ಕ್ರಿಕೆಟರ್ ಸುರೇಶ್ ರೈನಾ ಮದುವೆ ಪೂರ್ವ ತಯಾರಿ ಚಿತ್ರಗಳು
ನವದೆಹಲಿ,ಮಾ.23: ಟೀಂ ಇಂಡಿಯಾದ ಪ್ರತಿಭಾವಂತ ಕ್ರಿಕೆಟರ್ ಸುರೇಶ್ ರೈನಾ ಅವರ ಮದುವೆ ಪೂರ್ವ ತಯಾರಿ ಆರಂಭಗೊಂಡಿದೆ. ಪಂಜಾಬಿ ಸಂಪ್ರದಾಯದಂತೆ ವಧುವಿನ ಮನೆಗೆ ರೈನಾ ಅವರ ಪೋಷಕರು ತೆರಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಸಂಭ್ರಮದ ಚಿತ್ರಗಳು ನಿಮಗಾಗಿ ಇಲ್ಲಿದೆ.
ಟೀಂ ಇಂಡಿಯಾ ವಿಶ್ವಕಪ್ 2015 ಟೂರ್ನಿಯಲ್ಲಿ ಮಾ.26ರಂದು ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ನಲ್ಲಿ ಸೆಣಸಲಿದೆ. ಭಾರತದ ಪ್ರಮುಖ ಆಟಗಾರ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿ ನಿಲ್ಲುವ ನಿರೀಕ್ಷೆಯಿದೆ.
ಎಂಎಸ್ ಧೋನಿ, ಯುವರಾಜ್ ಸಿಂಗ್ ಹಾಗೂ ಮಹಮ್ಮದ್ ಕೈಫ್ ಅವರಿಂದ ನಾನು ಸಾಕಷ್ಟು ಕಲಿತೆ. ನನ್ನ ವೃತ್ತಿ ಬದುಕಿನಲ್ಲಿ ಏಳು ಬೀಳು ಕಂಡಾಗ ನನ್ನ ಕುಟುಂಬ ಪರಿವಾರ, ಅಭಿಮಾನಿಗಳು ನನ್ನ ನೆರವಿಗೆ ಬಂದರು ಎಂದು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಲ್ ರೌಂಡರ್ ಸುರೇಶ್ ರೈನಾ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ರೈನಾ ಅವರ ಕಠಿಣ ಪರಿಶ್ರಮ, ಸರಳತೆ ಹಾಗೂ ವಿಧೇಯತೆಯನ್ನು ನಾವು ಮೈದಾನದಲ್ಲಿ ಕಾಣಬಹುದು. ವಿಶ್ವಕಪ್ ಟೂರ್ನಿ ನಂತರ ಟೀಂ ಇಂಡಿಯಾದ ಆಟಗಾರರು ಏ.3ರಂದು ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ನಡೆಯಲಿರುವ ಸುರೇಶ್ ರೈನಾ-ಪ್ರಿಯಾಂಕಾ ಚೌಧುರಿಮದುವೆಯಲ್ಲಿ ಆಡಿ ನಲಿಯಲು ಸಿದ್ಧರಾಗುತ್ತಿದ್ದಾರೆ. ಸದ್ಯಕ್ಕೆ ಇತ್ತೀಚೆಗೆ ದೆಹಲಿಯ ಹೋಟೆಲ್ ನಲ್ಲಿ ನಡೆದ 'ರೋಕಾ' ಸಮಾರಂಭದ ಚಿತ್ರಗಳು ಇಲ್ಲಿವೆ ನೋಡಿ....

ರೈನಾ ಅವರ ಬಾಲ್ಯದ ಗೆಳತಿ ಪ್ರಿಯಾಂಕಾ
ಸುರೇಶ್ ರೈನಾ ಹಾಗೂ ಪ್ರಿಯಾಂಕಾ ಚೌಧುರಿ ಇಬ್ಬರು ಬಾಲ್ಯದಿಂದಲೂ ಉತ್ತಮ ಗೆಳೆತನ ಹೊಂದಿದ್ದಾರೆ. ಗೆಳೆತನ ಈಗ ಮದುವೆ ಬಂಧನಕ್ಕೆ ನಾಂದಿ ಹಾಡಿದೆ.

ರೈನಾ ಅವರ ತಾಯಿ ಜೊತೆ ಪ್ರಿಯಾಂಕಾ
ರೈನಾ ಅವರ ತಾಯಿ ಜೊತೆ ನವವಧು ಪ್ರಿಯಾಂಕಾ. ರೈನಾ ಅವರ ತಾಯಿ ಹಾಗೂ ಪ್ರಿಯಾಂಕಾ ತಾಯಿ ಇಬ್ಬರು ಗೆಳೆತಿಯರು. ರೈನಾ ಅಪ್ಪ ಹಾಗೂ ಪ್ರಿಯಾಂಕಾ ಅಪ್ಪ ಕೂಡಾ ಮುರಾದ್ನಗರ್ ಆರ್ಡನನ್ಸ್ ಫ್ಯಾಕ್ಟರಿಯಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರಿಯಾಂಕಾ ವೃತ್ತಿಯಿಂದ ಬ್ಯಾಂಕರ್
ರೈನಾ ಅವರ ಮನದನ್ನೆ ಪ್ರಿಯಾಂಕಾ ವೃತ್ತಿಯಿಂದ ಬ್ಯಾಂಕರ್ ಆಗಿದ್ದು, ಸದ್ಯ ನೆದರ್ಲೆಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಿಯಾಂಕಾ ಫ್ಯಾಮಿಲಿ ಫ್ರೆಂಡ್
ಪ್ರಿಯಾಂಕಾ ಅವರ ಕುಟುಂಬ ಮೂಲತಃ ಉತ್ತರಪ್ರದೇಶದ ಬರೂತ್ ನವರು. ಸದ್ಯ ಮೀರತ್ ನಲ್ಲಿ ನೆಲೆಸಿದ್ದಾರೆ.

ರೋಕಾ ಸಮಾರಂಭದಲ್ಲಿ ಪ್ರಿಯಾಂಕಾ
ರೋಕಾ ಸಮಾರಂಭದಲ್ಲಿ ಪ್ರಿಯಾಂಕಾ ಅವರು ಕೆಂಪು ಬಣ್ಣದ ವಸ್ತ್ರ ಧರಿಸಿದ್ದರು. ಪ್ರಿಯಾಂಕಾ ಅವರಿಗೆ ಇಬ್ಬರು ಸೋದರರಿದ್ದು, ಇಬ್ಬರೂ ಇಂಜಿನಿಯರ್ ಆಗಿದ್ದಾರೆ.

ಏನಿದು ರೋಕಾ ಸಮಾರಂಭ
ಸಾಂಪ್ರದಾಯಿಕ ಪಂಜಾಬಿ ಮದುವೆಗಳು ರೋಕಾ ಸಮಾರಂಭದ ಮೂಲಕ ಆರಂಭಗೊಳ್ಳುತ್ತವೆ. ವರನ ಮನೆ ಕಡೆಯವರು ವಧುವಿನ ಮನೆಗೆ ತೆರಳಿ ಉಡುಗೊರೆ, ವಸ್ತ್ರ, ಆಭರಣ, ಸಿಹಿ ತಿನಿಸುಗಳನ್ನು ನೀಡುತ್ತಾರೆ. ಎರಡು ಕಡೆಯವರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಾದ ಮೇಲೆ ಥಾಕಾ ಸಮಾರಂಭ ನಡೆಯಲಿದೆ. ವಿವಾಹಕ್ಕೆ ಮುನ್ನ ಪ್ರಮುಖ ಧಾರ್ಮಿಕ ವಿಧಿ ವಿಧಾನವಾಗಿದೆ.

ಪಂಜಾಬಿ ಸಂಪ್ರದಾಯದಂತೆ ಮದುವೆ
ಪಂಜಾಬಿ ಸಂಪ್ರದಾಯದಂತೆ ಮದುವೆ ರೈನಾ- ಪ್ರಿಯಾಂಕಾ ಮದುವೆ ನಡೆಯಲಿದೆ. ರೋಕಾ, ಥಾಕಾ ನಂತರ ಕುರ್ಮಾಯಿ, ಛುನ್ನಿ ಸಮಾರಂಭಗಳು ನಡೆಯಲಿವೆ.

ಐಪಿಎಲ್ ಗೂ ಮುನ್ನ ಮದುವೆ
ಐಪಿಎಲ್ ಏ.8ರಿಂದ ಆರಂಭಗೊಳ್ಳಲಿದ್ದು ಏ.3ರಂದು ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ಸುರೇಶ್ ರೈನಾ ಅವರು ಪ್ರಿಯಾಂಕಾರನ್ನು ವರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications