Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಇಶಾಂತ್‌ ಜೊತೆಗಿದ್ದು ಬೌಲಿಂಗ್‌ ಮಾಡೋಕೆ ಉತ್ಸುಕನಾಗಿದ್ದೇನೆ'

Excited to bowl alongside Ishant Sharma vs England: Mohammed Siraj

ನವದೆಹಲಿ: 'ಅವರಂತೆ ಬೌಲಿಂಗ್ ದಾಳಿ ನಡೆಸಲು ಪ್ರವಾಸ ಸರಣಿಯನ್ನು ಕಂಡುಕೊಳ್ಳಬೇಕು' ಇದು ಮೊಹಮ್ಮದ್ ಸಿರಾಜ್ ಅವರು ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಅವರ ಬಗ್ಗೆ ಆಡಿದ ಮಾತು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದರು.

ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಮೊಹಮ್ಮದ್ ಸಿರಾಜ್ 13 ವಿಕೆಟ್‌ಗಳೊಂದಿಗೆ ಗಮನ ಸೆಳೆದಿದ್ದರು. ಅಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದು ಸಿರಾಜ್ ಅವರ ಮತ್ತೊಂದು ಸಾಧನೆಯೆನಿಸಿತ್ತು. ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 2-1ರಿಂದ ಗೆಲ್ಲುವಲ್ಲಿ ಸಿರಾಜ್ ಪಾತ್ರ ಪ್ರಮುಖವಾಗಿತ್ತು.

ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸಿರಾಜ್, 'ಭಾರತದಲ್ಲಿ ಅಥವಾ ವಿದೇಶದಲ್ಲಿ ಆಡುತ್ತೀನೋ ಅನ್ನೋದನ್ನು ನಾನು ಯೋಚಿಸುವುದಿಲ್ಲ. ನನ್ನ ಪ್ರದರ್ಶನ ಮತ್ತು ತಂಡಕ್ಕಾಗಿ ಪಂದ್ಯ ಗೆಲ್ಲೋದು ನನಗೆ ಮುಖ್ಯವಾಗುತ್ತದೆ. ಇಂಗ್ಲೆಂಡ್ ವಿರುದ್ಧದ ಸರಣಿ ನಾನು ಎಲ್ಲಾ ರೀತಿಯಲ್ಲೂ ಸಿದ್ಧವಾಗಿದ್ದೇನೆ,' ಎಂದಿದ್ದಾರೆ.

'ನಾನು (ಜಸ್‌ಪ್ರೀತ್) ಬೂಮ್ರಾ, (ಮೊಹಮ್ಮದ್) ಶಮಿ ಭಾಯ್, ಶಾರ್ದೂಲ್ ಠಾಕೂರ್ ಜೊತೆಗಿದ್ದು ಬೌಲಿಂಗ್ ಮಾಡಿದ್ದೇನೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರೂ ತಂಡದ ಭಾಗವಾಗಿದ್ದಾರೆ. ಇಶಾಂತ್ ಶರ್ಮಾ ಜೊತೆಗಿದ್ದು ಬೌಲಿಂಗ್ ಮಾಡಲು ತುಂಬಾ ಉತ್ಸುಕನಾಗಿದ್ದೇನೆ. ಅವರ ಜೊತೆಗೆ ಕಲಿಯೋಕೆ ನನಗೆ ದೊಡ್ಡ ಅವಕಾಶ ದೊರೆತಿದೆ,' ಎಂದು ಸಿರಾಜ್ ಹೇಳಿಕೊಂಡಿದ್ದಾರೆ.

Story first published: Friday, January 29, 2021, 17:23 [IST]
Other articles published on Jan 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+