
ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡವನ್ನು ಎತ್ತರಕ್ಕೆ ತಲುಪಿಸಿದ್ದಾರೆ ಎಂದು ಬಟ್ಲರ್ ಹೇಳಿದ್ದಾರೆ.
ಜೋಸ್ ಬಟ್ಲರ್ ಭಾರತದ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 100ನೇ ಅಂತಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿದ ಕೇವಲ 4ನೇ ಆಟಗಾರ ಎನಿಸಿದ್ದಾರೆ. ಈ ಪಂದ್ಯದ ಆರಂಭಕ್ಕೂ ವಿಶೇಷ ಕ್ಯಾಪ್‌ಅನ್ನು ಇಯಾನ್ ಮಾರ್ಗನ್‌ಗೆ ಆಪ್ತ ಗೆಳೆಯನೂ ಆಗಿರುವ ಜೋಸ್ ಬಟ್ಲರ್ ನೀಡಿದರು.
"ಇಯಾನ್ ಮಾರ್ಗನ್ ವಿಶೇಷವಾದ ಮೈಲಿಗಲ್ಲನ್ನು ಇಂದು ತಲುಪಿದ್ದಾರೆ. ಆತ ಇಂಗ್ಲೆಂಡ್ ವೈಟ್‌ಬಾಲ್ ಕ್ರಿಕೆಟ್‌ನ ಆದ್ಯ ಪ್ರವರ್ತಕನಾಗಿದ್ದಾರೆ. ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಸೀಮಿತ ಓವರ್‌ಗಳಲ್ಲಿ ಹಿಂದೆಂದೂ ಸಾಧಿಸಲಾಗದ ಸಾಧನೆಯನ್ನು ಮಾಡಿ ತೊರಿಸಿದೆ. ಇದನ್ನು ಅಸಾಧಾರಣ ರೀತಿಯಲ್ಲಿ ಇಯಾನ್ ಮಾರ್ಗನ್ ಸಾಧಿಸಿದ್ದಾರೆ" ಎಂದು ಸೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.
"ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರಂತೆಯೇ ಜೋಸ್ ಬಟ್ಲರ್ ಅಂಕುಡೊಂಕುಗಳಿಗಿಂತ ಯಾವಾಗಲೂ ಮುಂದಿರುತ್ತಿದ್ದರು. ಈ ಇಬ್ಬರು ಆಟಗಾರರು ವೈಟ್‌ಬಾಲ್ ಕ್ರಿಕೆಟ್‌ಅನ್ನು ಭಿನ್ನವಾಗಿ ನೋಡುವಂತೆ ಮಾಡಿದರು ಹಾಗೂ ಆಟವನ್ನು ಮುಂದಕ್ಕೆ ತೆಗೆದುಕೊಂಡು ಸಾಗಿದರು" ಎಂದು ಜೋಸ್ ಬಟ್ಲರ್ ಪ್ರತಿಕ್ರಿಯಿಸಿದ್ದಾರೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಈಗ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಮುನ್ನಡೆಯನ್ನು ಪಡೆದುಕೊಂಡಿದೆ. ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಉಳಿದಿದ್ದು ಭಾರತ ಸರಣಿಯನ್ನು ವಶಕ್ಕೆ ಪಡೆಯಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಕೂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.