Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೈದಾನಕ್ಕೆ ನುಗ್ಗಿದ ದಕ್ಷಿಣ ಆಫ್ರಿಕಾದ ಇಬ್ಬಿಬ್ಬರು ನಾಯಕರು: ವಿಡಿಯೋ

Faf Du Plessis brings out a proxy captain for the toss in Ranchi

ರಾಂಚಿ, ಅಕ್ಟೋಬರ್ 19: ರಾಂಚಿಯಲ್ಲಿ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ದೃಶ್ಯವೊಂದು ಕಾಣಸಿಕ್ಕಿದೆ. ಪಂದ್ಯದ ಟಾಸ್ ವೇಳೆ ದಕ್ಷಿಣ ಆಫ್ರಿಕಾದ ಇಬ್ಬಿಬ್ಬರು ನಾಯಕರು ಮೈದಾನಕ್ಕೆ ಬಂದಿದ್ದರು. ದಕ್ಷಿಣ ಆಫ್ರಿಕಾ ನಾಯಕರ ಈ ನಡೆ ತಮಾಷೆಗೂ ಕಾರಣವಾಗಿದೆ.

ರಾಂಚಿಯಲ್ಲಿರುವ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಶನಿವಾರದ (ಅಕ್ಟೋಬರ್ 19) ಭಾರತ vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ನ ಟಾಸ್ ವೇಳೆ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ತಂಡದ ಸಹ ಆಟಗಾರ ತೆಂಬ ಬವುಮಾ ಅವರನ್ನು ಪ್ರಾಕ್ಸಿ ನಾಯಕನಾಗಿ ಜೊತೆಯಲ್ಲಿ ಕರೆತಂದಿದ್ದರು.

ಭಾರತ vs ದ.ಆಫ್ರಿಕಾ, 3ನೇ ಟೆಸ್ಟ್, 1ನೇ ದಿನ Live ಸ್ಕೋರ್‌ಕಾರ್ಡ್

1
46115

ಹಿಂದಿನ ಎರಡೂ ಟೆಸ್ಟ್‌ಗಳಲ್ಲಿ ಟಾಸ್‌ ಸೋತಿದ್ದ ಪ್ಲೆಸಿಸ್, ಈ ಬಾರಿಯಾದರೂ ಅದೃಷ್ಟ ಬದಲಾದೀತಾ ಅಂತ ತೆಂಬ ಬವುಮಾ ಅವರಲ್ಲಿ ಟಾಸ್ ಊಹಿಸಲು ಹೇಳಿದ್ದರು. ನಾಣ್ಯ ಚಿಮ್ಮುತ್ತಲೇ, ಪ್ರಾಕ್ಸಿ ನಾಯಕ ಬವುಮಾ ಹೆಡ್‌ ಎಂದು ಕೂಗಿದರು. ಆದರೆ ಅದು ಟೈಲ್ಸ್‌ ಎನಿಸಿತ್ತು. ಡು ಪ್ಲೆಸಿಸ್‌ಗೆ ಮತ್ತೆ ನಿರಾಶೆಯಾಯಿತು.

ಇಲ್ಲಿಗೆ ನಾಯಕನಾಗಿರುವ ಫಾ ಡು ಪ್ಲೆಸಿಸ್ ವಿದೇಶದಲ್ಲಿ ಒಟ್ಟಿಗೆ 7 ಟಾಸ್‌ಗಳನ್ನು ಸೋತಂತಾಗಿದೆ. ಏಷ್ಯಾದಲ್ಲಿ ಸತತ 9 ಬಾರಿ ಟಾಸ್ ಸೋತಂತಾಗಿದೆ. ಟಾಸ್ ಮುಗಿಯುತ್ತಲೇ ಪ್ರಾಕ್ಸಿ ನಾಯಕ, ಕುಳ್ಳು ಶರೀರದ ತೆಂಬ ಬವುಮಾ ಅವರಿಂದಲೂ ದಕ್ಷಿಣ ಆಫ್ರಿಕಾಕ್ಕೆ ಟಾಸ್ ಗೆಲ್ಲಿಲಾಗದಿದ್ದಿದ್ದು ಕಂಡು ನಿರೂಪಣೆಗೆ ನಿಂತಿದ್ದ ಮಾಜಿ ಕ್ರಿಕೆಟಿಗ, ಮುರಳಿ ಕಾರ್ತಿಕ್, ಮ್ಯಾಚ್ ರೆಫರಿ ರಿಚೀ ರಿಚರ್ಡ್ಸನ್ ಕೂಡ ಒಮ್ಮೆ ನಕ್ಕುಬಿಟ್ಟರು.

Story first published: Saturday, October 19, 2019, 15:23 [IST]
Other articles published on Oct 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+