IPL auction 2023: ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಸೇಲ್ ಆದ ಆಟಗಾರರು
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆಕ್ಷನ್ ನಡೆಯಲಿದೆ. ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಹರಾಜು ಪ್ರಕಿಯೆಯ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಈ ಬಾರಿ ಯಾರು ಜಾಕ್ ಪಾಟ್ ಹೊಡೆಯುತ್ತಾರೆ ಎಂಬ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ.
ಪ್ರಸಕ್ತ ವರ್ಷ ಆಟಗಾರರು ನೀಡಿದ ಪ್ರದರ್ಶನದ ಆಧಾರದ ಮೇಲೆ ಮಾಲೀಕರು ಅವರಿಗೆ ಹಣದ ಹೊಳೆಯನ್ನು ಹರಿಸುತ್ತಾರೆ. ಇನ್ನು ತಮ್ಮ ತಂಡದಲ್ಲಿ ಯಾವ ಸ್ಲಾಟ್ ಖಾಲಿ ಇದೆ ಎಂಬುದನ್ನು ನೋಡಿಕೊಂಡು ಮಾಲೀಕರು ಹಣ ಸುರಿಸುತ್ತಾರೆ. ಒಂದೊಮ್ಮೆ ಸ್ಟಾರ್ ಗಿರಿ ಪಕ್ಕದಲ್ಲಿ ಇದ್ದರೆ ಮುಗಿದೇ ಹೋಯಿತು, ಹಣ ನೀರಿನಂತೆ ಹರಿದು ಬರುತ್ತದೆ.

ಐಪಿಎಲ್ ಚುಟುಕು ಫಾರ್ಮೆಟ್ ಆಗಿದ್ದರಿಂದ ಆಲ್‌ರೌಂಡರ್‌ಗಳಿಗೆ ಬಹುಬೇಡಿಕೆ. ಇಲ್ಲಿ ಆಲ್‌ರೌಂಡರ್‌ಗಳು ಮಾಲೀಕರ ಚಿತ್ತ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಯಾಮ್ ಕರನ್ ಜೇಬು ಸೇರಿತ್ತು 18.50 ಕೋಟಿ
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರನ್ ಗೆ ಕೋಟಿ ಕೋಟಿ ಹಣ ಹರಿದು ಬಂದಿತ್ತು. 2022ರ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಯಾಮ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು.
ಕ್ಯಾಮರುನ್ ಗೆ 17.50 ಕೋಟಿ
ಇನ್ನು ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾದ ಎರಡನೇ ಆಟಗಾರ ಎಂಬ ಖ್ಯಾತಿ ಕ್ಯಾಮರುನ್ ಗ್ರೀನ್‌ಗೆ ಸಲ್ಲುತ್ತದೆ. ಇವರಿಗೆ ಮುಂಬೈ ಇಂಡಿಯನ್ಸ್ 17.50 ಕೋಟಿ ರೂಪಾಯಿ ನೀಡಿತ್ತು.
ಬೆನ್ ಸ್ಟೋಕ್ಸ್‌ಗೆ ಬಂಪರ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಕಳೆದ ಆವೃತ್ತಿಯ ಹರಾಜಿನಲ್ಲಿ ನೀರಿನಂತೆ ಹಣವನ್ನು ಸುರಿಸಿ, ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಖರೀದಿಸಿತ್ತು. ಸ್ಟೋಕ್ಸ್ ಖಾತೆಗೆ 16.25 ಕೋಟಿಹಣವನ್ಜು ಚೆನ್ನೈ ನೀಡಿತ್ತು.
ಕ್ರಿಸ್ ಮೋರಿಸ್ ಕೋಟ್ಯಾಧಿಪತಿ
2021ರಲ್ಲಿ ಕ್ರಿಸ್ ಮೋರಿಸ್ ಸಹ ತಮ್ಮ ಸ್ಥಿರ ಪ್ರದರ್ಶನದ ಬಲದಿಂದಲೇ ಎಲ್ಲರ ಚಿತ್ತ ಕದ್ದ ಆಟಗಾರ. ಇವರು 2021ರ ಐಪಿಎಲ್ ಹರಾಜಿನಲ್ಲಿ 16.25 ಕೋಟಿಯನ್ನು ಪಡೆಯುವ ಮೂಲಕ ದುಬಾರಿ ಆಟಗಾರ ಎಂಬ ಹಣೆ ಪಟ್ಟವನ್ನು ಪಡೆದಿದ್ದರು.
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಪ್ಲೇಯರ್ ನಿಕೋಲಸ್ ಪೂರನ್ ಅವರಿಗೆ ಲಖ್ನೋ ಸೂಪರ್ ಜೇಂಟ್ಸ್ ಹಣದ ಹೊಳೆಯನ್ನೇ ಹರಿಸಿತ್ತು. ಇವರಿಗೆ ಕಳೆದ ಹರಾಜಿನಲ್ಲಿ ಲಖ್ನೋ 16 ಕೋಟಿ ರೂಪಾಯಿ ನೀಡಿತ್ತು.

2015ರ ಐಪಿಎಲ್ ಹರಾಜಿನಲ್ಲಿ 16 ಕೋಟಿ ರೂ. ಬಿಡ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಳಯಕ್ಕೆ ಸೇರಿಸಿಕೊಂಡ ಯುವರಾಜ್ ಸಿಂಗ್ ಅವರನ್ನು ಸೇರಿಸಿಕೊಂಡಿತ್ತು. ಯುವರಾಜ್ ಸಿಂಗ್ ಐಪಿಎಲ್ 2015 ಹರಾಜಿನಲ್ಲಿ ಖರೀದಿಸಿದ ಅತ್ಯಂತ ದುಬಾರಿ ಆಟಗಾರ.
ತಮ್ಮ ಮಾರಕ ದಾಳಿಯಿಂದಲೇ ಹೆಸರುವಾಸಿಯಾಗಿರುವ ಪ್ಯಾಟ್ ಕಮಿನ್ಸ್, ಐಪಿಎಲ್ ಹರಾಜಿನಲ್ಲೂ ಮಿಂಚಿದ್ದರು. ಐಪಿಎಲ್ 2020 ಹರಾಜಿನಲ್ಲಿ 15.5 ಕೋಟಿ ರೂ.ಗೆ ಕೆಕೆಆರ್ ತಂಡವನ್ನು ಪ್ಯಾಟ್ ಕಮ್ಮಿನ್ಸ್ ಸೇರಿಕೊಂಡಿದ್ದರು.

ಇದೇ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶನ್ ಸಹ ಸ್ಥಾನ ಪಡೆದಿದ್ದಾರೆ. ಇವರಿಗೆ ಮುಂಬೈ 2022ರಲ್ಲಿ 15.25 ಕೋಟಿ ನೀಡಿತ್ತು. 2021ರ ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾದ ಆಟಗಾರ ಎಂಬ ಖ್ಯಾತಿ ಕೈಲ್ ಜೇಮಿಸನ್ ಪಾಲಾಗಿತ್ತು. ಇವರು 15 ಕೋಟಿಯನ್ನು ಪಡೆದಿದ್ದರು. ಈ ಲೀಸ್ಟ್‌ನಲ್ಲಿ ದೀಪಕ್ ಚಹಾರ್‌ಗೂ ಸ್ಥಾನವಿದೆ. ದೀಪಕ್ ಚಹಾರ್ 2022ರಲ್ಲಿ 14 ಕೋಟಿಯನ್ನು ಪಡೆದು ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications