Ind vs Aus 3rd Test: ಇದು ನಿವೃತ್ತಿಯಾಗುವ ಸಮಯ! ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳ ಟೀಕೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ ಗಳಿಸಲು ವಿಫಲವಾಗಿರುವ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರು ರನ್ ಉತ್ತಮವಾಗಿ ರನ್ ಗಳಿಸಲು ಪರದಾಡಿದ್ದಾರೆ.
ಇಂದೋರ್ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 13 ರನ್‌ಗಳಿಗೆ ಔಟ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಕೊಹ್ಲಿ ಮತ್ತೆ ರನ್ ಗಳಿಸಲು ವಿಫವಾದ ನಂತರ ಅಭಿಮಾನಿಗಳು ಕೋಪಗೊಂಡಿದ್ದಾರೆ.
ವಿರಾಟ್ ಕೊಹ್ಲಿ ಬಾರ್ಡರ್ ಗವಾಸ್ಕರ್ ಸರಣಿಯ ಮೂರು ಪಂದ್ಯಗಳಿಂದ ಕೇವಲ 111 ರನ್ ಗಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರು 44 ರನ್ ಗಳಿಸಿದ್ದು ಸರಣಿಯಲ್ಲಿ ಅವರ ವೈಯಕ್ತಿ ಗರಿಷ್ಠ ರನ್‌ಗಳಾಗಿದೆ. ಕಳೆದ 9 ಟೆಸ್ಟ್‌ಗಳಿಂದ ವಿರಾಟ್ ಕೊಹ್ಲಿ ಅರ್ಧಶತಕವನ್ನು ಗಳಿಸಲು ವಿಫಲರಾಗಿದ್ದಾರೆ. 2022ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ಕೊನೆಯದಾಗಿ ಅರ್ಧಶತಕ ಗಳಿಸಿದ್ದರು.
ಏಕದಿನ ಮತ್ತು ಟಿ20 ಮಾದರಿಯಲ್ಲಿ ಅವರು ಶತಕ ಗಳಿಸುವ ಮೂಲಕ ತಮ್ಮ ಫಾರ್ಮ್‌ಗೆ ಮರಳಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಕೂಡ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್ ಬರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೊಹ್ಲಿ ಆ ನಿರೀಕ್ಷೆಯನ್ನು ನಿಜವಾಗಿಸುವಲ್ಲಿ ವಿಫಲರಾಗಿದ್ದಾರೆ.

ನಿವೃತ್ತಿಯಾಗುವ ಬಗ್ಗೆ ಚಿಂತಿಸಲಿ
ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕೆಂದು ಕೆಲವು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದು, "ಕೊಹ್ಲಿಯನ್ನು ಈಗ ಟೆಸ್ಟ್ ತಂಡದಿಂದ ಹೊರಹಾಕಬೇಕಾಗಿದೆ. ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೊರೆಯಾಗಿದ್ದಾರೆ. ಅಹಮದಾಬಾದ್ ಟೆಸ್ಟ್ ಮಾತ್ರ ಮುಂದಿನ ಭರವಸೆ" ಎಂದು ಹೇಳಿದ್ದಾರೆ.
ಇನ್ನೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, "ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ, ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವ ಸಮಯ ಬಂದಿದೆ, ಭಾರತ ಏನಾದರೂ ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್ ಫೈನಲ್ ತಲುಪಿದರೆ, ಅದು ನಿಮ್ಮ ಕೊನೆಯ ಟೆಸ್ಟ್ ಪಂದ್ಯವಾಗಲಿ" ಎಂದು ಹೇಳಿದ್ದಾರೆ.

10 ನಿಮಿಷ ಕೂಡ ಬ್ಯಾಟಿಂಗ್ ಮಾಡಲಿಲ್ಲ
ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದು, "ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು 10 ದಿನಗಳಿಂದ ಕಾದಿದ್ದೇವೆ ಆದರೆ ಅವರು 10 ನಿಮಿಷ ಕೂಡ ಬ್ಯಾಟಿಂಗ್ ಮಾಡಲಿಲ್ಲ" ಎಂದು ಟೀಕಿಸಿದ್ದಾರೆ.
ಇನ್ನೊಬ್ಬರು ಟ್ವೀಟ್ ಮಾಡಿದ್ದು, "ವಿರಾಟ್ ಕೊಹ್ಲಿಗೆ ಏನಾಗಿದೆ? ಅವರು ಈಗ ನಿವೃತ್ತಿ ಬಗ್ಗೆ ಚಿಂತನೆ ಮಾಡಬೇಕು ಇಲ್ಲವಾದರೆ ಬಿಸಿಸಿಐ ಅವರನ್ನು ತಂಡದಿಂದ ಹೊರಗಿಡುವ ಬಗ್ಗೆ ಯೋಚಿಸಲಿ" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications