For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಎಂಎಸ್ ಧೋನಿ ದಾಖಲೆ ಮುರಿದ ಇಯಾನ್ ಮಾರ್ಗನ್

Eoin Morgan Surpassed Indias Former Captain Ms Dhoni Record

ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಟೀಮ್ ಇಂಡಿಯಾದ ನಾಯಕ ಎಂಎಸ್ ಧೋನಿ ದಾಖಲೆಯೊಂದನ್ನು ಮುರಿದಿದ್ದಾರೆ. ಈ ಮೂಲಕ ವಿಶೇಷ ಸಾಧನೆಯ ಪಟ್ಟಿಯಲ್ಲಿ ಇಯಾನ್ ಮಾರ್ಗನ್ ಕಾಣಿಸಿಕೊಂಡಿದ್ದಾರೆ.

ಐರ್ಲೆಂಡ್ ವಿರುದ್ಧದ ಔಪಚಾರಿಕ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ನಾಯಕ ಇಯಾನ್ ಮಾರ್ಗನ್ ಭರ್ಜರಿ ಶತಕವನ್ನು ಸಿಡಿಸುವ ಮೂಲಕ ತಂಡವನ್ನು ಮೇಲಕ್ಕೆತ್ತಿದ್ದರು.

ತನ್ನ ಈ ಇನ್ನಿಂಗ್ಸ್‌ನಲ್ಲಿ 84 ಎಸೆತಗಳನ್ನು ಎದುರಿಸಿದ ಮಾರ್ಗನ್ 106 ರನ್ ಗಳಿಸಿದರು. ಇದರಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಸೇರಿತ್ತು. ಇಂದಿನ ಪಂದ್ಯದಲ್ಲಿ ಸಿಡಿಸಿದ ನಾಲ್ಕು ಸಿಕ್ಸರ್‌ಗಳೊಂದಿಗೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ನಾಯಕನಾಗಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಧೋನಿ 211 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆದರೆ ಈ ಸಾಧನೆಯನ್ನು ಇಂಗ್ಲೆಂಡ್ ನಾಯಕ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ನಾಯಕನಾಗಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೂರನೇ ಪಂದ್ಯದಲ್ಲಿ ಐರ್ಲೆಂಡ್ ವೈಟ್‌ವಾಶ್ ಅವಮಾನದಿಂದ ಪಾರಾಗಲು ಹವಣಿಸುತ್ತಿದೆ. ಆರಂಭದಲ್ಲಿ ಐರ್ಲೆಂಡ್ ಇದರಲ್ಲಿ ಯಶಸ್ಸು ಕಂಡಿತಾದರೂ ನಾಯಕ ಇಯಾನ್ ಮೋರ್ಗನ್ ತಂಡಕ್ಕೆ ಚೇತರಿಕೆಯನ್ನು ನೀಡಿದ್ದಾರೆ.

Story first published: Wednesday, August 5, 2020, 10:14 [IST]
Other articles published on Aug 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+