ್ ಮಲಿಕ್, ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಮತ್ತು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಸೇರಿಕೊಂಡಿದ್ದಾರೆ.

ವಿರಾಟ್ 3000 ರನ್

ವಿರಾಟ್ 3000 ರನ್

ಭಾರತ-ಇಂಗ್ಲೆಂಡ್ ಟಿ20 ಸರಣಿಯಲ್ಲೇ ಭಾರತದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3000 ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ದಾಖಲೆ ನಿರ್ಮಿಸಿದ್ದಾರೆ. ಒಟ್ಟು 87 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 3078 ರನ್ ಗಳಿಸಿದ್ದಾರೆ. ಟಿ20ಐ ಅತ್ಯಧಿಕ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 99 ಪಂದ್ಯಗಳಲ್ಲಿ 2,839 ರನ್ ಗಳಿಸಿದ್ದಾರೆ.

Story first published: Tuesday, March 16, 2021, 21:40 [IST]
Other articles published on Mar 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+