For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮಾತ್ರವಲ್ಲ ಸಚಿನ್, ದ್ರಾವಿಡ್ ಕೂಡ ಈ ಕೆಟ್ಟ ಸಮಯವನ್ನು ಎದುರಿಸಿದ್ದರು ಎಂದ ಸಂಜಯ್ ಬಂಗರ್

Even Sachin Tendulkar and Rahul Dravid have gone through such phase says Sanjay Bangar

2021ರಲ್ಲಿ ವಿರಾಟ್ ಕೊಹ್ಲಿ ಕುರಿತಾಗಿ ಅವರ ಅಭಿಮಾನಿಗಳು ಖುಷಿಯ ವಿಚಾರವನ್ನು ಕೇಳಿದ್ದಕ್ಕಿಂತ ಬೇಸರದ ವಿಚಾರಗಳನ್ನು ಕೇಳಿದ್ದೇ ಹೆಚ್ಚು. ಹೌದು, 2021 ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂದೇ ಹೇಳಬಹುದು. ಈ ವರ್ಷ ನಡೆದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವುದರ ಮೂಲಕ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡು ರನ್ನರ್ ಅಪ್ ಆಗಿ ಹೊರಹೊಮ್ಮಿದಾಗಿನಿಂದ ವಿರಾಟ್ ಕೊಹ್ಲಿ ಹೆಗಲೇರಿದ ದುರಾದೃಷ್ಟ ಇಂದಿಗೂ ಸಹ ಕೆಳಗಿಳಿದಂತೆ ಕಾಣುತ್ತಿಲ್ಲ.

ಮೊದಲಿಗೆ ಈ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಸೋತು ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ನಂತರ ನಡೆದ ಮತ್ತೊಂದು ಐಸಿಸಿ ಟೂರ್ನಿಯಾದ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿಯೂ ನೆಲಕಚ್ಚಿತು. ಹೌದು, ಈ ವರ್ಷ ನಡೆದ 2 ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲಾಗದೇ ನಿರಾಸೆಯನ್ನು ಮೂಡಿಸಿದ್ದು ವಿರಾಟ್ ಕೊಹ್ಲಿ ವಿರುದ್ಧ ಟೀಕೆ ಮಾಡುವ ಟೀಕಾಕಾರರಿಗೆ ಒಳ್ಳೆಯ ಆಹಾರ ಸಿಕ್ಕಂತಾಗಿತ್ತು. ಒಂದೆಡೆ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಮಂಕಾಗಿ ಟ್ರೋಫಿ ಗೆಲ್ಲಲಾಗದೇ ಟೂರ್ನಿಯಿಂದ ಹೊರಬಿದ್ದರೆ, ಮತ್ತೊಂದೆಡೆ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದಾರೆ.

ಹೀಗೆ ಸಾಲು ಸಾಲು ಹಿನ್ನಡೆಗಳನ್ನು ಅನುಭವಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಈ ವರ್ಷವೂ ಸಹ ಶತಕವನ್ನು ಬಾರಿಸಲಾಗದೇ ತಮ್ಮ 71ನೇ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬ ಪ್ರಶ್ನೆಯ ಒತ್ತಡದಿಂದ ಹೊರ ಬರುವಲ್ಲಿ ವಿಫಲರಾಗಿದ್ದಾರೆ. ಹೌದು, ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಶತಕವನ್ನು ಬಾರಿಸಿ 2 ವರ್ಷಗಳಾಗಿವೆ. ಇದುವರೆಗೂ ಎಲ್ಲಾ ಕ್ರಿಕೆಟ್ ಆವೃತ್ತಿಗಳನ್ನೊಳಗೊಂಡಂತೆ ಒಟ್ಟು 70 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ತಮ್ಮ ಮುಂದಿನ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬ ಪ್ರಶ್ನೆ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.

ಸದ್ಯ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಕಳೆದುಕೊಂಡು ಟೆಸ್ಟ್ ತಂಡದ ನಾಯಕತ್ವವನ್ನು ಮಾತ್ರ ಉಳಿಸಿಕೊಂಡಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಶತಕ ಬಾರಿಸಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಶತಕ ಬಾರಿಸಿ 57 ಇನ್ನಿಂಗ್ಸ್ ಕಳೆದಿವೆ ಅಂಥ ಪದೇ ಪದೇ ಹೇಳಬೇಡಿ ಎಂದು ಬೇಸರ ವ್ಯಕ್ತಪಡಿಸಿರುವ ಸಂಜಯ್ ಬಂಗಾರ್ ಆ 57 ಇನ್ನಿಂಗ್ಸ್‌ ಎಲ್ಲಾ ಕ್ರಿಕೆಟ್‌ ಮಾದರಿಯನ್ನೂ ಒಳಗೊಂಡಂತೆ ಎಂದಿದ್ದಾರೆ. ಹಾಗೂ ವಿರಾಟ್ ಕೊಹ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕವನ್ನು ಬಾರಿಸಿದ ನಂತರ ಟೆಸ್ಟ್ ಶತಕಗಳು ಬತ್ತಿಹೋದವು, ಹೀಗಾಗಿ ಕೊಹ್ಲಿ ಟೆಸ್ಟ್ ಶತಕ ಬಾರಿಸಿ 22 ಅಥವಾ 23 ಇನ್ನಿಂಗ್ಸ್‌ ಕಳೆದಿವೆ ಎಂದು ಸಂಜಯ್ ಬಂಗಾರ್ ಹೇಳಿಕೆ ನೀಡಿದ್ದಾರೆ.

ಲೆಜೆಂಡರಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಕೂಡ ಬಹಳಷ್ಟು ತಿಂಗಳುಗಳ ಕಾಲ ಶತಕ ಬಾರಿಸಲಾಗದೇ ಇದೇ ರೀತಿ ಕಠಿಣ ದಿನಗಳನ್ನು ಎದುರಿಸಿದ್ದ ಉದಾಹರಣೆಗಳಿವೆ. ಹಾಗೆಂದ ಮಾತ್ರಕ್ಕೆ ಅವರು ಭಾರತ ತಂಡಕ್ಕೆ ಯಾವುದೇ ರೀತಿಯ ಕೊಡುಗೆಗಳನ್ನು ಸಲ್ಲಿಸಿಲ್ಲ ಎಂದಲ್ಲ. ಇತ್ತೀಚೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನವನ್ನು ನೀವು ಗಮನಿಸಿದರೆ ಸಾಕಷ್ಟು ಬಾರಿ ಕೊಹ್ಲಿ ಅರ್ಧಶತಕ ಹಾಗೂ 40+ ರನ್ ಕಲೆಹಾಕಿ ತಂಡಕ್ಕೆ ಆಸರೆಯಾಗಿದ್ದಾರೆ ಎಂದು ಸಂಜಯ್ ಬಂಗಾರ್ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.

ಇನ್ನೂ ಮುಂದುವರಿದು ವಿರಾಟ್ ಕೊಹ್ಲಿ ಶತಕ ಬಾರಿಸುವುದರ ಕುರಿತು ಮಾತನಾಡಿರುವ ಸಂಜಯ್ ಬಂಗಾರ್ ವಿರಾಟ್ ಕೊಹ್ಲಿ ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 71ನೇ ಶತಕವನ್ನು ಚಚ್ಚಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Tuesday, December 14, 2021, 9:24 [IST]
Other articles published on Dec 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+