Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024:'ಊಟಕ್ಕೆ ಏನಿದೆ?'; ಜಸ್ಪ್ರೀತ್ ಬುಮ್ರಾ ದಂಪತಿಯ ವಿಶೇಷ ಸಂದರ್ಶನ ವೈರಲ್‌!

ಜೂನ್‌ 11 ಮಂಗಳವಾರ, ಭಾರತ ಮತ್ತು ಪಾಕಿಸ್ತಾನ ನಡುವೆ (ಜೂನ್ 9) ಟಿ20 ವಿಶ್ವಕಪ್ 2024ರ ರೋಚಕ ಪಂದ್ಯ ನಡೆಯಿತು. ನ್ಯೂಯಾರ್ಕ್ ನ ನಸ್ಸೌ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ 119 ರನ್ ಗಳನ್ನು ಕೆಲಹಾಕಿತ್ತು.

ಕೊನೆಯ ಓವರ್ ವರೆಗೆ ನಡೆದ ಈ ಸಮಬಲದ ಪಂದ್ಯದಲ್ಲಿ ಕೊನೆಗೂ ಪಾಕಿಸ್ತಾನ ವಿರುದ್ಧ ಭಾರತ 6 ರನ್ ಗಳ ಜಯ ಸಾಧಿಸಿತು. ಗೆಲುವಿನತ್ತ ಸಾಗುತ್ತಿದ್ದ ಪಾಕಿಸ್ತಾನ ತಂಡವನ್ನು ಕಟ್ಟಿ ಹಾಕಿದ ಟೀಮ್‌ ಇಂಡಿಯಾದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೀರೋ ಆಗಿ ಮಿಂಚಿಸಿದರು.

Exclusive interview with Jasprit Bumrah couple at T20 World Cup 2024

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್‌ ಇಂಡಿಯಾ 7ನೇ ಗೆಲುವು ಸಾಧಿಸಿ ಒಂದೇ ತಂಡ ಎದುರು ಅತಿಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿತು. ಗೆಲುವಿನ ಬಳಿಕ ಮೈದಾನದಲ್ಲಿ ಜಸ್ಪ್ರೀತ್ ಬುಮ್ರಾ ದಂಪತಿಗಳ ವಿಶೇಷ ಸಂದರ್ಶನ ವೈರಲ್ ಆಗಿದೆ.

ಜಸ್ಪ್ರೀತ್ ಬುಮ್ರಾ ಅವರನ್ನು ಪತ್ನಿ ಸಂಜನಾ ಗಣೇಶನ್ ಸಂದರ್ಶನ ಮಾಡಿದರು. ಈ ವಿಶೇಷ ಸಂದರ್ಶನದಲ್ಲಿ ದಂಪತಿಗಳ ತಮಾಷೆ ಮತ್ತು ಪ್ರೀತಿ ತುಂಬಿದ ಕ್ಷಣಗಳು ಕಂಡುಬಂದವು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Exclusive interview with Jasprit Bumrah couple at T20 World Cup 2024

ಐಸಿಸಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಸಂದರ್ಶನದ ಕೊನೆಯಲ್ಲಿ ಸಂಜನಾ ಮತ್ತು ಬುಮ್ರಾ ನಡುವೆ ಕೆಲವೇ ಸೆಕೆಂಡ್‌ಗಳ ಮಾತುಕತೆ ನಡೆದಿದೆ.

ಸಂಜಾನ ಹೇಳುತ್ತಾರೆ 'ಶೀಘ್ರದಲ್ಲೇ ಭೇಟಿಯಾಗೋಣ' ಎಂದು ಇದಕ್ಕೆ ಪ್ರತಿಕ್ರಿಯಿಸಿದ ಬುಮ್ರಾ, 'ಅರ್ಧ ಗಂಟೆಯಲ್ಲಿ ಮತ್ತೆ ಭೇಟಿಯಾಗೋಣ' ಎಂದು ಹೇಳುತ್ತಾರೆ. ಇದಾದ ನಂತರ ಸಂಜನಾ 'ಇವತ್ತು ಊಟಕ್ಕೆ ಏನಿದೆ?' ಎನ್ನುತ್ತಾರೆ.

ಆದರೆ, ಬುಮ್ರಾ ಇದಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಸಂದರ್ಶನವು ಕೊನೆಗೊಂಡಿದೆ. ಈ ಮುದ್ದಾದ ಜೋಡಿಯ ಸಂದರ್ಶನಕ್ಕೆ ಅಭಿಮಾನಿಗಳು ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.‌

ಸಂಜನಾ ಗಣೇಶನ್ ಹಿನ್ನಲೆ

ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಕ್ರೀಡಾ ಪತ್ರಕರ್ತೆ ಮತ್ತು ನಿರೂಪಕಿ ಆಗಿದ್ದಾರೆ. ಸಂದರ್ಶನದ ವೇಳೆ ಇಬ್ಬರೂ ಭೇಟಿಯಾಗಿದ್ದರು. ಕ್ರಮೇಣ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆದು ಕೆಲ ವರ್ಷಗಳ ಹಿಂದೆ ಗೋವಾದಲ್ಲಿ ಇಬ್ಬರೂ ಮದುವೆಯಾಗಿದ್ದರು.

ಸಂಜನಾ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಐಸಿಸಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಆಂಕರ್ ಆಗಿದ್ದಾರೆ. ಜಸ್ಪ್ರೀತ್ ಬುಮ್ರಾ ಭಾರತ ತಂಡದ ಬೌಲಿಂಗ್‌ ವಿಭಾಗವನ್ನು ಮುನ್ನೆಡೆಸುತ್ತಿದ್ದಾರೆ.

ಪಾಕಿಸ್ತಾನ ವಿರುದ್ಧ ಬುಮ್ರಾ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಅವರು ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬುಮ್ರಾ 15ನೇ ಓವರ್‌ನ ಮೊದಲ ಎಸೆತದಲ್ಲಿ ಮೊಹಮ್ಮದ್ ರಿಜ್ವಾನ್ (31) ಅವರ ವಿಕೆಟ್ ಪಡೆದರು. ಇದು ಪಂದ್ಯದ ಮಹತ್ವದ ತಿರುವಿಗೆ ಕಾರಣವಾಯಿತು. ಬುಮ್ರಾ 4 ಓವರ್‌ಗಳಲ್ಲಿ 14 ರನ್‌ಗಳಿಗೆ 3 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ಮಿಂಚಿದರು.

Story first published: Tuesday, June 11, 2024, 20:14 [IST]
Other articles published on Jun 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+