For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ ಕಿಂಗ್ಸ್‌ ಬಗ್ಗೆ ಅಣಕವಾಡಿದ ವೀರೇಂದ್ರ ಸೆಹ್ವಾಗ್

Even babies dont change their diapers as frequently as Punjab Kings changes their playing XI: Virender Sehwag

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಅಣಕವಾಡಿದ್ದಾರೆ.

ಪಂಜಾಬ್ ಕಿಂಗ್ಸ್‌ ತಂಡದ ಪ್ಲೇಯಿಂಗ್ X‍I ಬಗ್ಗೆ ವೀರೇಂದ್ರ ಸೆಹ್ವಾಗ್ ಅಣಕವಾಡಿದ್ದಾರೆ. ಪುಟಾಣಿ ಮಕ್ಕಳ ಡೈಪರ್ ಕೂಡ ಅಷ್ಟು ಬೇಗ ಬೇಗ ಬದಲಾಯಿಸುತ್ತಿರೋಲ್ಲ. ಆದರೆ ಪಂಜಾಬ್ ಕಿಂಗ್ಸ್‌ನ ಪ್ಲೇಯಿಂಗ್ XI ಆಗಾಗ ಬದಲಾಯಿಸುತ್ತಲೇ ಇರುತ್ತದೆ ಎಂದು ಸೆಹ್ವಾಗ್ ಗೇಲಿ ಮಾಡಿದ್ದಾರೆ.

ಮಂಗಳವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XIನಲ್ಲಿ ಯುವ ಆಟಗಾರ ಇಶಾನ್ ಪೊರೇಲ್ ಪಾದಾರ್ಪಣೆ ಮಾಡಿದ್ದರು. ಅಲ್ಲದೆ, ದಕ್ಷಿಣ ಆಫ್ರಿಕಾದ ಐಡನ್ ಮಾರ್ಕ್ರಮ್, ಫ್ಯಾಬಿಯೆನ್ ಅಲೆನ್, ಆದಿಲ್ ರಶೀದ್ ಮೊದಲಾದವರು ತಂಡದಲ್ಲಿ ಕಾಣಸಿಕೊಂಡಿದ್ದರು.

ಐಪಿಎಲ್ ದ್ವಿತೀಯ ಹಂತದ ಆರಂಭಿಕ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್, ಕ್ರಿಸ್ ಜೋರ್ಡನ್, ರವಿ ಬಿಷ್ಣೋಯ್, ಶಾರೂಖ್ ಖಾನ್ ಮೊದಲಾದವರು ಬೆಂಚ್‌ನಲ್ಲಿದ್ದರು. ಇದೇ ಕಾರಣಕ್ಕೆ ಸೆಹ್ವಾಗ್ ಪಂಜಾಬ್ ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡಲಾಗುತ್ತದೆ ಎಂದಿದ್ದಾರೆ.

ಕ್ರಿಕ್‌ ಬಝ್‌ ಜೊತೆ ಮಾತನಾಡಿರುವ ಸೆಹ್ವಾಗ್, "ಎಳೆಯ ಮಕ್ಕಳ ಡೈಪರ್ ಕೂಡ ಆಗಾಗ ಬದಲಾಯಿಸಲ್ಲ. ಆದರೆ ಪಂಜಾಬ್ ಕಿಂಗ್ಸ್‌ ಆಗಾಗ ತನ್ನ ಪ್ಲೇಯಿಂಗ್ XI ಬದಲಾಯಿಸುತ್ತಿರುತ್ತದೆ," ಎಂದು ಹೇಳಿದ್ದಾರೆ. ತಂಡದ ಆಟಗಾರನೊಬ್ಬನನ್ನು ಪದೇ ಪದೆ ಬದಲಾಯಿಸುತ್ತಿದ್ದರೆ ತಂಡದ ಉತ್ತಮ ಸ್ಥಿರ ಪ್ರದರ್ಶನ ಹಾಳಾಗುತ್ತದೆ ಎಂಬುದು ಸೆಹ್ವಾಗ್ ಅಭಿಪ್ರಾಯ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಕೆಎಲ್ ರಾಹುಲ್ (ಡಬ್ಲ್ಯೂ/ಸಿ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಇಶಾನ್ ಪೊರೆಲ್, ಆದಿಲ್ ರಶೀದ್, ಹರ್‌ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಬೆಂಚ್: ಕ್ರಿಸ್ ಗೇಲ್, ನಾಥನ್ ಎಲ್ಲಿಸ್, ಕ್ರಿಸ್ ಜೋರ್ಡನ್, ಜಲಜ್ ಸಕ್ಸೇನಾ, ಮೊಯಿಸ್ ಹೆನ್ರಿಕ್ಸ್, ಪ್ರಭಸಿಮ್ರಾನ್ ಸಿಂಗ್, ಮಂದೀಪ್ ಸಿಂಗ್, ಮುರುಗನ್ ಅಶ್ವಿನ್, ಸರ್ಫರಾಜ್ ಖಾನ್, ಸೌರಭ್ ಕುಮಾರ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಶಾರುಖ್ ಖಾನ್.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ಡಬ್ಲ್ಯೂ/ಸಿ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲಾಮ್ರರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ.
ಬೆಂಚ್: ಶಿವಂ ದೂಬೆ, ತಬ್ರೇಜ್ ಶಮ್ಸಿ, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಡೇವಿಡ್ ಮಿಲ್ಲರ್, ಮನನ್ ವೋಹ್ರಾ, ಕೆಸಿ ಕರಿಯಪ್ಪ, ಗ್ಲೆನ್ ಫಿಲಿಪ್ಸ್, ಓಶಾನೆ ಥಾಮಸ್, ಮಯಾಂಕ್ ಮಾರ್ಕಂಡೆ, ಅನುಜ್ ರಾವತ್, ಕುಲ್ದಿಪ್ ಯಾದವ್, ಆಕಾಶ್ ಸಿಂಗ್.

Story first published: Tuesday, September 21, 2021, 20:48 [IST]
Other articles published on Sep 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+