2024ರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ನಾಸೆರ್ ಹುಸೇನ್
ಕಳೆದ ವರ್ಷ ಭಾರತದಲ್ಲಿ ನಡೆದ ಯಶಸ್ವಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಂತರ ಕ್ರಿಕೆಟ್ ಜಗತ್ತು, ಇದೀಗ 2024ರ ಕ್ರಿಕೆಟ್ ಕ್ಯಾಲೆಂಡರ್‌ನತ್ತ ಗಮನ ಹರಿಸಿದೆ. ವಿಶೇಷವಾಗಿ, ಈ ವರ್ಷದ ಮಧ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯತ್ತ.
2024ರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕೇವಲ ಆರು ತಿಂಗಳುಗಳು ಮಾತ್ರ ಬಾಕಿ ಉಳಿದಿದ್ದು, ವಿಶ್ವದ ಒಟ್ಟು 20ಕ್ಕೂ ಹೆಚ್ಚು ತಂಡಗಳು ಐಸಿಸಿ ಟೂರ್ನಿಯಲ್ಲಿ ಭಾಗವಹಿಸಲಿವೆ.

ಈಗಾಗಲೇ ಐಸಿಸಿ ತಾತ್ಕಾಲಿಕವಾಗಿ ಈ ಪಂದ್ಯಾವಳಿಯನ್ನು ಜೂನ್ 4ರಿಂದ ಜೂನ್ 30ರವರೆಗೆ ನಿಗದಿಪಡಿಸಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎನ ರೋಮಾಂಚಕ ಮೈದಾನಗಳಲ್ಲಿ ಆಡಿಸಲು ಯೋಜಿಸಲಾಗಿದೆ.
ಇದೇ ವೇಳೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೆರ್ ಹುಸೇನ್ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲಿಸ್ಟ್‌ಗಳು ಮತ್ತು ಅಂತಿಮ ಚಾಂಪಿಯನ್ ತಂಡದ ಬಗ್ಗೆ ತಮ್ಮ ಭವಿಷ್ಯ ನುಡಿದಿದ್ದಾರೆ.

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಇತ್ತೀಚಿನ ಹೋರಾಟಗಳನ್ನು ಎತ್ತಿ ತೋರಿಸಿದ ನಾಸೆರ್ ಹುಸೇನ್, 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಸ್ಥಾನವನ್ನು ನೀಡಲು ಹಿಂದೆಮುಂದೆ ನೋಡಲಿಲ್ಲ.
ಆದರೆ, ಇಂಗ್ಲೆಂಡ್‌ನ ಹಾಲಿ ಚಾಂಪಿಯನ್ ಸ್ಥಾನಮಾನದ ಹೊರತಾಗಿಯೂ, ಈ ಬಾರಿ ರನ್ನರ್-ಅಪ್ ಆಗಿ ಪಂದ್ಯಾವಳಿ ಮುಗಿಸಲು ನಾಸೆರ್ ಹುಸೇನ್ ಭವಿಷ್ಯ ನುಡಿದರು.
ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಪ್ರಮುಖ ಸ್ಪರ್ಧಿಗಳೆಂದು ನಾಸೆರ್ ಹುಸೇನ್ ಸೂಚಿಸಿದಾಗ, ಅವರ ಒಲವಿನ ನೋಟ ದಕ್ಷಿಣ ಆಫ್ರಿಕಾ ತಂಡದ ಮೇಲೆ ಬಿದ್ದಿತು.
ಆಸ್ಟ್ರೇಲಿಯಾದಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನದ ವಿರುದ್ಧದ ಫೈನಲ್‌ನಲ್ಲಿ ಜಯಭೇರಿ ಬಾರಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
"ನಾನು ಈ ಬಗ್ಗೆ ಹೆಚ್ಚು ಯೋಚಿಸಿಲ್ಲ, ಆದರೆ ನಾನು ದಕ್ಷಿಣ ಆಫ್ರಿಕಾ ತಂಡದೊಂದಿಗೆ ಹೋಗಲಿದ್ದೇನೆ. ಇಂಗ್ಲೆಂಡ್ ಹಾಲಿ ಚಾಂಪಿಯನ್ ಆಗಿದೆ. ಆದರೆ ಈ ಸಮಯದಲ್ಲಿ ಉತ್ತಮವಾಗಿ ಆಡುತ್ತಿಲ್ಲ. ಇದು ಕೆರಿಬಿಯನ್ ನಾಡಿನಲ್ಲಿ ಸರಿ ಹೋಗಲಿದೆ ಎಂದು ಭಾವಿಸುತ್ತೇನೆ. ನಾನು 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳನ್ನು ಸಂಭಾವ್ಯ ಆಯ್ಕೆ ಮಾಡುತ್ತೇನೆ," ಎಂದು ನಾಸೆರ್ ಹುಸೇನ್ ಐಸಿಸಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಜಗತ್ತು ಗಮನಿಸಬೇಕಾದ ವ್ಯಕ್ತಿ ಸೂರ್ಯಕುಮಾರ್ ಯಾದವ್
ಗಮನಾರ್ಹವಾದ ವೈಟ್ ಬಾಲ್ ಪ್ರತಿಭೆಗಳನ್ನು ಹೆಗ್ಗಳಿಕೆಗೆ ಒಳಪಡಿಸುವ ತಂಡಗಳೊಂದಿಗೆ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಟೂರ್ನಮೆಂಟ್‌ನ ಸಂಭಾವ್ಯ ಚಾಂಪಿಯನ್ ಆಗಲು ದಕ್ಷಿಣ ಆಫ್ರಿಕಾ ಸಿದ್ಧವಾಗಿದೆ.
ಆದರೆ ಕ್ರಿಕೆಟಿಗ ಕಂ ವೀಕ್ಷಕ ವಿವರಣೆಗಾರ ನಾಸೆರ್ ಹುಸೇನ್ ಅವರು ಭಾರತದ ಅಗ್ರ ಶ್ರೇಯಾಂಕದ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಪಂದ್ಯಾವಳಿಯ ಶ್ರೇಷ್ಠ ಆಟಗಾರನಾಗಲು ಬೆಂಬಲಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ದಾಖಲೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಅವರ ಈಗಾಗಲೇ ಪ್ರಭಾವಶಾಲಿ ಟಿ20 ಹೆಗ್ಗಳಿಕೆಯನ್ನು ಇನ್ನಷ್ಟು ಹೆಚ್ಚಿಸಲು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ಸಲಹೆ ನೀಡಿದರು.
"ಟಿ20 ಕ್ರಿಕೆಟ್‌ನಲ್ಲಿ ಸದ್ಯ ಜಗತ್ತು ಗಮನಿಸಬೇಕಾದ ಆಟಗಾರನೆಂದರೆ ಸೂರ್ಯಕುಮಾರ್ ಯಾದವ್. ನನ್ನ ಪ್ರಕಾರ, ಭಾರತದ ಈ ಸ್ಫೋಟಕ ಬ್ಯಾಟರ್ ಒಬ್ಬ ವಿಲಕ್ಷಣ ಆಟಗಾರ".
"ಮಿ.360 ಆಡುವ ಕೆಲವು ಶಾಟ್‌ಗಳು ಅದ್ಭುತವಾಗಿವೆ ಮತ್ತು ಅವರು ಸ್ವಲ್ಪ ವಿಲಕ್ಷಣವಾಗಿರುತ್ತಾರೆ. ಏಕೆಂದರೆ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಅವರಿಗೆ ಯಾವಾಗ ಹೋಗಬೇಕು, ಯಾವಾಗ ಹೋಗಬಾರದು, ಏನು ಮಾಡಬೇಕು ಎಂದು ಸರಿಯಾಗಿ ತಿಳಿದಿರುವುದಿಲ್ಲ".
"ಆದರೆ ಟಿ20 ಕ್ರಿಕೆಟ್‌ನಲ್ಲಿ ಪ್ರತಿ ಬಾರಿಯೂ ಏನು ಮಾಡಬೇಕೆಂದು ಅವರಿಗೆ ಸಂಪೂರ್ಣವಾಗಿ ತಿಳಿದಿದೆ ಮತ್ತು ಇದು ಒಂದು ಮೋಜಿನ ಆಟ. ಟಿ20 ಕ್ರಿಕೆಟ್ ಮತ್ತು ಸೂರ್ಯಕುಮಾರ್ ಯಾದವ್ ಆಟ ವೀಕ್ಷಿಸುವುದು, ಅದು ಸಂಪೂರ್ಣವಾಗಿ ಮೋಜಿನ ಸಂಗತಿಯಾಗಿದೆ," ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ನಾಸೆರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications