Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿಮ್ಮ ನೆಚ್ಚಿನ ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ

ದುಬೈ, ಡಿ.22: ವಿಶ್ವಕಪ್ 2015ರ ರಾಯಭಾರಿಯಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡುವುದರ ಜೊತೆಗೆ ಟೂರ್ನಿ ಪ್ರಚಾರಕ್ಕೆ ಐಸಿಸಿ ಮುಂದಾಗಿದೆ.

ಫೆ14ರಂದು ಕ್ರೈಸ್ಟ್ ಚರ್ಚ್ ನಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಐಸಿಸಿ ವಿಶ್ವಕಪ್ 2015 ಟೂರ್ನಿಗೆ ಚಾಲನೆ ಸಿಗಲಿದೆ. ಉಳಿದಿರುವ ಎರಡು ತಿಂಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.

ಕಳೆದ 10 ಆವೃತ್ತಿಯ ಟೂರ್ನಿಯಿಂದ 100ಕ್ಕೂ ಅಧಿಕ ಶ್ರೇಷ್ಠ ಆಟಗಾರರ ಪೈಕಿ ಸಾರ್ವಕಾಲಿಕ ವಿಶ್ವಕಪ್ ಶ್ರೇಷ್ಠ XI ಆಯ್ಕೆ ಮಾಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಆಟಗಾರರ ವಿಶ್ವಕಪ್ ಸಾಧನೆ ಜೊತೆಗೆ ಕೆಲವು ಸರಳ ನಿಯಮಗಳನ್ನು ಕೂಡಾ ನೀಡಲಾಗಿದೆ.

Fans can pick 'Greatest World Cup XI'

ಆಯ್ಕೆಯಾದ ತಂಡದಲ್ಲಿ ಇಬ್ಬರು ಬ್ಯಾಟ್ಸ್ ಮನ್, ಒಬ್ಬ ಆಲ್ ರೌಂಡರ್, ಒಬ್ಬ ವಿಕೆಟ್ ಕೀಪರ್, ಇಬ್ಬರು ವೇಗಿಗಳು ಇರುವುದು ಕಡ್ಡಾಯ. ಹೀಗೆ ಆಯ್ಕೆ ಮಾಡಿದ ತಂಡವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಬಹುದು. ನಿಮಗೆ ಅದೃಷ್ಟವಿದ್ದರೆ ಐಸಿಸಿಯ ಕೊಡುಗೆಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ಫೇಸ್ ಬುಕ್, ಟ್ವಿಟ್ಟರ್ ಅಥವಾ ಜಿಪ್ಲಸ್ ನಲ್ಲಿ ನಿಮ್ಮ ತಂಡವನ್ನು ಹಂಚುವಾಗ #CWCGreatestXI ಎಂಬ ಹ್ಯಾಶ್ ಟ್ಯಾಗ್ ಬಳಸುವುದನ್ನು ಮರೆಯಬೇಡಿ. ನಿಮ್ಮ ತಂಡ ಆಯ್ಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ ನಿಮಗೆ ನೆರವಾಗಲು ಮ್ಯಾಥ್ಯೂ ಹೇಡನ್ ಆಯ್ಕೆ ಮಾಡಿರುವ ತಂಡದ ಪಟ್ಟಿ ಕೆಳಗೆ ನೀಡಲಾಗಿದೆ ಒಮ್ಮೆ ಕಣ್ಣಾಡಿಸಿ ನಂತರ ನಿಮ್ಮ ಆಯ್ಕೆ ಮುಂದುವರೆಸಿ

1. ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ) ವಿಕೆಟ್ ಕೀಪರ್
2. ವೀರೇಂದರ್ ಸೆಹ್ವಾಗ್ (ಭಾರತ)
3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) (ನಾಯಕ)
4. ಸಚಿನ್ ತೆಂಡೂಲ್ಕರ್ (ಭಾರತ)
5. ಬ್ರಿಯಾನ್ ಲಾರಾ ( ವೆಸ್ಟ್ ಇಂಡೀಸ್)
6. ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ)
7. ಶೇನ್ ವಾರ್ನ್ (ಆಸ್ಟ್ರೇಲಿಯಾ)
8. ವಾಸೀಂ ಅಕ್ರಂ (ಪಾಕಿಸ್ತಾನ)
9. ವಕಾರ್ ಯೂನಿಸ್ (ಪಾಕಿಸ್ತಾನ)
10. ಮುತ್ತಯ್ಯ ಮುರಳೀದಹರನ್ (ಶ್ರೀಲಂಕಾ)
11. ಗ್ಲೆನ್ ಮೆಗ್ ಗ್ರಾಥ್ (ಆಸ್ಟ್ರೇಲಿಯಾ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+