ETPL: ಯುರೋಪಿಯನ್ ಟಿ20 ಲೀಗ್‌ಗೆ ರಾಹುಲ್ ದ್ರಾವಿಡ್ ಎಂಟ್ರಿ: ಡಬ್ಲಿನ್ ತಂಡದ ಮಾಲೀಕರಾದ ಕನ್ನಡಿಗ
ETPL: ಕ್ರಿಕೆಟ್ ಜಗತ್ತಿನಲ್ಲಿ ಮಹತ್ವದ ಹೊಸ ಬೆಳವಣಿಗೆ ಆಗಿದೆ. ಇದರಲ್ಲಿ ಕನ್ನಡಿಗ ಹಾಗೂ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಯುರೋಪಿಯನ್ T20 ಪ್ರೀಮಿಯರ್ ಲೀಗ್ (ETPL) ಭಾರತದ ಕ್ರಿಕೆಟ್ ಐಕಾನ್ ರಾಹುಲ್ ದ್ರಾವಿಡ್ ಅವರನ್ನು ಡಬ್ಲಿನ್ ಗಾರ್ಡಿಯನ್ಸ್ ಫ್ರಾಂಚೈಸಿಯ ಮಾಲೀಕರೆಂದು ಘೋಷಿಸಿದ್ದು, 2026ರಲ್ಲಿ ಆರಂಭವಾಗಲಿರುವ ಲೀಗ್‌ನ ಎಲ್ಲ ಆರು ತಂಡಗಳ ಫ್ರಾಂಚೈಸಿ ರಚನೆ ಪೂರ್ಣವಾದಂತೆ ಆಗಿದೆ.
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೂ ಮೊದಲು ಸೋಮವಾರ ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಡಬ್ಲಿನ್ ಗಾರ್ಡಿಯನ್ಸ್ ತಂಡದ ಮಾಲೀಕರಾಗಿ ಘೋಷಿಸಲಾಗಿದೆ. ಇಟಿಪಿಎಲ್ ತನ್ನ ಆರು ತಂಡಗಳ ಫ್ರಾಂಚೈಸಿ ಮಾಲೀಕತ್ವವನ್ನು ಘೋಷಿಸಿದೆ.

"ಇಟಿಪಿಎಲ್ ನನ್ನನ್ನು ಸೆಳೆದಿದೆ. ಇದಕ್ಕೆ ಪ್ರಮುಖ ಕಾರಣ ಅದರ ಹಿಂದಿರುವ ದೊಡ್ಡ ದೃಷ್ಟಿಕೋನ. ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಯನ್ನು ಬಲಪಡಿಸುವುದರ ಜೊತೆಗೆ, ಐರ್ಲೆಂಡ್ ಮತ್ತು ಯುರೋಪಿನಾದ್ಯಂತ ಉದಯೋನ್ಮುಖ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಯುರೋಪಿನಲ್ಲಿ ಕ್ರಿಕೆಟ್ ಬೆಳವಣಿಗೆಗೆ ಸಹಕಾರ ನೀಡುವ ಅವಕಾಶ ಇದಾಗಿದೆ" ಎಂದು ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ.
ಭಾರತದ ಮಾಜಿ ಆಲ್‌ರೌಂಡರ್ ಆರ್ ಅಶ್ವಿನ್ ಗಾರ್ಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ, ಅವರು ಬೆಲ್‌ಫಾಸ್ಟ್, ಎಡಿನ್‌ಬರ್ಗ್, ಗ್ಲ್ಯಾಸ್ಗೋ, ರೋಟರ್‌ಡ್ಯಾಮ್ ಮತ್ತು ಆಮ್ಸ್ಟರ್‌ಡ್ಯಾಮ್‌ನ ತಂಡಗಳ ವಿರುದ್ಧ ಸ್ಪರ್ಧಿಸಲಿದ್ದಾರೆ.
"ಡಬ್ಲಿನ್ ಈಗಾಗಲೇ ಉತ್ಸಾಹಭರಿತ ಕ್ರಿಕೆಟ್ ಸಮುದಾಯವನ್ನು ಹೊಂದಿದ್ದು, ಬೆಳವಣಿಗೆಗೆ ಅಪಾರ ಸಾಧ್ಯತೆಗಳಿವೆ. ಮುಂದಿನ ಪೀಳಿಗೆಯ ಆಟಗಾರರನ್ನು ಬೆಳೆಸುವುದು ನನಗೆ ಸದಾ ಪ್ರಮುಖ ವಿಷಯವಾಗಿದ್ದು, ಆ ಪ್ರಯಾಣದಲ್ಲಿ ಇಟಿಪಿಎಲ್ ಅರ್ಥಪೂರ್ಣ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ನನ್ನದಲ್ಲಿದೆ" ಎಂದು ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ಲ್ಯಾಸ್ಗೋ ಫ್ರಾಂಚೈಸಿಯ ವಿಪುಲ್ ಅಗರ್ವಾಲ್, ರೋಟರ್‌ಡ್ಯಾಮ್ ಫ್ರಾಂಚೈಸಿಯ ಜಾಂಟಿ ರೋಡ್ಸ್ ಹಾಗೂ ಮಧುಕರ್ ಶ್ರೀ, ಇಟಿಪಿಎಲ್ ಸಹ-ಸ್ಥಾಪಕರಾದ ಅಭಿಷೇಕ್ ಬಚ್ಚನ್, ಸೌರವ್ ಬ್ಯಾನರ್ಜಿ, ಪ್ರಿಯಾಂಕಾ ಕೌಲ್ ಹಾಗೂ ಧೀರಜ್ ಮಲ್ಹೋತ್ರಾ ಭಾಗವಹಿಸಿದ್ದರು.
ಐರ್ಲೆಂಡ್ ಕ್ರಿಕೆಟ್ ಅಧ್ಯಕ್ಷ ಬ್ರಿಯಾನ್ ಮ್ಯಾಕ್‌ನೀಸ್, ಕ್ರಿಕೆಟ್ ಐರ್ಲೆಂಡ್‌ನ ಸಿಇಒ ಸಾರಾ ಕೀನ್, ಕ್ರಿಕೆಟ್ ನೆದರ್‌ಲ್ಯಾಂಡ್ಸ್‌ನ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ರೋಲ್ಯಾಂಡ್ ಲೆಫೆಬ್ವ್ರೆ ಹಾಗೂ ಕ್ರಿಕೆಟ್ ಸ್ಕಾಟ್ಲೆಂಡ್‌ನ ಸಿಇಒ ಟ್ರುಡಿ ಲಿಂಡ್‌ಬ್ಲೇಡ್ ಸೇರಿದಂತೆ ಯುರೋಪಿಯನ್ ಕ್ರಿಕೆಟ್‌ನ ಹಲವು ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇನ್ನು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿಷೇಕ್ ಬಚ್ಚನ್ ಅವರು "ETPL ಕೇವಲ ಒಂದು ಕ್ರಿಕೆಟ್ ಲೀಗ್ ನಿರ್ಮಿಸುವುದಕ್ಕಿಂತ ಹೆಚ್ಚಿನ ಗುರಿ ಹೊಂದಿದೆ. ಇದು ಐರ್ಲೆಂಡ್ ಮತ್ತು ಯುರೋಪ್‌ನಾದ್ಯಂತ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲಿದೆ. ಅಲ್ಲದೆ ಅವರ ಕ್ರಿಕೆಟ್ ಜ್ಞಾನವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ" ಎಂದಿದ್ದಾರೆ. ರಾಹುಲ್ ದ್ರಾವಿಡ್, ಸ್ಟೀವ್ ವಾ, ಗ್ಲೆನ್ ಮ್ಯಾಕ್ಸ್‌ವೆಲ್, ಜೊಂಟಿ ರೋಡ್ಸ್, ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್ ಹಾಗೂ ಹೆನ್ರಿಚ್ ಕ್ಲಾಸೆನ್ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ಈ ಲೀಗ್‌ಗೆ ಕೈಜೋಡಿಸಿರುವುದು ಈ ಲೀಗ್‌ಗೆ ಜಾಗತಿಕ ಮಟ್ಟದ ಬೆಂಬಲ ದೊರೆತಿರುವುದನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ETPL ಫ್ರಾಂಚೈಸಿಗಳ ಮಾಲೀಕತ್ವದ ರಚನೆ ವಿವರ
ETPL ಫ್ರಾಂಚೈಸಿ ಮಾಲೀಕತ್ವವು ಕ್ರಿಕೆಟ್ ದಿಗ್ಗಜರು, ಉದ್ಯಮಿಗಳು ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಂದ ಕೂಡಿದೆ. ಡಬ್ಲಿನ್ ಫ್ರಾಂಚೈಸಿ - ರಾಹುಲ್ ದ್ರಾವಿಡ್ - ಬೆಲ್‌ಫಾಸ್ಟ್ ಫ್ರಾಂಚೈಸಿ - ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ರೋಹನ್ ಲಂಡ್ - ಎಡಿನ್‌ಬರ್ಗ್ ಫ್ರಾಂಚೈಸಿ - ಕೈಲ್ ಮಿಲ್ಸ್, ನಾಥನ್ ಮೆಕಲಮ್ ಮತ್ತು ರಾಚೆಲ್ ವೈಸ್‌ಮನ್ - ಗ್ಲಾಸ್ಗೋ ಫ್ರಾಂಚೈಸಿ - ವಿಪುಲ್ ಅಗರ್ವಾಲ್ ಮತ್ತು ಕ್ರಿಸ್ ಗೇಲ್ - ಆಮ್ಸ್ಟರ್‌ಡ್ಯಾಮ್ ಫ್ರಾಂಚೈಸಿ - ಸ್ಟೀವ್ ವಾ, ಜೇಮೀ ಡೈಯರ್ ಹಾಗೂ ಟಿಮ್ ಥಾಮಸ್ - ರೊಟರ್‌ಡ್ಯಾಮ್ ಫ್ರಾಂಚೈಸಿ - ಜೊಂಟಿ ರೋಡ್ಸ್, ಫಾಫ್ ಡು ಪ್ಲೆಸಿಸ್, ಗ್ಲಾಶಿನ್ ಮತ್ತು ಸಮೀರ್ ಶಾ, ಮಧುಕರ್ ಅವರು ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications