Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Lords Test: ಇಂಗ್ಲೆಂಡ್ ಆಟ ಶೈಲಿಯ ಬಗ್ಗೆ ಕಿಡಿಕಾರಿದ ಮಾಜಿ ನಾಯಕ ಇಯಾನ್ ಮಾರ್ಗನ್

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಆಶಸ್ ಸರಣಿಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಪ್ರದರ್ಶನದ ಮೂಲಕ ಮೇಲುಗೈ ಸಾಧಿಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಗಳಿಸಿದ 416 ರನ್‌ಗಳಿಗೆ ಬದಲಾಗಿ ತನ್ನ 'ಬ್ಯಾಸ್‌ಬಾಲ್' ಶೈಲಿಯ ಆಟದಲ್ಲಿ ಇಂಗ್ಲೆಂಡ್‌ಗೆ ಗಳಿಸಲು ಸಾಧ್ಯವಾಗಿದ್ದು 325 ರನ್ ಮಾತ್ರ.

ಇಂಗ್ಲೆಂಡ್ ತಂಡದ ಈ ಆಟದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯೆ ನೀಡಿದ್ದು ಇಂಗ್ಲೆಂಡ್ ಆಟದ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತ್ಯುತ್ತಮ ತಂಡವಾಗಿರುವ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ಇಂಗ್ಲೆಂಡ್ ತಂಡ ಇನ್ನಷ್ಟು ಹೆಚ್ಚುನ ಲೆಕ್ಕಾಚಾರದೊಂದಿಗೆ ಆಡಬೇಕು ಎಂದಿದ್ದಾರೆ ಇಯಾನ್ ಮಾರ್ಗನ್.

Eoin Morgan criticize Englands approach said You cant just go and belt best in world all over place

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ತನ್ನ ಕೊನೆಯ ಆರು ವಿಕೆಟ್‌ಗಳನ್ನು ಕೇವಲ 47 ರನ್‌ಗಳ ಅಂತರದಲ್ಲಿ ಕಳೆದುಕೊಂಡಿದೆ. ಹೀಗಾಗಿ ಮೂರನೇ ದಿನದ ಮೊದಲ ಸೆಶನ್‌ನಲ್ಲಿಯೇ ಇಂಗ್ಲೆಂಡ್ ತಂಡ ಆಲೌಟ್ ಆಗಿದ್ದು ಆಸ್ಟ್ರೇಲಿಯಾ ತಂಡ ಎರಡನೇ ಸರದಿಯಲ್ಲಿ ಬ್ಯಾಟಿಂಗ್‌ಗೆ ಇಳಿಯಿತು. ಹೀಗಾಗಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಧಾನವನ್ನು ಮಾಜಿ ನಾಐಕ ಇಯಾನ್ ಮಾರ್ಗನ್ ಪ್ರಶ್ನಿಸಿದ್ದು ವಿಶ್ವದ ಅತ್ಯುತ್ತಮ ಆಟಗಾರರನ್ನು ಒಂದೇ ಮಾದರಿಯಲ್ಲಿ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ ಇಯಾನ್ ಮಾರ್ಗನ್.

"ಸಾಮಾನ್ಯಕ್ಕೆ ವಿರುದ್ಧವಾಗಿ ನೀವು ತೆಗೆದುಕೊಳ್ಳುವ ಹೆಚ್ಚಿನ ಪ್ರಮಾಣದ ಅಪಾಯಕ್ಕೂ ಒಂದು ಮಿತಿ ಇರಬೇಕು ಎಂಬುದು ನನ್ನ ಭಾವನೆ. ಆದರೆ ಆಸ್ಟ್ರೇಲಿಯಾ ಅದ್ಭುತವಾದ ದಿನವನ್ನು ಹೊಂದಿದೆ" ಎಂದು ಇಯಾನ್ ಮಾರ್ಗನ್ ಸ್ಕೈ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ. "ಇಂಗ್ಲೆಂಡ್ ತನ್ನ ಶೈಲಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಬೇಕು. ಆದರೆ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಹಾಗೂ ರಣತಂತ್ರ ಅದ್ಭುತವಾಗಿತ್ತು. ಅವರ ದಾಳಿ ವೇಗವಾಗಿ ಹಾಗೂ ಅತ್ಯಂತ ನಿಖರವಾಗುತ್ತು. ಇನ್ನು ಅತ್ಯುತ್ತಮ ತಂಡದ ವಿರುದ್ಧ ಹಾಗೆಯೇ ಹೋಗಿ ಸ್ಪರ್ದೆಗೆ ಇಳಿಯಲು ಸಾಧ್ಯವಿಲ್ಲ. ಈಗಿನದಕ್ಕಿಂತ ಇನ್ನೂ ಹೆಚ್ಚಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಬೇಕಿದೆ" ಎಂದಿದ್ದಾರೆ ಇಯಾನ್ ಮಾರ್ಗನ್.

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್

Story first published: Friday, June 30, 2023, 22:28 [IST]
Other articles published on Jun 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+