Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲರೂ ಆತನನ್ನ ವಾಸಿಮ್ ಅಕ್ರಮ್‌ಗೆ ಹೋಲಿಸುತ್ತಿದ್ದರು: ಮಾಜಿ ಬೌಲರ್ ಬಗ್ಗೆ ರೈನಾ ಹೇಳಿಕೆ

Everyone Used To Compare Him With Wasim Akram: Suresh Raina

ಟೀಮ್ ಇಂಡಿಯಾ ಹಿರಿಯ ಆಟಗಾರ ಸುರೇಶ್ ರೈನಾ ಭಾರತದ ಮಾಜಿ ಪ್ರಮುಖ ಬೌಲರ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಕಿರಿಯ ವಯಸ್ಸಿನ್ಲಲಿ ಟೀಮ್ ಇಂಡಿಯಾಗೆ ಕಾಲಿಟ್ಟ ಈ ಆಟಗಾರನನ್ನು ಎಲ್ಲರೂ ಭವಿಷ್ಯದ ವಾಸಿಮ್ ಅಕ್ರಮ್ ಎನ್ನುತ್ತಿದ್ದರು ಎಂದು ಹೇಳಿದ್ದಾರೆ.

ಸುರೇಶ್ ರೈನಾ ಹೀಗೆ ಹೇಳಿದ್ದು ಟೀಮ್ ಇಂಡಿಯಾ ಮಾಜಿ ಬೌಲರ್ ಸ್ವಿಂಗ್ ಸ್ಪೆಶಲಿಸ್ಟ್ ಎಂದೇ ಖ್ಯಾತರಾಗಿದ್ದ ಇರ್ಫಾನ್ ಪಠಾಣ್ ಬಗ್ಗೆ. ಇರ್ಫಾನ್ ಪಠಾಣ್ ಸ್ವಿಂಗ್ ಎಸೆತಗಳನ್ನು ಎದುರಾಳಿಗಳಿಗೆ ದುಃಸ್ವಪ್ನವಾಗಿತ್ತು. ಅವರ ನಿಖರ ದಾಳಿಯನ್ನು ಕಂಡು ಎಲ್ಲರೂ ವಾಸಿಮ್ ಅಕ್ರಮ್ ಜೊತೆಗೆ ಹೋಲಿಸುತ್ತಿದ್ದರು ಎಂದು ಹೇಳಿದ್ದಾರೆ.

ಇರ್ಫಾನ್ ಪಠಾಣ್ ತಮ್ಮ 19ನೇ ವಯಸ್ಸಿನಲ್ಲಿ 2002ರಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟರು. ಆಸ್ಟ್ರೇಲಿಯಾ ವಿರುದ್ಧ ಮೊದಲ ಪ್ರವಾಸದಲ್ಲೇ ಮಿಂಚಿದ್ದ ಇರ್ಫಾನ್ ಪಠಾಣ್ ಬಳಿಕ ಟೀಮ್ ಇಮಡಿಯಾದ ಖಾಯಂ ಸದಸ್ಯರಾಗುದ್ದರು. ಬಳಿಕ 2004ರಲ್ಲಿ ಪಾಕಿಸ್ತಾನ ಪ್ರವಾಸಕ್ಕೂ ಆಯ್ಕೆಯಾಗಿದ್ದ ಪಠಾಣ್ ತಮ್ಮ ಅದ್ಭುತ ಪ್ರದರ್ಶನವನ್ನು ಪಾಕ್ ವಿರುದ್ಧವೂ ನೀಡಿದ್ದರು.

ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಸಂವಾದದಲ್ಲಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ರೈನಾ 'ಎಲ್ಲರೂ ನಿಮ್ಮನ್ನು ವಾಸಿಮ್ ಅಕ್ರಮ್ ಅವರೊಂದಿಕೆ ಹೋಲಿಕೆ ಮಾಡುತ್ತಿದ್ದರು. ಉದ್ದ ಮತ್ತು ಗುಂಗುರು ಕೂದಲಿದ್ದ ನೀವು ಹೆಡ್‌ ಆಂಡ್ ಶೋಲ್ಡರ್‌ನ ರಾಯಭಾರಿಯಂತೆ ಕಾಣಿಸುತ್ತಿದ್ದಿರಿ ಎಂದು ತಮಾಷೆಯಾಗಿ ನುಡಿದಿದ್ದಾರೆ.

'ನಾನು 2005ರಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟಾಗ ನೀವು ಅಗಾದಲೇ ದೊಡ್ಡ ಹೆಸರನ್ನು ಗಳಿಸಿದ್ದಿರಿ. ತುಂಬಾ ಖ್ಯಾತಿ ಹೊಂದಿದ್ದಿರಿ' ಎಂದು ಸುರೇಶ್ ರೈನಾ ನೆನಪಿಸಿಕೊಂಡಿದ್ದಾರೆ. ಸುರೇಶ್ ರೈನಾ 2005ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ್ದರು.

Story first published: Saturday, June 6, 2020, 16:55 [IST]
Other articles published on Jun 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+