For Quick Alerts
ALLOW NOTIFICATIONS  
For Daily Alerts
 

Virat Kohli: ಬಾಂಗ್ಲಾ, ಕಿವೀಸ್ ವಿರುದ್ಧ ಈ ಪ್ಲೇಯರ್‌ ದೊಡ್ಡ ಇನಿಂಗ್ಸ್‌ ಕಟ್ಟಬಲ್ಲರು: ಪಾಕ್‌ ಮಾಜಿ ಆಟಗಾರ ಭವಿಷ್ಯ

ಭಾರತ ಕ್ರಿಕೆಟ್ ತಂಡ ಸದ್ಯ ಬಿಡುವಿನಲ್ಲಿದೆ. ಹಲವು ಆಟಗಾರರು ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿದ್ದರೆ, ಇನ್ನು ಹಿರಿಯ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಸೆಪ್ಟೆಂಬರ್‌ 19ರಿಂದ ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಈ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಟಾರ್‌ ಆಟಗಾರರ ತಮ್ಮ ಪ್ರದರ್ಶನದ ಮೂಲಕ ಅಭಿಮಾನಿಗಳ ಮನಸ್ಸು ಗೆಲ್ಲಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಭಾರತ, ಸಾಲು ಸಾಲು ಟೆಸ್ಟ್‌ ಸರಣಿಗಳನ್ನು ಆಡಲಿದೆ. ಈ ವೇಳೆ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೇಲೆ ನೆಟ್ಟಿರುತ್ತದೆ. ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟ್ ಆಟಗಾರ ಈ ಸರಣಿಗೂ ಮುನ್ನ ಭವಿಷ್ಯ ನುಡಿದಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರನ ಅದ್ಭುತ ಪುನರಾಗಮನದ ಸಾಧ್ಯತೆಯನ್ನು ಬಸಿತ್ ಅಲಿ ವ್ಯಕ್ತಪಡಿಸಿದ್ದಾರೆ.

Ex-Pak Cricketer Predicts Virat Kohli s Big Innings Against Bangladesh NZ

ಪಾಕ್‌ ಮಾಜಿ ಆಟಗಾರ ಭವಿಷ್ಯ

ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳ ವಿರುದ್ಧ ದೊಡ್ಡ ಇನಿಂಗ್ಸ್‌ ಕಟ್ಟಬಲ್ಲರು ಎಂದು ಭವಿಷ್ಯ ನುಡಿದಿದ್ದಾರೆ. ಪಾಕ್ ಮಾಜಿ ಆಟಗಾರ ವಿರಾಟ್ ಕೊಹ್ಲಿ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ಇದೇ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯವನ್ನು ವಿರಾಟ್‌ ಆಡಿದ್ದರು. ಆ ಬಳಿಕ ಅವರು ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಮತ್ತು ಶ್ರೀಲಂಕಾ ಪ್ರವಾಸದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ತವರಿನಲ್ಲಿ ವಿರಾಟ್‌ ಅಬ್ಬರದ ಆಟವನ್ನು ಆಡುವ ಮೂಲಕ ಭರ್ಜರಿ ಫಾರ್ಮ್‌ಗೆ ಮರಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮುಂಬರುವ ಬಾಂಗ್ಲಾ ಹಾಗೂ ನ್ಯೂಜಿಲೆಂಡ್‌ ನಡುವಣ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಮೂರಂಕಿ ಮುಟ್ಟಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Ex-Pak Cricketer Predicts Virat Kohli s Big Innings Against Bangladesh NZ

ತವರಿನಲ್ಲಿ ನಡೆದಿದ್ದ ಇಂಗ್ಲೇಂಡ್ ವಿರುದ್ಧದ ಸರಣಿಯ ವೇಳೆ ವಿರಾಟ್‌, ಕೌಟುಂಬಿಕ ಕಾರಣಗಳಿಂದ ಸರಣಿಯಿಂದ ದೂರ ಉಳಿದಿದ್ದರು ಎಂದು ಬಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ. ಆದರೆ ಇತ್ತೀಚಿಗೆ ವಿರಾಟ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಮುಂಬರುವ ಸರಣಿಯ ಬಳಿಕ ಅವರು ಭರ್ಜರಿ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಈ ಸರಣಿಗಳಲ್ಲಿ ವಿರಾಟ್‌ ದ್ವಿಶತಕ ಬಾರಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಕೊಹ್ಲಿ ಟೆಸ್ಟ್ ವೃತ್ತಿಜೀವನ

ವಿರಾಟ್ ಕೊಹ್ಲಿ ಇದುವರೆಗೆ ಒಟ್ಟು 113 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8848 ರನ್ ಗಳಿಸಿದ್ದಾರೆ. ಈ ವೇಳೆ ವಿರಾಟ್‌ 254 ರನ್‌ಗಳ ಅಮೋಘ ಇನಿಂಗ್ಸ್‌ ಕಟ್ಟಿರುವುದು ಗರಿಷ್ಠ ರನ್‌ ಆಗಿದೆ. ಅಲ್ಲದೆ ಈ ಫಾರ್ಮೆಟ್‌ನಲ್ಲಿ ವಿರಾಟ್ 29 ಶತಕ, 7 ದ್ವಿಶತಕ ಮತ್ತು 30 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

Story first published: Tuesday, September 10, 2024, 7:56 [IST]
Other articles published on Sep 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+