2024ರ ಟಿ20 ವಿಶ್ವಕಪ್ ಗೆಲ್ಲುವ ಮೆಚ್ಚಿನ ತಂಡ ಹೆಸರಿಸಿದ ಇಯಾನ್ ಮಾರ್ಗನ್
ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದ್ದು, ಬಹುತೇಕ ತಂಡಗಳು ಈಗಾಗಲೇ ಆತಿಥ್ಯ ರಾಷ್ಟ್ರಗಳನ್ನು ತಲುಪಿವೆ.
ಮತ್ತೊಂದು ಐಸಿಸಿ ಕ್ರಿಕೆಟ್ ಹಬ್ಬಕ್ಕೆ ಜಗತ್ತಿನಾದ್ಯಂತದ ಅಭಿಮಾನಿಗಳು ಕಾತರರಾಗಿದ್ದಾರೆ ಮತ್ತು ರೋಮಾಂಚಕ ಕ್ರಿಕೆಟ್‌ನ ಅನುಭವ ಸವಿಯಲು ಕಾಯುತ್ತಿದ್ದಾರೆ. ಅಲ್ಲದೆ, 2007ರ ನಂತರ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲು ಭಾರತ ಎದುರು ನೋಡುತ್ತಿದೆ.

ಇದೇ ವೇಳೆ 2024ರ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತವೇ ಬಲಿಷ್ಠ ತಂಡ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯಾವಳಿಗೂ ಮುನ್ನ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಅವರು, ಭಾರತದ ಅದ್ಭುತ ತಂಡದ ಗುಣಮಟ್ಟ ಮತ್ತು ಪ್ರತಿಭೆ ಅವರನ್ನು ಅತ್ಯಂತ ಬಲಿಷ್ಠ ಘಟಕವನ್ನಾಗಿ ಮಾಡುತ್ತದೆ ಮತ್ತು ಭಾರತ ಯಾವುದೇ ತಂಡವನ್ನು ಯೋಗ್ಯ ಅಂತರದಿಂದ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಯಾನ್ ಮಾರ್ಗನ್ ತಿಳಿಸಿದರು.
2016ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಮತ್ತು 2019ರಲ್ಲಿ ಇಂಗ್ಲೆಂಡ್ ತಂಡಕ್ಕೆ ಏಕದಿನ ವಿಶ್ವಕಪ್ ಗೆದ್ದಕೊಟ್ಟ ನಾಯಕ ಇಯಾನ್ ಮಾರ್ಗನ್, 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರು ನಂಬಲಾಗದಷ್ಟು ಬಲಿಷ್ಠರಾಗಿದ್ದಾರೆ ಎಂದು ಇಯಾನ್ ಮಾರ್ಗನ್ ಹೇಳಿದರು.

"ಪಂದ್ಯಾವಳಿಯುದ್ದಕ್ಕೂ ಗಾಯಗಳಿದ್ದರೂ ಸಹ ನಿಸ್ಸಂದೇಹವಾಗಿ ಬಲಿಷ್ಠ ತಂಡವೆಂದರೆ ಭಾರತ. ಅವರ ಶಕ್ತಿ ಮತ್ತು ಸಾಮರ್ಥ್ಯವು ಈ ಸಮಯದಲ್ಲಿ ಸಂಪೂರ್ಣವಾಗಿ ನಂಬಲಾಗದಂತಿದೆ. ಭಾರತ ತಂಡ ಹೊಂದಿರುವ ಗುಣಮಟ್ಟದಿಂದಾಗಿ ಅವರ 15 ಸದಸ್ಯರ ತಂಡದಲ್ಲಿ ತಪ್ಪಿಸಿಕೊಂಡ ಆಟಗಾರರ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ," ಎಂದು ಇಯಾನ್ ಮಾರ್ಗನ್ ಪ್ರಶಂಸಿಸಿದರು.
"ಭಾರತ ನನಗೆ ಅಚ್ಚುಮೆಚ್ಚಿನ ತಂಡ. ಇದಕ್ಕೆ ಕಾರಣ ಅವರು ಕಾಗದದ ಮೇಲೆ ಹೊಂದಿರುವ ಗುಣಮಟ್ಟ ಎಂದು ನಾನು ಭಾವಿಸುತ್ತೇನೆ. ಅವರು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯಾರನ್ನಾದರೂ ದೊಡ್ಡ ಅಂತರದಲ್ಲಿ ಸೋಲಿಸಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದರು.
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ
ಇತ್ತೀಚಿನ ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿಲ್ಲ. 2021ರಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸತತ ಸೋಲಿನ ನಂತರ ಸೂಪರ್ 12 ಹಂತದಿಂದ ಹೊರಬಿದ್ದಿತು. 2022ರ ವಿಶ್ವಕಪ್‌ನಲ್ಲಿ ಭಾರತ ತಂಡವು ಸ್ಮರಣೀಯ ಓಟವನ್ನು ಹೊಂದಿತ್ತು. ಆದರೆ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಹೊರಬಿತ್ತು.
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ಅಥರ್ಟನ್ ಅವರು ಅದೇ ಚರ್ಚೆಯಲ್ಲಿ ಮಾತನಾಡುವಾಗ, ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲದಿರುವುದು ವಿಚಿತ್ರವಾಗಿದೆ ಎಂದರು.
"2007ರಲ್ಲಿ ಮೊದಲ ಟಿ20 ವಿಶ್ವಕಪ್ ನಂತರ ಭಾರತ ಮತ್ತೆ ಅದನ್ನು ಗೆದ್ದಿಲ್ಲ. ಅದು ದೊಡ್ಡ ವಿಪರ್ಯಾಸ. ಅದು ಎಷ್ಟು ಸಮಯದವರೆಗೆ ವಿಪರ್ಯಾಸವಾಗಿದೆ. ಏಕೆಂದರೆ ಎಲ್ಲರೂ ಐಪಿಎಲ್ ಬಗ್ಗೆ ಮಾತನಾಡುತ್ತಾರೆ ಮತ್ತು ಭಾರತದ ಟಿ20 ಕ್ರಿಕೆಟ್ ಹೇಗೆ ಸುಧಾರಿಸಿದೆ ಎನ್ನುತ್ತಾರೆ. ವಿಪರ್ಯಾಸವೆಂದರೆ ಅವರು ಐಪಿಎಲ್ ಪೂರ್ವದಲ್ಲಿ ಏಕೈಕ ಟ್ರೋಫಿ ಗೆದ್ದಿದ್ದಾರೆ," ಎಂದು ಮೈಕೆಲ್ ಅಥರ್ಟನ್ ಗಮನಸೆಳೆದರು.
2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications