For Quick Alerts
ALLOW NOTIFICATIONS  
For Daily Alerts
 

ಗೌತಮ್ ಗಂಭೀರ್ ಸೇರಿದಂತೆ ಭಾರತದ ಪ್ರಸಿದ್ಧ ಕೋಚ್‌ಗಳ ವೃತ್ತಿಜೀವನದ ಬಗ್ಗೆ ತಿಳಿಯಿರಿ

ಜುಲೈ 12 ಶುಕ್ರವಾರ, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಂದ ತೆರವಾಗಿದ್ದ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಆಗುವುದು ಸುಲಭವಲ್ಲ.

ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಆಗಿ ನೇಮಕಗೊಂಡವರು ಹಲವು ಚಾಲೆಂಜ್‌ಗಳನ್ನು ಎದುರಿಸುವುದರ ಜೊತೆಗೆ ಅದರಲ್ಲಿ ಯಶಸ್ಸು ಕಾಣುವುದು ಮುಖ್ಯವಾಗಿರುತ್ತದೆ. ಇಂತಹ ದೊಡ್ಡ ಜವಾಬ್ದಾರಿ ಹೊತ್ತಿರುವ ಗಂಭೀರ್‌ ಅವರು ಈ ಹಿಂದೆ ಆಟಗಾರನಾಗಿ ಭಾರತ ತಂಡಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇವರೊಂದಿಗೆ ಭಾರತದ 3 ಪ್ರಸಿದ್ಧ ಕೋಚ್‌ಗಳ ವೃತ್ತಿಜೀವನದ ಬಗ್ಗೆ ಇಲ್ಲಿದೆ ಮಾಹಿತಿ

Famous Indian Coaches Careers full details

ಗಂಭೀರ್‌ 58 ಟೆಸ್ಟ್, 147 ಏಕದಿನ ಮತ್ತು 37 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಸ್ಪೋಟಕ ಬ್ಯಾಟರ್‌ ಆಗಿದ್ದಾರೆ. ಗಂಭೀರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 20 ಶತಕಗಳನ್ನು ಒಳಗೊಂಡಂತೆ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

2007ರ ಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಚಾಂಪಿಯನ್‌ ಆಗಲು ಗಂಭೀರ್‌ ಅವರ ಕೊಡುಗೆ ಮರೆಯುವಾಗಿಲ್ಲ. ಇದಲ್ಲದೆ, ಶ್ರೀಲಂಕಾ ವಿರುದ್ಧ 2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಪರ ಅಬ್ಬರ ಗಂಭೀರ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ ಆಡಿದ್ದರು.

ಭಾರತ 2008ರ ಏಷ್ಯಾ ಕಪ್‌ನ ಫೈನಲಿಸ್ಟ್ ಆಗಲು ಮತ್ತು 2010ರಲ್ಲಿ ಏಷ್ಯಾ ಕಪ್‌ ಚಾಂಪಿಯನ್ ಆಗಲು ಗಂಭೀರ್‌ ನೆರವಾಗಿದ್ದರು.

ಅನಿಲ್ ಕುಂಬ್ಳೆ

ಟೀಮ್‌ ಇಂಡಿಯಾದ ಹೆಡ್‌ ಕೋಚ್‌ಗಳಲ್ಲಿ ಕನ್ನಡಿಗ ಅನಿಲ್‌ ಕುಂಬ್ಳೆ ಹೆಸರು ಪ್ರಮುಖವಾಗಿದೆ. ಕುಂಬ್ಳೆ ಅವರು 2016-17ರಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

ಅನಿಲ್‌ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್‌ಗಳೊಂದಿಗೆ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಕುಂಬ್ಳೆ 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮಾರ್ಚ್ 2017ರಲ್ಲಿ ಆಸ್ಟ್ರೇಲಿಯಾದ ಭಾರತ ಪ್ರವಾಸದ ಸಮಯದಲ್ಲಿ ಅಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕೋಚ್ ಕುಂಬ್ಳೆ ನಡುವೆ ಮನಸ್ತಾಪ ಉಂಟಾಗಿತ್ತು. ವಾಸ್ತವವಾಗಿ, ಸರಣಿಯ ಮೂರನೇ ಟೆಸ್ಟ್‌ನಲ್ಲಿ, ಕುಂಬ್ಳೆ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಬೇಕೆಂದು ಬಯಸಿದ್ದರು.

ಆದರೆ ಕೊಹ್ಲಿ ಅದನ್ನು ಸ್ಪಷ್ಟವಾಗಿ ನಿರಾಕರಿಸಿದರು. ಇದರ ನಂತರ, 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಟೀಮ್‌ ಇಂಡಿಯಾ ಸೋಲಿನ ನಂತರ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಕಪಿಲ್ ದೇವ್

ಭಾರತಕ್ಕೆ 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದು ಕೊಟ್ಟ ಕಪಿಲ್‌ ದೇವ್‌ ಅವರು ಕ್ರಿಕೆಟ್‌ ಲೋಕದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಿಂದ ಕೆತ್ತಿದ್ದಾರೆ. ಭಾರತದ ಶ್ರೇಷ್ಠ ಆಲ್ ರೌಂಡರ್ ಕಪಿಲ್ ದೇವ್ ಅವರು ಅಕ್ಟೋಬರ್ 1999 ರಿಂದ ಆಗಸ್ಟ್ 2000 ರವರೆಗೆ 10 ತಿಂಗಳ ಕಾಲ ಭಾರತೀಯ ತಂಡದ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸಿದ್ದರು.

ಕಪಿಲ್ ದೇವ್ ಅವರು 434 ವಿಕೆಟ್‌ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ವೇಗದ ಬೌಲರ್ ಆಗಿದ್ದಾರೆ. ಅಲ್ಲದೆ ಏಕದಿನ ಪಂದ್ಯಗಳಲ್ಲಿ 235 ವಿಕೆಟ್ ಪಡೆದಿದ್ದಾರೆ.

ಬೌಲಿಂಗ್‌ನ ಹೊರತಾಗಿ, ಕಪಿಲ್ ಬ್ಯಾಟಿಂಗ್‌ನಲ್ಲೂ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 5,248 ರನ್ ಗಳಿಸಿದ್ದಲ್ಲದೆ, ಅವರು ಏಕದಿನದಲ್ಲಿ 3,500 ರನ್ ಗಳಿಸಿದ್ದಾರೆ.

ರಾಹುಲ್ ದ್ರಾವಿಡ್

ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು. ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 52.31 ರ ಅತ್ಯುತ್ತಮ ಸರಾಸರಿಯೊಂದಿಗೆ 13,288 ರನ್ ಗಳಿಸಿದ್ದಾರೆ.

ದ್ರಾವಿಡ್‌ ಅವರು 36 ಶತಕಗಳು ಮತ್ತು 5 ದ್ವಿಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ 344 ಏಕದಿನ ಪಂದ್ಯಗಳನ್ನು ಆಡಿದ್ದು, 83 ಅರ್ಧ ಶತಕಗಳನ್ನು ಹೊರತುಪಡಿಸಿ 12 ಶತಕಗಳೊಂದಿಗೆ 10,889 ರನ್ ಹೊಡೆದಿದ್ದಾರೆ.

ದ್ರಾವಿಡ್ 2021 ರಿಂದ 2024 ರವರೆಗೆ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದರು. ಇವರ ಅಧಿಕಾರಾವಧಿಯಲ್ಲಿ ಭಾರತವು ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿತು.

ಕೋಚ್ ಆಗಿ ದ್ರಾವಿಡ್ ಅವರ ದೊಡ್ಡ ಸಾಧನೆಯೆಂದರೆ ಇತ್ತೀಚೆಗೆ ಮುಕ್ತಾಯಗೊಂಡ 2024ರ ಟಿ20 ವಿಶ್ವ ಭಾರತವನ್ನು ಚಾಂಪಿಯನ್ ಮಾಡಿರುವುದು.

Story first published: Friday, July 12, 2024, 8:35 [IST]
Other articles published on Jul 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+