ಸಿಕ್ಕ ಅವಕಾಶವನ್ನೂ ಹಾಳು ಮಾಡಿಕೊಂಡ ಮನೀಷ್ ಪಾಂಡೆ; ಕೇಳಿ ಬರುತ್ತಿವೆ ವಿದಾಯದ ಮಾತುಗಳು!

ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿರುವ ಶಿಖರ್ ಧವನ್ ನೇತೃತ್ವದ ಭಾರತ ಬಿ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದೆ. ಮೊದಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಸೋಲು ಕಂಡಿತು.
ಇನ್ನು ಈ ಸರಣಿ ಆರಂಭವಾಗುವ ಮುನ್ನ ಭಾರತದ ಮನೀಷ್ ಪಾಂಡೆ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿದ್ದವು. ಮನೀಷ್ ಪಾಂಡೆಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಗುತ್ತಿದ್ದದ್ದು ತೀರಾ ಕಡಿಮೆ, ಹೀಗೆ ಸಿಕ್ಕ ಅವಕಾಶಗಳಲ್ಲಿ ಮನೀಷ್ ಪಾಂಡೆ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಸದಾ ಎಡವುತ್ತಿದ್ದರು. ಹೀಗಾಗಿ ಈ ಬಾರಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮನೀಷ್ ಪಾಂಡೆ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಒಳ್ಳೆಯ ಫಾರ್ಮ್‌ಗೆ ಬರುವ ನಿರೀಕ್ಷೆಯಿತ್ತು. ಆದರೆ ಈ ಸರಣಿಯಲ್ಲಿಯೂ ಸಹ ಮನೀಷ್ ಪಾಂಡೆ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಎಲ್ಲಾ 3 ಏಕದಿನ ಪಂದ್ಯಗಳಲ್ಲೂ ಆಡುವ ಅವಕಾಶವನ್ನು ಪಡೆದ ಮನೀಷ್ ಪಾಂಡೆ ಗಳಿಸಿದ್ದು ಕ್ರಮವಾಗಿ 26, 37 ಹಾಗೂ 11 ರನ್‌ಗಳು. ಎಲ್ಲಾ ಪಂದ್ಯಗಳಲ್ಲಿಯೂ ಅವಕಾಶ ಸಿಕ್ಕರೂ ಸಹ ಮನೀಷ್ ಪಾಂಡೆ ಗಳಿಸಿದ್ದು ಒಟ್ಟು ಕೇವಲ 74 ರನ್ ಮಾತ್ರ. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಮನೀಷ್ ಪಾಂಡೆ ಮುಂದಿನ ದಿನಗಳಲ್ಲಿ ಮತ್ತೆ ಅವಕಾಶವನ್ನು ಪಡೆದುಕೊಳ್ಳುವುದು ತೀರಾ ಕಷ್ಟ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್
ಮನೀಷ್ ಪಾಂಡೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ನೀಡುವ ಯೋಚನೆಯನ್ನು ಬಿಸಿಸಿಐ ನಡೆಸುತ್ತಿತ್ತು. ಆದರೆ ಮನೀಷ್ ಪಾಂಡೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಹಾಳು ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್ ಆಗುತ್ತಿದ್ದಾರೆ.

ಒಂದೇ ಒಂದು ಅರ್ಧ ಶತಕವನ್ನೂ ಸಿಡಿಸಲಿಲ್ಲ
ಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶವನ್ನು ಪಡೆದ ಮನೀಷ್ ಪಾಂಡೆ ಯಾವುದೇ ಪಂದ್ಯದಲ್ಲಿಯೂ ಅರ್ಧಶತಕವನ್ನು ಬಾರಿಸಲಿಲ್ಲ. ಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮನೀಷ್ ಪಾಂಡೆ ಸಿಡಿಸಿದ 37 ರನ್ ಇಡೀ ಸರಣಿಯಲ್ಲಿ ಅವರು ಬಾರಿಸಿದ ಅತಿ ಹೆಚ್ಚು ರನ್ ಆಗಿದೆ.

ಪಾಂಡೆ ಕ್ರಿಕೆಟ್ ಕೆರಿಯರ್ ಇಷ್ಟೇ ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ಪಾಂಡೆ ನೀರಸ ಪ್ರದರ್ಶನ ನೀಡಿದ ನಂತರ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಕ್ರೀಡಾಭಿಮಾನಿಗಳು ಪಾಂಡೆ ಕ್ರಿಕೆಟ್ ಜೀವನ ಇಲ್ಲಿಗೆ ಮುಗಿದಂತೆ ಎನ್ನುತ್ತಿದ್ದಾರೆ. ಈ ಸರಣಿಯಲ್ಲಿ ಮನೀಷ್ ಪಾಂಡೆ ನೀಡಿದ ನೀರಸ ಪ್ರದರ್ಶನವೇ ಅವರ ಹಾದಿಗೆ ಮುಳ್ಳಾಗಿ ಪರಿಣಮಿಸಲಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications