Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾದ ಈ ಖ್ಯಾತ ಕ್ರಿಕೆಟಿಗ ಸಲಿಂಗಕಾಮಿಯಂತೆ

ನಾನು ನನ್ನ ಬಾಯ್ ಫ್ರೆಂಡ್ ಎಂದು ಒಪ್ಪಿಕೊಂಡ ಕ್ರಿಕೆಟಿಗ..!? | Oneinida Kannada
famous cricketer of Australia James Faulkner reveals he is a gay

ಸಿಡ್ನಿ, ಏಪ್ರಿಲ್ 30: ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟರ್ ಜೇಮ್ಸ್‌ ಫಕ್ನರ್‌ ತಾನೊಬ್ಬ ಸಲಿಂಗಕಾಮಿಯೆಂದು ಸಾಮಾಜಿಕ ಜಾಲತಾಣದಲ್ಲಿ ಧೈರ್ಯವಾಗಿ ಬಹಿರಂಗಪಡಿಸಿದ್ದಾರೆ.

ತಮ್ಮ ವೇಗದ ಬೌಲಿಂಗ್, ಅಬ್ಬರದ ಬ್ಯಾಟಿಂಗ್ ನಿಂದಾಗಿ ಖ್ಯಾತರಾಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್‌ ಫಕ್ನರ್ ಅವರು ಇಂದು ತಮ್ಮ ಸಲಿಂಗಕಾಮದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಈ ವರೆಗೆ ಅವರು ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ.

ಇಂದು ತಮ್ಮ 29ನೇ ಜನ್ಮ ದಿನ ಆಚರಿಸಿಕೊಂಡ ಜೇಮ್ಸ್‌ ಫಕ್ನರ್, ತಾವು, ತಾಯಿ ಮತ್ತು ತಮ್ಮ 'ಬಾಯ್‌ಫ್ರೆಂಡ್‌' ಜೊತೆಗೆ ಭೋಜನ ಸವಿಯುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜೇಮ್ಸ್‌ ಫಕ್ನರ್‌ 'ಬಾಯ್‌ಫ್ರೆಂಡ್‌' ಜೊತೆಗೆ ಭೋಜನ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಐದು ವರ್ಷದಿಂದಲೂ ತಾವು ಜೊತೆಯಾಗಿರುವುದಾಗಿಯೂ ಬರೆದುಕೊಂಡಿದ್ದಾರೆ.

ಜೇಮ್ಸ್‌ ಫಾಕ್ನರ್ ಅವರು ಯಶಸ್ವಿ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದರು, ಐಪಿಎಲ್‌ ನಲ್ಲಿಯೂ ಆಡಿದ್ದ ಫಾಕ್ನರ್ ಅವರು, ಇತ್ತೀಚೆಗೆ ಕಳಪೆ ಫಾರ್ಮ್‌ನಿಂದಾಗಿ ಆಸ್ಟ್ರೇಲಿಯಾ ತಂಡದಿಂದ ಹೊರಗೆ ಉಳಿದಿದ್ದಾರೆ, ಐಪಿಎಲ್‌ನಲ್ಲೂ ಆಡುತ್ತಿಲ್ಲ.

69 ಏಕದಿನ ಪಂದ್ಯ ಆಡಿರುವ ಅವರು 96 ವಿಕೆಟ್ ಗಳಿಸಿದ್ದಾರೆ ಮತ್ತು 1033 ರನ್ ಗಳಿಸಿದ್ದಾರೆ. 60 ಐಪಿಎಲ್‌ ಪಂದ್ಯ ಆಡಿರುವ ಫಕ್ನರ್‌ 59 ವಿಕೆಟ್ ಗಳಿಸಿ 527 ರನ್ ಗಳಿಸಿದ್ದಾರೆ. ಅವರು ಕೇವಲ ಒಂದು ಟೆಸ್ಟ್‌ ಪಂದ್ಯವನ್ನಷ್ಟೆ ಆಡಿದ್ದಾರೆ.

ಇತ್ತೀಚೆಗೆ ಸಲಿಂಗಕಾಮದ ಗುಟ್ಟನ್ನು ಬಹಿರಂಗಗೊಳಿಸುವ ಧೈರ್ಯವನ್ನು ಹಲವು ಕ್ರೀಡಾಪಟುಗಳು ತೋರುತ್ತಿದ್ದಾರೆ. ಇತ್ತೀಚೆಗಷ್ಟೆ ನ್ಯೂಜಿಲೆಂಡ್‌ನ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ಪರಸ್ಪರ ವಿವಾಹವಾದರು.

ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಸ್ಟಿವನ್ ಡೇವಿಸ್ ಅವರು ಸಹ ತಾವು ಸಲಿಂಗ ಕಾಮಿ ಎಂಬುದನ್ನು ಬಹಿರಂಗಪಡಿಸಿದರು. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ನಾಯಕಿ ಸಹ ತಾವು ಮಹಿಳೆಯರಲ್ಲಿ ಆಸಕ್ತಿಹೊಂದಿರುವುದನ್ನು ಬಹಿರಂಗಪಡಿಸಿದ್ದರು.

Story first published: Tuesday, April 30, 2019, 1:13 [IST]
Other articles published on Apr 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+