
ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಮೆಸೇಜ್ ಮಾಡಿದ್ದು ಅವರೊಬ್ಬರೇ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತಾವು ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ ಹಾಗೂ ಆ ವೇಳೆ ತಮಗೆ ಮೆಸೇಜ್ ಮಾಡಿದ ಏಕೈಕ ವ್ಯಕ್ತಿ ಯಾರು ಎಂಬುದನ್ನು ಸಹ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ತನ್ನ ಮೊಬೈಲ್ ನಂಬರ್ ಹಲವಾರು ಮಂದಿ ಬಳಿ ಇದ್ದರೂ ಸಹ ಅಂದು ಯಾರೊಬ್ಬರೂ ಸಹ ಮೆಸೇಜ್ ಮಾಡಲಿಲ್ಲ ಆದರೆ ಆ ವ್ಯಕ್ತಿ ಮಾತ್ರ ಮೆಸೇಜ್ ಮಾಡಿದರು ಎಂಬುದನ್ನು ವಿರಾಟ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ನಾಯಕತ್ವ ಬಿಟ್ಟಾಗ ಮೆಸೇಜ್ ಮಾಡಿದ್ದು ಎಂ ಎಸ್ ಧೋನಿ!
ಹೌದು, ತಾನು ಟೆಸ್ಟ್ ನಾಯಕತ್ವ ಬಿಟ್ಟಾಗ ತನಗೆ ಮೆಸೇಜ್ ಮಾಡಿ ವಿಚಾರಿಸಿದ್ದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಎಂಬುದನ್ನು ವಿರಾಟ್ ಕೊಹ್ಲಿ ಸ್ವತಃ ಬಿಚ್ಚಿಟ್ಟಿದ್ದಾರೆ. ತನ್ನ ನಂಬರ್ ಅನೇಕರ ಬಳಿ ಇದ್ದರೂ ಸಹ ಧೋನಿ ಹೊರತುಪಡಿಸಿ ಉಳಿದ ಯಾರೂ ಸಹ ಮೆಸೇಜ್ ಮಾಡಲಿಲ್ಲ ಎಂದು ಕೊಹ್ಲಿ ಬಿಚ್ಚಿಟ್ಟಿದ್ದಾರೆ. ಹಾಗೂ ಇದು ತನಗೆ ಮಹೇಂದ್ರ ಸಿಂಗ್ ಧೋನಿ ಮೇಲೆ ಇರುವ ನಿಜವಾದ ಗೌರವ ಹಾಗೂ ಅವರ ಜೊತೆ ಇರುವ ಸಂಬಂಧ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಕೊಹ್ಲಿ ಹೇಳಿಕೆಗೆ ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ
ಇನ್ನು ಎಂಎಸ್ ಧೋನಿ ಕುರಿತಾಗಿ ವಿರಾಟ್ ಕೊಹ್ಲಿ ಈ ಹೇಳಿಕೆ ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಎಂ ಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ಇರುವ ಸ್ನೇಹ ಸಂಬಂಧ ಎಂದು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಸಮಯದಲ್ಲಿ ಈ ವಿಷಯವನ್ನು ಬಹಿರಂಗಪಡಿಸುವ ಅಗತ್ಯವೇನಿತ್ತು ಹಾಗೂ ಎಂಎಸ್ ಧೋನಿ ಮೆಸೇಜ್ ಮಾಡಿದರು ಎಂಬ ವಿಷಯವನ್ನು ತಿಳಿಸುವ ಭರದಲ್ಲಿ ಇತರರಾರೂ ಮೆಸೇಜ್ ಮಾಡಲಿಲ್ಲ ಎಂಬುದನ್ನು ಉಲ್ಲೇಖಿಸಿ ಬೇಡದ ವಿವಾದ ಹುಟ್ಟು ಹಾಕುವುದಾದರೂ ಏಕೆ ಎಂದು ಕೊಹ್ಲಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications
