Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Dipendra Singh Airee: ಯುವರಾಜ್ ಸಿಂಗ್ ವಿಶ್ವದಾಖಲೆ ಮುರಿದ ದೀಪೇಂದ್ರ ಸಿಂಗ್ ಐರಿ ಯಾರು? ಹಿನ್ನೆಲೆ ಏನು?

ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಪ್ರದರ್ಶನದ ಮೂಲಕ ನೇಪಾಳದ ಯುವ ಬ್ಯಾಟರ್ ದೀಪೇಂದ್ರ ಸಿಂಗ್ ಐರಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಇದಕ್ಕಾಗಿ ಕೇವಲ ಒಂಬತ್ತು ಎಸೆತಗಳಲ್ಲಿ ಈ ಸಾಧನೆ ಮಾಡಿದರು.

ಮಂಗೋಲಿಯಾ ವಿರುದ್ಧ ನೇಪಾಳದ ದೀಪೇಂದ್ರ ಸಿಂಗ್ ಐರಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವು, ಇಂಗ್ಲೆಂಡ್ ವಿರುದ್ಧದ 2007ರ ಟಿ20 ವಿಶ್ವಕಪ್ ಪಂದ್ಯದ ವೇಳೆ ಭಾರತದ ಯುವರಾಜ್ ಸಿಂಗ್ ನಿರ್ಮಿಸಿದ ದೀರ್ಘಾವಧಿ ವಿಶ್ವದಾಖಲೆಯನ್ನು ಅಳಿಸಿಹಾಕಿದರು.

Explore Dipendra Singh Airees Biography, Education, and Background about this Nepalese Cricketer

ಟಿ20 ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ್ದರು. ಇದರಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ 2023ರ ಏಷ್ಯನ್ ಗೇಮ್ಸ್‌ನಲ್ಲಿ ದೀಪೇಂದ್ರ ಸಿಂಗ್ ಐರಿ ಕೂಡ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದರಲ್ಲದೆ, ಕೇವಲ 9 ಎಸೆತಗಳಲ್ಲಿ ಅರ್ಧಶತಕ ಚಚ್ಚಿದರು.

ಮಂಗೋಲಿಯಾ ವಿರುದ್ಧ ಬೆರಗುಗೊಳಿಸುವ ಎಂಟು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ದೀಪೇಂದ್ರ ಸಿಂಗ್ ಐರಿ ಕೇವಲ 10 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದು ಪ್ರೇಕ್ಷಕರನ್ನು ರೋಮಾಂಚನಕಾರಿ ಅನುಭವ ನೀಡಿದರು.

Explore Dipendra Singh Airees Biography, Education, and Background about this Nepalese Cricketer

ನೇಪಾಳ ಕ್ರಿಕೆಟ್‌ನ ಪರಾಸ್ ಖಡ್ಕಾ ನಂತರದ ಯುಗದ ಉದಯೋನ್ಮುಖ ತಾರೆಯಾಗಿರುವ ದೀಪೇಂದ್ರ ಸಿಂಗ್ ಐರಿ ಅವರು ಬ್ಯಾಟ್‌ನೊಂದಿಗೆ ಅಸಾಧಾರಣ ಪರಾಕ್ರಮ ಹೊಂದಿದ್ದಾರೆ.

ದೀಪೇಂದ್ರ ಅವರ ಕ್ರಿಕೆಟ್ ಪ್ರಯಾಣವು 2016 ಅಂಡರ್-19 ವಿಶ್ವಕಪ್‌ನೊಂದಿಗೆ ಪ್ರಾರಂಭವಾಯಿತು ಮತ್ತು ಅವರು 17ನೇ ವಯಸ್ಸಿನಲ್ಲಿಯೇ ಹಿರಿಯರ ತಂಡಕ್ಕೆ ತ್ವರಿತವಾಗಿ ಆಯ್ಕೆಗೊಂಡು, 2017ರಲ್ಲಿ ಕೀನ್ಯಾ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು.

ದೀಪೇಂದ್ರ ಸಿಂಗ್ ಐರಿ ಸೇರ್ಪಡೆಯಿಂದ 2018ರಲ್ಲಿ ನೇಪಾಳದ ಏಕದಿನ ಸ್ಥಾನಮಾನದ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿತು. ಪ್ರಮುಖ ಆಟಗಾರನಾಗಿ ತಮ್ಮ ಖ್ಯಾತಿಯನ್ನು ಭದ್ರಪಡಿಸಿಕೊಂಡರು.

ಆರಂಭದಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್ ಎಂದು ಘೋಷಿಸಲಾಯಿತು. ಅವರ ಉಪಯುಕ್ತತೆಯು ಕಾಲಾನಂತರದಲ್ಲಿ ಮಧ್ಯಮ ಕ್ರಮಾಂಕಕ್ಕೆ ತಳ್ಳಿತು. ಪರಾಸ್ ಖಡ್ಕಾ ನೇಪಾಳ ತಂಡದ ನಾಯಕನಾಗಿದ್ದಾಗ, ಸಾಂದರ್ಭಿಕವಾಗಿ ಬೌಲರ್ ಅಗಿ ರೂಪುಗೊಂಡರು.

ದೀಪೇಂದ್ರ ಸಿಂಗ್ ಐರಿ ಅವರ ಮೊದಲ 22 ಟಿ20 ಪಂದ್ಯಗಳಲ್ಲಿ ಕೇವಲ ಒಂದೇ ಓವರ್ ಬೌಲಿಂಗ್ ಮತ್ತು ಏಕದಿನ ಪಂದ್ಯಗಳಲ್ಲಿ ಬೆರಳೆಣಿಕೆಯಷ್ಟು ಓವರ್ ಬೌಲಿಂಗ್ ಮಾಡಿದ್ದರು.

ಬಲಗೈ ಬ್ಯಾಟರ್‌ನ ಶಿಸ್ತಿನ ಆಫ್-ಸ್ಪಿನ್ ಬೌಲಿಂಗ್ ತಂಡದ ಕಾರ್ಯತಂತ್ರಕ್ಕೆ ದೊಡ್ಡ ಸಹಾಯವಾಯಿತು. ಅವರು ನಿಗದಿತ ಓವರ್‌ಗಳನ್ನು ಸತತವಾಗಿ ಪೂರ್ಣಗೊಳಿಸಿದ್ದಲ್ಲದೆ, ಎಕಾನಮಿ ದರವನ್ನು ಕಾಯ್ದುಕೊಂಡು ಉತ್ತಮ ವಿಕೆಟ್-ಟೇಕರ್ ಎಂದು ಸಾಬೀತುಪಡಿಸಿದರು.

ಈ ಬಹುಮುಖಿ ಆಟಗಾರನ ಸಾಮರ್ಥ್ಯಗಳು ಅವರ ಬ್ಯಾಟಿಂಗ್ ರೂಪದಲ್ಲಿ ಏರಿಳಿತಗಳ ಹೊರತಾಗಿಯೂ, ತಂಡದಲ್ಲಿ ಅವರ ಸ್ಥಾನದ ಬಗ್ಗೆ ಯಾವುದೇ ಅನುಮಾನಗಳನ್ನು ಹೋಗಲಾಡಿಸಿತ್ತು.

23 ವರ್ಷದ ದೀಪೇಂದ್ರ ಸಿಂಗ್ ಐರಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 52 ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. 19.75ರ ಸರಾಸರಿಯಲ್ಲಿ 889 ರನ್‌ಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 105 ರನ್ ಆಗಿದೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದೀಪೇಂದ್ರ ಸಿಂಗ್ ಅವರು 45 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 37.25ರ ಅದ್ಭುತ ಸರಾಸರಿ 136.84ರ ಸ್ಟ್ರೈಕ್‌ರೇಟ್‌ನಲ್ಲಿ 1155 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಅವರ ಅಜೇಯ 110 ರನ್‌ ಗರಿಷ್ಠ ಸ್ಕೋರ್ ಆಗಿದೆ.

Story first published: Wednesday, September 27, 2023, 17:09 [IST]
Other articles published on Sep 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+