Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಯಕನ ಅನುಪಸ್ಥಿತಿಯಲ್ಲೂ ಇತರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ ಕಿವೀಸ್ ತಂಡ

ವಿಶ್ವಕಪ್‌ ತಂಡವನ್ನು ಕಟ್ಟುವಾಗ ದೇಶಗಳು ಸ್ಟಾರ್ ಆಟಗಾರರಿಗೆ ಮನ್ನಣೆ ನೀಡುತ್ತದೆ. ಆದರೆ, ಗಾಯ ಎಂಬ ಒಂದು ಪದ ನಿಜಕ್ಕೂ ಆಯ್ಕೆದಾರರ ನಿದ್ದೆಗೆಡಿಸುತ್ತದೆ. ಇಂತಹ ಒಂದು ಸನ್ನಿವೇಶಕ್ಕೆ ಸಿಲುಕಿ ವಿಶ್ವಕಪ್‌ನಲ್ಲಿ ಈ ತಂಡ ಹೇಗೆ ಆಡುತ್ತದೋ ಎಂಬ ಪ್ರಶ್ನೆ ಮೂಡಿತ್ತು.

ಆದರೆ ತಮ್ಮ ಮೇಲೆ ಎದ್ದಿದ್ದ ಹಲವು ಪ್ರಶ್ನೆಗಳನ್ನು ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ನಲ್ಲಿ ಸಮರ್ಥವಾಗಿ ಉತ್ತರ ನೀಡುತ್ತಿರುವ ತಂಡವೇ ನ್ಯೂಜಿಲೆಂಡ್‌.. ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಕಿವೀಸ್‌ ತಂಡ, ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ. ನೆದರ್ಲೆಂಡ್ಸ್ ಅನ್ನು 99 ರನ್‌ಗಳಿಂದ ಸೋಲಿಸಿದ ನ್ಯೂಜಿಲೆಂಡ್, ಭಾರತ ಸೇರಿದಂತೆ ಇತರ ತಂಡಗಳಿಗೆ ಎಚ್ಚರಿಕೆ ನೀಡಿದೆ.

new-zealand-has-become-big-challenge

ವಾಸ್ತವವಾಗಿ, ಪ್ರಸ್ತುತ ನ್ಯೂಜಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಗಾಯದ ಕಾರಣ ಆಡುತ್ತಿಲ್ಲ. ಆದರೆ ಇದರ ಹೊರತಾಗಿಯೂ ಕಿವೀಸ್ ತಂಡವು ತನ್ನ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಆದರೆ, ಕಿವೀಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದಲ್ಲದೇ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್‌ನ ದಾಖಲೆ ಶ್ಲಾಘನೀಯ. ಅದರಲ್ಲೂ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ತಲೆನೋವಾಗಿದೆ. ಭಾರತ ತಂಡ ಕೊನೆಯ ಬಾರಿಗೆ 2003ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.

ಕಿವೀಸ್ ತಂಡದಿಂದ ಟೀಂ ಇಂಡಿಯಾಗೆ ಸೋಲು

ಇದಾದ ಬಳಿಕ ಏಕದಿನ ಹಾಗೂ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ತಂಡದಿಂದ ಟೀಂ ಇಂಡಿಯಾ ಸೋಲು ಅನುಭವಿಸುತ್ತಲೇ ಬಂದಿದೆ. ಅಲ್ಲದೆ, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಭಾರತ ವಿಶ್ವಕಪ್‌ ನಿಂದ ನಿರ್ಗಮಿಸಿತು. ನ್ಯೂಜಿಲೆಂಡ್ ತಂಡ ಕಳೆದ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು, ಆದರೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನ್ನು ಕಾಣಬೇಕಾಯಿತು.

ಇತರ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ ಕಿವೀಸ್

ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಇತರ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇದೇ ವೇಳೆ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಹಾಗೂ ನೆದರ್ಲೆಂಡ್ ವಿರುದ್ಧ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಕಿವೀಸ್ ತಂಡ ಭಾರತ ಸೇರಿದಂತೆ ಇತರೆ ತಂಡಗಳ ಸಂಕಷ್ಟ ಹೆಚ್ಚಿಸಿದೆ.

ಆದರೆ, ನ್ಯೂಜಿಲೆಂಡ್ ತಂಡ ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಅಕ್ಟೋಬರ್ 13 ರಂದು ನಡೆಯಲಿದೆ.

Story first published: Tuesday, October 10, 2023, 16:03 [IST]
Other articles published on Oct 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+