'ದಾದಾ' ಗಂಗೂಲಿ ಹುಟ್ಟುಹಬ್ಬಕ್ಕೆ ವೈವಿಧ್ಯಮಯ ಶುಭಹಾರೈಕೆ

ಬೆಂಗಳೂರು, ಜುಲೈ 08: ಅಭಿಮಾನಿಗಳ ಪಾಲಿನ 'ದಾದಾ', ರಾಯಲ್ ಬೆಂಗಾಲ್ ಹುಲಿ ಎಂದು ಕರೆಸಿಕೊಳ್ಳುವ ಮಾಜಿ ಕ್ರಿಕೆಟಿಗ, ಸೌರವ್ ಗಂಗೂಲಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಗಂಗೂಲಿ ಅವರ 46ನೇ ಹುಟ್ಟುಹಬ್ಬವನ್ನು ಟ್ವಿಟ್ಟರ್ ಬಳಕೆದಾರರು, ಮಾಜಿ, ಹಾಲಿ ಕ್ರಿಕೆಟರ್ ಗಳು ವಿವಿಧ ಶೈಲಿಯ ಟ್ವೀಟ್ ಮೂಲಕ ಆಚರಿಸಿದ್ದಾರೆ.
ಅತಿಯಾದ ಶಿಸ್ತಿನಿಂದ ಒಂದೇ ದಾರಿಯಲ್ಲಿ ಸಾಗುತ್ತಿದ್ದ ಟೀಂ ಇಂಡಿಯಾಕ್ಕೆ ಆಕ್ರಮಣಕಾರಿ ಮನೋಭಾವ, ಜವಾಬ್ದಾರಿಯುತ ಆಟ, ಸಮರ್ಥ ನಾಯಕತ್ವ ಗುಣಗಳನ್ನು ತುಂಬಿದವರು ಸೌರವ್.
ಭಾರತೀಯ ಕ್ರಿಕೆಟ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೆಲವೇ ಕೆಲವು ನಾಯಕರಲ್ಲೊಬ್ಬರು.
ಟೀಕಾಕಾರರಿಗೆ ಮೈದಾನದಲ್ಲೇ ಸಮರ್ಥವಾಗಿ ಉತ್ತರ ನೀಡಿ, ವಿಭಿನ್ನವಾಗಿ ಯಶಸ್ಸನ್ನು ಸೆಲೆಬ್ರೆಟ್ ಮಾಡಿದ ಗಂಗೂಲಿಗೆ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಕೆಕೆಆರ್, ಐಎಸ್ಎಲ್ ಕಡೆಯಿಂದಲೂ ಶುಭ ಹಾರೈಕೆ ಸಲ್ಲಿಸಲಾಗಿದೆ.
'ಈ ಮುಂಚೆ ಮೈದಾನದ ಆಫ್ ಸೈಡ್ ನಲ್ಲಿ ದೇವರಿದ್ದರು. ನಂತರ ಗಂಗೂಲಿ ಬಂದರು' ಎಂಬ ರಾಹುಲ್ ದ್ರಾವಿಡ್ ಹೇಳಿಕೆ ಈ ದಿನ ಹೆಚ್ಚು ಷೇರ್ ಆಗುತ್ತಿದೆ.
ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ಗಂಗೂಲಿ ಒಟ್ಟಾರೆ, 18,575ರನ್ ಕಲೆ ಹಾಕಿದರು.
183ರನ್ ವೈಯಕ್ತಿಕ ಅತ್ಯಧಿಕ ರನ್ ಗಳಿಸಿದ್ದರು. 2003ರ ವಿಶ್ವಕಪ್ ಫೈನಲ್ ತನಕ ತಂಡವನ್ನು ಕೊಂಡೊಯ್ದರು.
Story first published: Sunday, July 8, 2018, 21:50 [IST]
Other articles published on Jul 8, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications