ಕ್ರಿಕೆಟ್ ಅಂಗಳಿಂದ ಬೆಳ್ಳಿ ತೆರೆಗೆ ಈ ಸ್ಟಾರ್ ಪ್ಲೇಯರ್ ಶಿಫ್ಟ್
ಕ್ರಿಕೆಟ್ ಆಟಗಾರರಿಗೆ ಹಾಗೂ ನಟ, ನಟಿಯರಿಗೆ ಅವಿನಾಭಾವ ಸಂಬಧ. ಇಬ್ಬರನ್ನೂ ಭಾರತದಲ್ಲಿ ಅಭಿಮಾನಿಗಳು ಸ್ಟಾರ್ ಗಿರಿ ನೀಡಿದ್ದಾರೆ. ಅದೆಷ್ಟೋ ಕ್ರಿಕೆಟ್ ಆಟಗಾರರು ನಟಿಯರನ್ನು ಮದುವೆ ಆಗಿದ್ದಾರೆ. ಹೀಗಾಗಿ ಮೈದನಕ್ಕೂ ಹಾಗೂ ಬೆಳ್ಳಿ ತೆರೆಗೂ ನಂಟು ಬೆಳೆದಿದೆ. ಇನ್ನು ಹಲವು ಕ್ರಿಕೆಟ್ ಆಟಗಾರರು ತಮ್ಮ ವೃತ್ತಿಯ ಜೊತೆಗೆ ನಟನೆಯಲ್ಲಿ ಒಂದು ಕೈ ನೋಡಿದ್ದಾರೆ. ಈ ವೇಳೆ ಆಟಗಾರರು ಅಭಿಮಾನಿಗಳ ಮನಕ್ಕೆ ಹತ್ತಿರವಾಗುವ ಪ್ರಯತ್ನ ನಡೆಸಿರುತ್ತಾರೆ. ಈಗ ಬರುತ್ತಿರುವ ಸುದ್ದಿ ಸಹ ಕ್ರಿಕೆಟ್ ಆಟಗಾರ ಎರಡನೇ ಇನಿಂಗ್ಸ್ ಆರಂಭಿಸಲು ತಯಾರಿ ನಡೆಸಿದ್ದಾರೆ.
ಮೈದಾನದಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದ ಪ್ಲೇಯರ್, ಈಗ ತಮ್ಮ ನಟನೆಯ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಲು ಸಿದ್ಧತೆ ನಡೆಸಿದ್ದಾರೆ. ಮೈದಾನದಲ್ಲಿ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳಿಗೆ ಮುದ ನೀಡುತ್ತಿದ್ದ ಸ್ಟಾರ್ ಪ್ಲೇಯರ್ ಇನ್ನ ತಮ್ಮ ಖಡಕ್ ಡೈಲಾಗ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಈ ಸ್ಟಾರ್ ಪ್ಲೇಯರ್ ತಮ್ಮ ಖಡಕ್ ಹಾವಭಾವದಿಂದಲೇ ಸಖತ್ ಫೇಮಸ್. ಈ ಪ್ಲೇಯರ್ ಈಗಾಗಲೇ ಐಪಿಎಲ್‌ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಆಟಗಾರ. ಇವರೇ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್. ಐಪಿಎಲ್ ಪಂದ್ಯದ ವೇಳೆ ವಾರ್ನರ್ ಸಹ ತಮ್ಮ ಡಬ್ ಶಾಟ್‌ಗಳಿಂದ ಹೆಸರುವಾಸಿ. ಪುಷ್ಪಾದ ಫೇಮಸ್ ಡೈಲಾಗ್ ಡಬ್ ಶಾಟ್ ಮಾಡಿ ಭಾರತೀಯ ಸಿನಿ ಪ್ರೀಯರಿಗೆ ಹತ್ತಿರವಾಗಿದ್ದ ವಾರ್ನರ್ ಈಗ ಬಣ್ಣ ಹಚ್ಚಿಕೊಂಡ ನಟನೆ ಮಾಡಲಿದ್ದಾರೆ.
ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಸ್ಫೋಟಕ ಬ್ಯಾಟರ್
ಈ ಮೊದಲೇ ಇವರು ಬಣ್ಣ ಹಚ್ಚಿ ಬೆಳ್ಳಿ ತೆರೆಯಲ್ಲಿ ಅಬ್ಬರ ನಡೆಸುತ್ತಾರೆ ಎಂಬ ಮಾತುಗಳು ಇದ್ದವು. ಆದರೆ ಆ ಮಾತು ಸುಳ್ಳಾಗಿತ್ತು. ವಾರ್ನರ್ ಪುಷ್ಪಾ 2ದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾತುಗಳು ಇದ್ದವು. ಆದರೆ ಈ ಮಾತು ಬರೀ ಊಹಾಪೋಹಗಳು ಸುಳ್ಳಾದವು. ಆದರೆ ಈಗ ಇವರು ಬೆಳ್ಳಿ ಪರದೆಗೆ ಎಂಟ್ರಿ ನೀಡಲು ಮುಹೂರ್ತ ಫಿಕ್ಸ್ ಆಗಿದೆ.
ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ವಾರ್ನರ್ ರಾಬಿನ್ ಹುಡ್ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಈ ಚಿತ್ರದ ನಿರ್ಮಾಪಕರೇ ಬಹಿರಂಗ ಪಡಿಸಿದ್ದಾರೆ. ಈ ಚಿತ್ರದಲ್ಲಿ ನಿತಿನ್ ಹಾಗೂ ಶ್ರೀಲೀಲಾ ಜೋಡಿ ಮೋಡಿ ಮಾಡಲು ಸಿದ್ಧತೆ ನಡೆಸಿದೆ. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಾರ್ಯಕ್ರಮದಲ್ಲಿ ನಿರ್ಮಾಪಕ ಅಭಿಮಾನಿಗಳಿಗೆ ಒಂದು ಸರ್ಪರೈಸ್ ಇದೆ ಎಂದು ಹೇಳುತ್ತಲೇ, ಡೇವಿಡ್ ವಾರ್ನರ್ ಆತಿಥಿ ಪಾತ್ರದಲ್ಲಿ ನಟಿಸಿದ್ದಾಗಿ ಬಹಿರಂಗ ಪಡಿಸಿದ್ದಾರೆ. ಆದರೆ ಇದನ್ನು ಕಂಡು ನಿರ್ದೇಶಕರು ಬೇಸರ ಗೊಂಡರು. ಇವರು ಈ ಸುದ್ದಿಯನ್ನು ಬೇರೆ ರೀತಿ ರಿವೀಲ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ರು ಎಂದು ತಿಳಿದು ಬಂದಿದೆ.

ಡೇವಿಡ್ ವಾರ್ನರ್ ಬೆಳ್ಳಿ ತರೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಂತೂ ಇದೆ. ಇದಕ್ಕೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications