Rohit Sharma: ಹಿಟ್‌ಮ್ಯಾನ್ ಆಟೋಗ್ರಾಫ್ ಪಡೆಯಲು 10 ವರ್ಷ ಕಾದಿದ್ದ ಅಭಿಮಾನಿ; ಕೊನೆಗೂ ಕನಸು ನನಸಾಗಿದ್ದೇಗೆ?
ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ, ರೋಹಿತ್ ಶರ್ಮಾ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಅವರನ್ನು ನೋಡಲು ಕೋಟ್ಯಾಂತರ ಅಭಿಮಾನಿಗಳು ಕನಸು ಕಾಣುತ್ತಿದ್ದಾರೆ. ಆದರೆ, ಇಲ್ಲಿವರೆಗೆ ರೋಹಿತ್ ಶರ್ಮಾ ನೋಡುವ ಭಾಗ್ಯ ಎಷ್ಟೋ ಅಭಿಮಾನಿಗಳಿಗೆ ಸಿಕ್ಕಿಲ್ಲ. ಕೆಲವೊಮ್ಮೆ ರೋಹಿತ್ ಶರ್ಮಾ ಸಿಕ್ಕಾಗ ಆಟೋಗ್ರಾಫ್ ಮತ್ತು ಸೆಲ್ಫಿಗಾಗಿ ಪೈಪೋಟಿ ಏರ್ಪಟ್ಟಿದೆ. ಇಂತಹದ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಈ ವಿಡಿಯೀ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಬಿಸಿಸಿಐ ತನ್ನ ಅಧಿಕೃತ ಟ್ವೀಟರ್ (ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿದೆ.
ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಡಿಲೇಡ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ರೋಹಿತ್ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಇಂದು ಕೂಡ ಹಿಟ್‌ಮ್ಯಾನ್‌ನಿಂದ ಆಟೋಗ್ರಾಫ್ ಪಡೆಯುವುದು ತಪ್ಪುತ್ತದೆ ಎಂದು ಭಾವಿಸಿದ ಅಭಿಮಾನಿಯೊಬ್ಬರು ತಮ್ಮ ಮನದಾಳ ಮಾತುಗಳಿಂದ ರೋಹಿತ್ ಶರ್ಮಾ ಅವರ ಗಮನ ಸೆಳೆದಿದ್ದಾರೆ.

ಅಭಿಮಾನಿ ಹೇಳಿದ್ದೇನು?
'ರೋಹಿತ್ ಭಾಯ್ ಹತ್ತು ವರ್ಷಗಳು ಕಳೆದು ಹೋದವು. ರೋಹಿತ್ ಭಾಯ್ ಮುಂಬೈ ಚಾ ರಾಜ' ಎಂದು ಕೂಗಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನಗು ನಗುತ್ತಾ ಆ ವ್ಯಕ್ತಿ ಕಡೆಗೂ ಹೋಗಿ ಆಟೋಗ್ರಾಫ್ ಹಾಕಿದ್ದಾರೆ. ಈ ವಿಡಿಯೀ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
'ಒಂದು ದಶಕದ ಕಾಯುವಿಕೆ ಕೊನೆಗೊಂಡಿದೆ. ರೋಹಿತ್ ಶರ್ಮಾ ಅವರಿಗಾಗಿ ಅಭಿಮಾನಿಯೊಬ್ಬ ಒಂದು ದಶಕದಿಂದ ಕಾದಿದ್ದರು. ಅವರಿಗೆ ರೋಹಿತ್ ಆಟೋಗ್ರಾಫ್ ಸಿಕ್ಕಿದೆ. ನಿನ್ನೆ (ಭಾನುವಾರ) ಅವರಿಗೆ ಅದೃಷ್ಟದ ದಿನವಾಗಿದೆ' ಎಂದು ಬಿಸಿಸಿಐ ಬರೆದುಕೊಂಡಿದೆ.
ರೋಹಿತ್ ಹೆಗಲಿಗೆ ಜವಾಬ್ದಾರಿ
ಪರ್ತ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿದ್ದರು. ಆದರೆ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹಿಟ್‌ಮ್ಯಾನ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಸೆಣಸಾಡುತ್ತಿವೆ.
ಎರಡನೇ ಟೆಸ್ಟ್ ಯಾವಾಗ?
ಡಿಸೆಂಬರ್ 6 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಆರಂಭವಾಗಲಿದೆ. ಈ ಪಂದ್ಯ ಹಗಲು-ರಾತ್ರಿ ಟೆಸ್ಟ್ ಆಗಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 9.30 ಗಂಟೆಗೆ ಪಂದ್ಯ ಶುರುವಾಗಲಿದೆ.ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಉತ್ತಮ ಆರಂಭ ಮಾಡಿದೆ. ಮತ್ತೊಂದೆಡೆ, ಕಳೆದು ಒಂದು ದಶಕದಿಂದ ಟ್ರೋಫಿ ಹುಡುಕಾಟದಲ್ಲಿರುವ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications