ಮಹಿಳಾ ತಂಡ WPL ಚಾಂಪಿಯನ್ ಆಗಿದ್ದಕ್ಕೆ, ನಿಮ್ಮ ಮೇಲೆ ಒತ್ತಡವಿದೆಯಾ? ಫಾಫ್ ಹೇಳಿದ್ದೇನು?
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಕಾದಾಟ ನಡೆಯಿತು. ಈ ವೇಳೆ ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್‌ಗೆ ಒಂದು ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆ ಕೇಳುತ್ತಿದ್ದಂತೆ ಫಾಫ್ ನೀಡಿದ ಉತ್ತರ ಅಭಿಮಾನಿಗಳಿಗೆ ಖುಷಿ ನೀಡಿತು.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲು ಕಂಡಿತ್ತು. ಇದೀಗ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಸಮಯದಲ್ಲಿ ನಾಯಕ ಡು ಪ್ಲೆಸಿಸ್ ಅವರಿಗೆ ಮಹಿಳಾ ತಂಡದ ಪ್ರಶಸ್ತಿ ಗೆದ್ದಿದ್ದರಿಂ ಪುರುಷರ ತಂಡದ ಮೇಲೆ ಒತ್ತಡವಿದೆಯೇ? ಎಂದು ಪ್ರಶ್ನೆ ಕೇಳಲಾಯಿತು.

ಫಾಫ್ ಹೇಳಿದ್ದೇನು?
ಎರಡನೇ ಆವೃತ್ತಿಯ WPL ಇತ್ತೀಚಿಗಷ್ಟೇ ಕೊನೆಗೊಂಡಿತು. ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿತು. ಅಲ್ಲದೆ 16 ವರ್ಷಗಳಿಂದ ಪ್ರಶಸ್ತಿ ಗೆಲ್ಲದ ಬರವನ್ನು ಮಹಿಳಾ ತಂಡ ನೀಗಿಸಿದೆ. ಪ್ರಶಸ್ತಿ ಬರವನ್ನು ಮಹಿಳಾ ತಂಡ ನೀಗಿಸಿದ ಬೆನ್ನಲ್ಲೆ ಪುರುಷರ ತಂಡದ ಮೇಲೆ ಒತ್ತಡ ಇದೆಯಾ ಎಂದು ಪ್ರಶ್ನೆಯನ್ನು ಕೇಳಲಾಯಿತು.
ಇದಕ್ಕೆ ಉತ್ತರ ನೀಡಿದ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಫಾಫ್ ಡುಪ್ಲೇಸಿಸ್, ಆರ್‌ಸಿಬಿ ಪುರುಷರ ತಂಡ ಪ್ರಶಸ್ತಿ ಗೆದ್ದಿಲ್ಲ ಎಂದು ನೀವು ಹೇಳಬಹುದು. ಆದರೆ ಆರ್‌ಸಿಬಿ ಮಹಿಳಾ ತಂಡ ಟ್ರೋಫಿಗೆ ಮುತ್ತಿಟ್ಟಿದೆ. ಮಹಿಳೆಯ ಸಾಧನೆ ನಮಗೆ ಪ್ರೇರೇಪಿಸುತ್ತದೆ. ತಂಡದ ಎಲ್ಲ ಆಟಗಾರರು ಋತುವನ್ನು ಉತ್ತಮವಾಗಿ ಆರಂಭಿಸಲು ಉತ್ಸಾಹದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲು
ಐಪಿಎಲ್ 2024 ರ ಉದ್ಘಾಟನಾ ಪಂದ್ಯ ಚೆನ್ನೈ ಎಂ ಚಿದಂಬರಂ ಕ್ರೀಡಾಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಕಾದಾಟ ನಡೆಸಿದವು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ 6 ವಿಕೆಟ್‌ಗಳಿಂದ ಹೀನಾಯ ಸೋಲನುಭವಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications