Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊಹಮ್ಮದ್‌ ಶಮಿಯನ್ನು ಲಫಂಗಾ ಎಂದು ಜರಿದ ಪತ್ನಿ ಹಸೀನ್‌!

ಟಿಕ್ ಟಾಕ್ ಖಾತೆ ತೆರೆದ ಶಮಿಗೆ ದೊಡ್ಡ ಚಿಂತೆ..! | Oneindia Kannada
Estranged Wife Hasin Jahan Slams Beshram Mohammed Shami

ಬೆಂಗಳೂರು, ಜೂನ್‌ 28: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ಸ್‌ ಕಡೆಗೆ ಮುನ್ನುಗ್ಗುತ್ತಿರುವ ಭಾರತ ತಂಡದ ಪರ ಭರ್ಜರಿ ಬೌಲಿಂಗ್‌ ದಾಳಿ ನಡೆಸುತ್ತಿರುವ ವೇಗಿ ಮೊಹಮ್ಮದ್‌ ಶಮಿ ಆಡಿದ ಎರಡು ಪಂದ್ಯಗಳಿಂದ 8 ವಿಕೆಟ್‌ ಪಡೆದು ಮಿಂಚಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆದರೆ, ಅವರ ವೃತ್ತಿ ಬದುಕಿನಷ್ಟೇ ಅದ್ಭುತ ರೀತಿಯಲ್ಲಿ ಅವರ ವೈಯಕ್ತಿಕ ಜೀವನ ಸಾಗುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಕಳೆದ ಒಂದು ವರ್ಷದಿಂದ ಸಾಂಸಾರಿಕ ಕಲಹದ ವಿಚಾರವಾಗಿ ಶಮಿ ಅನಗತ್ಯವಾಗಿ ಸುದ್ದಿಯಾಗುತ್ತಿದ್ದಾರೆ. ಹೀಗಾಗಿ ಅವರ ಕೌಟುಂಬಿಕ ವಿಚಾರ ಎಲ್ಲೆಡೆ ಅನಗತ್ಯ ಚರ್ಚೆಗೆ ಕಾರಣವಾಗಿದೆ.

ಬಲಗೈ ವೇಗದ ಬೌಲರ್‌ 29 ವರ್ಷದ ಮೊಹಮ್ಮದ್‌ ಶಮಿ ಅವರ ವಿರಕ್ತ ಪತ್ನಿ ಹಸೀನ್‌ ಜಹಾನ್‌, ಶಮಿ ವಿರುದ್ಧ ಕಳೆದ ವರ್ಷ ವರದಕ್ಷಿಣೆ ಕಿರುಕು ಮತ್ತು ಕುಟುಂಬದವರೊಡನೆ ಸೇರಿ ದೈಹಿಕೆ ಹಿಂಸೆ ನಡೆಸುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದೀಗ ಶಮಿ ವಿರುದ್ಧ ಜರಿಯುವುದನ್ನು ಮುಂದುವರಿಸಲು ಮತ್ತೊಂದು ದಾರಿ ಕಂಡುಕೊಂಡಿದ್ದಾರೆ.

ಜನಪ್ರಿಯ ಸೋಷಿಯಲ್‌ ಮೊಬೈಲ್‌ ಅಪ್ಲಿಕೇಷನ್‌ ಆಗಿರುವ ಟಿಕ್‌ಟಾಕ್‌ನಲ್ಲಿ ಶಮಿ ಮಹಿಳೆಯರನ್ನು ಫಾಲೋ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಪತ್ನಿ ಹಸೀನ್‌ ಜಹಾನ್‌, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶಮಿ ಅವರನ್ನು "ಲಫಂಗಾ" ಎಂದು ಜರಿದಿದ್ದಾರೆ.

"ಲಫಂಗಾ ಶಮಿ ಟಿಕ್‌ಟಾಕ್‌ ಖಾತೆ ತೆರೆದಿದ್ದಾನೆ. ಅದರಲ್ಲಿ 97 ಮಂದಿಯನ್ನು ಫಾಲೊ ಮಾಡುತ್ತಿದ್ದಾನೆ. ಇದರಲ್ಲಿ 90 ಮಂದಿ ಮಹಿಳೆಯರು. 'ಲಫಂಗಾ'. ಕಿಂಚಿತ್ತೂ ನಾಚಿಕೆ ಇಲ್ಲದಂತಹ ಲಫಂಗಾ... ಒಂದು ಹೆಣ್ಣು ಮಗುವಿನ ತಂದೆಯಾಗಿಯೂ ಈರೀತಿ ಮಾಡುತ್ತಿದ್ದಾನೆ. ಛೀ.. ಛೀ..'' ಎಂದು ಹಸೀನ್‌ ಜಹಾನ್‌ ತಮ್ಮ ಫೇಸ್ಬುಕ್‌ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.

ಇದಕ್ಕೆ ಹಲವಾರು ಕಾಮೆಂಟ್‌ಗಳು ಕೂಡ ಹರಿದು ಬಂದಿದ್ದು, ಕೆಲವರು ಹಸೀನ್‌ ಜಹಾನ್‌ ಅವರಿಗೆ ಅನ್ಯಾಯವಾಗಿದೆ ಎಂದು ಮರುಗಿದರೆ, ಮತ್ತೂ ಕೆಲವರು ನಿನ್ನ ನಾಟಕ ಸಾಕಮ್ಮ, ಬಿಟ್ಟಿ ಪ್ರಚಾರ ಸಲುವಾಗಿ ಈ ರೀತಿ ನಡೆದುಕೊಳ್ಳಬೇಡ. ಮನೆಯ ವಿಷಯವನ್ನು ಬೀದಿಗಿಟ್ಟು ರಂಪ ಮಾಡಬೇಡ ಎಂದೆಲ್ಲಾ ಬುದ್ದಿವಾದ ಹೇಳಿದ್ದಾರೆ. ಮತ್ತೂ ಕೆಲವರು ನಿಮ್ಮಿಬ್ಬರ ನಡುವಣ ಗೊಂದಲ ಬಹುಬೇಗನೆ ಬಗೆಹರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಕಾಮೆಂಟ್‌ ಮಾಡಿದ್ದಾರೆ.

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದ ಶಮಿ, ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದು ತಂಡಕ್ಕೆ ಜಯ ತಂದುಕೊಟ್ಟಿದ್ದರು. ವಿಶ್ವಕಪ್‌ ಇತಿಹಾಸದಲ್ಲಿ ಚೇತನ್‌ ಶರ್ಮಾ ಅವರ ಬಳಿಕ ಭಾರತದ ಪರ ಹ್ಯಾಟ್ರಿಕ್‌ ಸಾಧನೆ ಮಾಡಿದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲೂ 16ಕ್ಕೆ 4 ವಿಕೆಟ್‌ ಪಡೆದು ಶಮಿ ಮಿಂಚಿದ್ದರು.

ಅನುಭವಿ ವೇಗದ ಬೌಲರ್‌ ಭವನೇಶ್ವರ್‌ ಕುಮಾರ್‌ ಗಾಯಗೊಂಡ ಬಳಿಕ ತಂಡದಲ್ಲಿ ಆಡುವ ಅವಕಾಶ ಪಡೆದ ಶಮಿ, ಇದೀಗ ಸತತ ಎರಡು ಪಂದ್ಯಗಳಲ್ಲಿ 4 ವಿಕೆಟ್‌ ಪಡೆದ ಸಾಧನೆ ಮಾಡುವ ತಮ್ಮನ್ನು ತಂಡದ ಖಾಯಂ ಸದಸ್ಯನನ್ನಾಗಿವುದಕ್ಕೆ ಟೀಮ್‌ ಮ್ಯಾನೇಜ್ಮೆಂಟ್‌ ಮೇಲೆ ಒತ್ತಡ ತಂದಿದ್ದಾರೆ.

ಭಾರತ ತಂಡ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿದ್ದು, ಇನ್ನೊಂದು ಗೆಲುವು ಸಾಧ್ಯವಾದರೆ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಡಲಿದೆ. ಇದೀಗ ಇದೇ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಟೀಮ್‌ ಇಂಡಿಯಾ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಪಡೆ ಗೆದ್ದರೆ ಇಂಗ್ಲೆಂಡ್‌ ತಂಡದ ವಿಶ್ವಕಪ್‌ ಅಭಿಯಾನ ಅಂತ್ಯಗೊಳ್ಳಲಿದೆ.

Story first published: Friday, June 28, 2019, 16:34 [IST]
Other articles published on Jun 28, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+