For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ 'ಬಿಲ್' ವಿವಾದ: ಹಿಟ್‌ಮ್ಯಾನ್ ಬೆಂಬಲಕ್ಕೆ ನಿಂತ ಅಭಿಮಾನಿಗಳು

Fans Come Out and support Rohit sharma After Cricketer Gets Controversy of beef confume

ಮೆಲ್ಬರ್ನ್‌ನ ರೆಸ್ಟೋರೆಂಟ್‌ನಲ್ಲಿ ಟೀಮ್ ಇಂಡಿಯಾದ ಅಭಿಮಾನಿ ಬಿಲ್ ಪಾವತಿಸಿದ ಬಳಿಕ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡ ನಂತರ ಒಂದಲ್ಲ ಎರಡು ವಿವಾದಗಳಿಗೆ ರೋಹಿತ್ ಶರ್ಮಾ ಹಾಗೂ ಉಳಿದ ನಾಲ್ವರು ಆಟಗಾರರು ಗುರಿಯಾಗಿದ್ದಾರೆ. ಜೈವಿಕ ಸುರಕ್ಷತಾ ವಲಯವನ್ನು ಬೇಧಿಸಿದ್ದಾರೆ ಎನ್ನಲಾದ ಪ್ರಕರಣದ ಜೊತೆಗೆ ಬಿಲ್ ಪಾವತಿಸಿದ ಅಭಿಮಾನಿ ಹಂಚಿಕೊಂಡಿರುವ ಬಿಲ್‌ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಬಿಲ್‌ನಲ್ಲಿ ಆಟಗಾರರು ಬೀಫ್ ಸೇವನೆ ಮಾಡಿದ್ದಾರೆ ಎಂಬ ವಿಚಾರವೂ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಹಿರಿಯ ಆಟಗಾರ ರೋಹಿತ್ ಶರ್ಮಾ ಸಹಿತ ಐವರು ಆಟಗಾರರ ಮೇಲೆ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ರೋಹಿತ್ ಶರ್ಮಾ ಅವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಬೆಂಬಲವೂ ದೊರೆತಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಟ್ವಿಟ್ಟರ್‌ನಲ್ಲಿ #IStandWithRohit ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗಿತ್ತು.

ರೋಹಿತ್ ಶರ್ಮಾ ಅವರ ಅಭಿಮಾನಿಗಳು ಶರ್ಮಾ ಟೀಮ್ ಇಂಡಿಯಾಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳುವ ಮೂಲಕ ಹಿರಿಯ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.

ರೋಹಿತ್ ಶರ್ಮಾ ಫಿಟ್‌ಸೆಸ್ ಕಾರಣದಿಂದಾಗಿ ಟೀಮ್ ಇಂಡಿಯಾಗೆ ತಡವಾಗಿ ಸೇರಿಕೊಂಡಿದ್ದರು. ಸೀಮಿತ ಓವರ್‌ಗಳ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದ ಶರ್ಮಾ ಕ್ವಾರಂಟೈನ್ ಕಾರಣದಿಂದಾಗಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದಲೂ ಹೊರಗುಳಿದಿದ್ದರು.

Story first published: Monday, January 4, 2021, 11:40 [IST]
Other articles published on Jan 4, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+